ನಮ್ಮ ದೇಶದ ಮಾಜಿ ಉಪಪ್ರಧಾನಿ ಎಲ್ ಕೆ ಅಡ್ವಾಣಿ ಅವರ ಆತ್ಮಕತೆ ‘ಮೈ ಕಂಟ್ರಿ ಮೈ ಲೈಫ್’ನ ಚಂದದ ಮುಖಪುಟ ಇದೆ. ಲಾಹೋರಿನ ಕ್ರೈಸ್ತ ಮಿಷನರಿಗಳಲ್ಲಿ ಒಂದರಿಂದ ದ್ವಿತೀಯ ಪಿಯುಸಿ ವರೆಗೆ ಓದಿದ ಎಲ್ ಕೆ ಅಡ್ವಾಣಿಯವರೇ ಮತಾಂತರ ಆಗಲಿಲ್ಲ. ಆದರೆ ಕ್ರಿಶ್ಚಿಯನ್ನರ ಉದ್ದೇಶ ಇದಾಗಿರಲಿಲ್ಲ. ಸೇವೆಯೇ ಪರಮೋಚ್ಚ ಉದ್ದೇಶ ಆಗಿತ್ತು” ಎಂದು ಸಂಪನ್ಮೂಲ ವ್ಯಕ್ತಿ ವಕೀಲರು ಸುಧೀರಕುಮಾರ ಮಾರೊಳ್ಳಿ ಅವರು ಹೇಳಿದರು.
ಹಾವೇರಿ ಪಟ್ಟಣದಲ್ಲಿ ಇಂದು ಸಿ.ಎಸ್.ಐ ಗುರುಕೃಪ ದೇವಾಲಯದಲ್ಲಿ ಕರ್ನಾಟಕ ಕ್ರೈಸ್ತ ಸಮುದಾಯ ಅಭಿವೃದ್ಧಿ ನಿಗಮ ಕರ್ನಾಟಕ ಸರಕಾರ ಹಾಗೂ ಜಿಲ್ಲಾ ಕ್ರಿಶ್ಚಿಯನ್ ಸಮುದಾಯದ ವತಿಯಿಂದ ಕ್ರಿಸ್ಮಸ್ ಸಹಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಂದುವರೆದು “ನನ್ನ ಮಕ್ಕಳನ್ನ ಜಿಯೋಸೇಫ್ ಸಂಸ್ಥೆಯಲ್ಲಿಯೇ ಓದಿಸ್ತಿದ್ದೇನೆ. ನನ್ನ ಅಮ್ಮ ಅಲ್ಲಿಯೇ ಓದಿದ್ದು. ನನ್ನ ಅಮ್ಮನನ್ನು ಮತಾಂತರ ಮಾಡಿದ್ದರೆ ನಾನೂ ಒಬ್ಬ ಪಿಲಿಪ್, ಮತ್ತೊಂದು ಆಗ್ತಿದ್ದೆ. ಆದರೆ ಇದರ ಉದ್ದೇಶ ಇದಾಗಿರಲಿಲ್ಲ. ಸೇವೆಯೇ ಪರಮೋಚ್ಚ ಉದ್ದೇಶ ಕ್ರಿಶ್ಚಿಯನ್ ಆಗಿತ್ತು” ಎಂದು ಅಭಿಪ್ರಾಯ ವ್ಯಕ್ತಪಡಿಸಿರು.
“ಕುವೆಂಪು ಅವರು ಬರೆದಿರುವ ನಾಡಗೀತೆಗೆ ಇವತ್ತಿಗೆ ನೂರು ವರ್ಷ ತುಂಬಿದೆ. ಸ್ವತಂತ್ರ ಪೂರ್ವದಲ್ಲಿಯ ಪ್ರಮುಖ ರಾಜಕೀಯ ಚಟುವಟಿಕೆಗಳು ಈ ದೇಶದಲ್ಲಿ ನಡೆಯುವ ಮುಂಚೆ 1925ರಲ್ಲಿ ಕುವೆಂಪು ಅವರು ನಾಡಗೀತೆಯಲ್ಲಿ ತಮ್ಮ ಭಾವವನ್ನು ಪ್ರಕಟ ಮಾಡಿ, ಒಂದು ಸಾಲನ್ನು ಅದರಲ್ಲಿ ಬರೆಯುತ್ತಾರೆ. ‘ಜ್ಯಾತ್ಯಾತೀತ’ ಎಂಬ ಪದ ರಾಜಕೀಯ ಶಬ್ದ ಅಲ್ಲ; ಆದ್ಯಾತ್ಮಿಕ ಶಬ್ದ ಆಗಿದೆ. ಎಲ್ಲವೂ ಒಳಗೊಳ್ಳುವದೇ ಜ್ಯಾತ್ಯಾತೀತತೆ ಆಗಿದ್ದು, ಎಲ್ಲರನ್ನೂ ವಿಘಟನೆ ಮಾಡುವುದೇ ಮತಾಂಧತೆ ಆಗಿದೆ. ಅಂಬೇಡ್ಕರ್ ಅವರು ಸಂವಿಧಾನ ಬರೆದು ‘ಜ್ಯಾತ್ಯಾತೀತ’ ಸ್ಪರ್ಶ ಕೊಡ್ತಾರೆ ಅಂದರೆ, ನಮ್ಮ ಕನ್ನಡ ಕವಿ ಕುವೆಂಪು ಹೇಗೆ ಗೊತ್ತಿತ್ತು ಅಂದರೆ ಈ ನೆಲದ ಶಕ್ತಿ” ಎಂದು ಹೇಳಿದರು.
“ಬಸವಣ್ಣ, ಕನಕದಾಸ ಒಗ್ಗೂಡುವವುದನ್ನು ಹೇಳಿದರು, ಅದನ್ನೇ ಕುವೆಂಪು ಹೇಳಿದರು. ಅದನ್ನೇ ಅಂಬೇಡ್ಕರ್ ಅವರು ಸಂವಿಧಾನನದಲ್ಲಿ ಹೇಲಿದ್ದಾರೆ” ಎಂದು ಹೇಳಿದರು.
“ಬ್ರಿಟಿಷರ ಮುಂಚೆ ನಮ್ಮ ದೇಶವನ್ನು ಡಚ್ಚರು, ಪ್ರೆಂಚರು, ಪೋರ್ಚಿಗಿಸರು ಎಲ್ಲ ಕ್ರೈಸ್ತ ಮತ ಅವಲಂಬಿಗಳೇ. ಅವರೆಲ್ಲರೂ ಮತಾಂತರವನ್ನೇ ಆಡಳಿತ ಮಾಡುತ್ತಾ ಹೋಗಿದ್ದರೆ, ಈ ದೇಶದಲ್ಲಿ ಕ್ರೈಸ್ತರ ಜನಸಂಖ್ಯೆ 3ರಷ್ಟು ಇರುತ್ತಿರಲಿಲ್ಲ, 93ರಷ್ಟು ಇರುತ್ತಿತ್ತು. ಈ ದೇಶದಲ್ಲಿ ಹಿಂದೂ ಎಂದು ಪರಿಭಾವಿಸಿ ಬದುಕಬಹುದಾದಂತ ಜನಪರಂಪರೆಯೇ ಅತೀ ಹೆಚ್ಚು ಈ ದೇಶದಲ್ಲಿ ಇದೆ ಎನ್ನುವ ವಾಸ್ತವ ಸತ್ಯವನ್ನು ಸಮಾಜದ ಎದುರು ಗಟ್ಟಿಯಾಗಿ ಹೇಳಬೇಕು” ಎಂದರು.
“ಆಗ ಗಾಂಧೀಜಿಯವರ ಹತ್ತಿರ ಆಗೀನ ಅಧಿಕಾರಿ ಹೋಗಿ ಡ್ರಾಫ್ಟಿಂಗ್ ಚೆರ್ಮನ್ ಮಾಡಬೇಕು. ಯಾರನ್ನ ಮಾಡಬೇಕು ಅಂತ ಕೇಳಿದಾಗ ಅಂಬೇಡ್ಕರ್ ಅವರ ಹೆಸರನ್ನು ಸೂಚಿಸುತ್ತಾರೆ. ಅಂಬೇಡ್ಕರ್ ಅವರ ನೇತೃತ್ವಕ್ಕೆ ಸಂವಿಧಾನರ ರಚನೆಗೆ ಕೊಟ್ಟಿದ್ದರ ಕಾರಣಕ್ಕಾಗಿಯೇ ಗಾಂಧಿಯನ್ನು ಕೊಲ್ಲುವ ಕೆಲಸ ನಮ್ಮ ದೇಶದಲ್ಲಿ ನಡೆಯಿತು” ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಉದ್ಘಾಟಿಸಿ ಮಾತನಾಡಿದ ಅವರು, “ತಮ್ಮ ತಮ್ಮ ಮನೆಗಳಲ್ಲಿ ಹಬ್ಬ ಆಚರಿಸುತ್ತಾರೆ. ಆದರೆ ಹಬ್ಬದ ಮುಂಚೆ ಆಚರಿಸುವುದು ಬಹಳ ಔಚಿತ್ಯ. ಇಂತಹ ಕಾರ್ಯಕ್ರಮ ಎಲ್ಲರನ್ನು ಒಗ್ಗೂಡಿಸಲು ಪೂರಕವಾಗಿದೆ. ಇಂತಹ ಕಾರ್ಯಕ್ರಮಗಳು ಹೆಚ್ಚಾಗಬೇಕು. ಜೊತೆಗೆ ನಿಮ್ಮ ಬೇಡಿಕೆಗಳಿಗೆ ಸ್ಪಂದಿಸುವೆ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕ್ರೈಸ್ತ ಸಮುದಾಯ ಅಭಿವೃದ್ಧಿ ನಿಗಮ ನಿರ್ದೇಶಕರು ಪ್ರಶಾಂತ ಜತ್ತಣ್ಣನವರ ಮಾತನಾಡಿ, “ಪ್ರೀತಿ, ಬೆಳೆಕು ಹಾಗು ಜೀವನ ಈ ಮೂರು ಕ್ರಿಸ್ತನ ಭೋಧನೆಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು” ಎಂದರು.
ಕಾರ್ಯಕ್ರಮದಲ್ಲಿ ರೋಶನಿ ಟ್ರಸ್ಟ್ ನಿರ್ದೇಶಕರು ಹಾಗು ಟಾಸ್ಕ್ ಫೋರ್ಸ್ ಕಮೀಟಿ ಸದಸ್ಯರು ಅನಿತಾ ಡಿಸೋಜ ಅವರು ಪ್ರಸ್ತಾವಿಕ ಮಾತುಗಳನ್ನಾಡಿದರು. ವೇದಿಕೆ ಮೇಲೆ ವಕೀಲರು ವಿನೋದ, ಡಾಕ್ಟರ್ ಸಂಜಯ್ ದೇವದರ್, ಕಿರಣ ನಾಯಕ ಇನ್ನೂ ಅನೇಕರು ಉಪಸ್ಥಿತರಿದ್ದರು.





