ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಯೋಜನೆಯಡಿ ಶುಕ್ರವಾರ ದಿ 31ರಂದು ನಗರದ ಸುಡಗಾಡು ಸಿದ್ದರ ಗುಡಿಸಲಲ್ಲಿ ಗ್ರಂಥಾಲಯಗಳಿಗೆ ಚಾಲನೆ ದೊರೆಯಿತು.
ಹಾವೇರಿ ಪಟ್ಟಣದ ಮಂಜುನಾಥ ನಗರದಲ್ಲಿ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಪ್ರೊ.ವಾಯ್.ಬಿ. ಆಲದಕಟ್ಟಿ ಅವರ ಸ್ವಗೃಹದಲ್ಲಿ ಮತ್ತು ನಾಗೇಂದ್ರಮಟ್ಟಿಯ ಸುಡುಗಾಡಸಿದ್ಧರ ಕಾಲೋನಿಯಲ್ಲಿ ಈ ಬಾರಿಯ ಗಣರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪುರಸ್ಕೃತರಾದ ಶೆಟ್ಟಿ ವಿಭೂತಿ ಅವರ ಮನೆಯಲ್ಲಿ ಎರಡನೆಯ ಗ್ರಂಥಾಲಯಕ್ಕೆ ಚಾಲನೆ ಪಡೆದವು.
ವಿಶೇಷವೆಂದರೆ, ಗುಡಿಸಲಿನಲ್ಲಿ ಗ್ರಂಥಾಲಯ ಆರಂಭವಾದದ್ದು ಕೇಳಿದರೇನೇ ಅಚ್ಛರಿ ಆಗಬಹುದು. ಇಂತಹದೊAದು ಅವಕಾಶ ಆದದ್ದು ಇಲ್ಲಿಯ ತರಳುಬಾಳು ಬಡಾವಣೆಯ ಹಿಂಭಾಗದಲ್ಲಿರುವ ಸುಡುಗಾಡ ಸಿದ್ಧ ಅಲೆಮಾರಿ ಜನಾಂಗದ ಗುಡಿಸಲಿಗೆ ಗ್ರಂಥಾಲಯ ಬಂದದ್ದು.
ಎರಡೂ ಗ್ರಂಥಾಲಯಗಳನ್ನು ಹಿರಿಯ ಕಾರ್ಮಿಕ ನಾಯಕ, ನಿವೃತ್ತ ಹೆಸ್ಕಾಂ ಅಧಿಕಾರಿ ವಿಜಯಕುಮಾರ ಮುದಕಣ್ಣನವರ ಉದ್ಘಾಟಿಸಿ ಮಾತನಾಡಿದ ಅವರು, ‘ಜೋಪುಡಿಗಳಲ್ಲಿ ಅರಿವು ಹುಟ್ಟಬೇಕಾದರೆ, ಅದು ಅಕ್ಷರ ಮತ್ತು ಪುಸ್ತಕಗಳಿಂದ ಮಾತ್ರ ಸಾಧ್ಯ ಎಂದೂ ಪುಸ್ತಕ ನೋಡದ, ಪುಸ್ತಕ ಮುಟ್ಟದ ಜನಗಳ ಹತ್ತಿರ ಗ್ರಂಥಾಲಯ ಬರುವುದು ಒಂದು ಬದಲಾವಣೆಯ ಸಂಕೇತ” ಎಂದರು.
ಅಧ್ಯಕ್ಷತೆ ವಹಿಸಿದ ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಲಿಂಗಯ್ಯ ಹಿರೇಮಠ ಮಾತನಾಡಿ, “ಶೆಟ್ಟಿ ವಭೂತಿ ತಮ್ಮ ಜನರಿಗಾಗಿ ಪುಸ್ತಕ ಪ್ರಾಧಿಕಾರದ ಗ್ರಂಥಾಲಯವನ್ನು ತನ್ನ ಪುಟ್ಟ ಜೋಪುಡಿಯಲ್ಲಿ ಆರಂಭಿಸಿದ್ದು, ಅತ್ಯಂತ ಕ್ರಾಂತಿಕಾರಿಕ ಹೆಜ್ಜೆ” ಎಂದರು.
ಶೆಟ್ಟಿ ವಿಭೂತಿ ಮಾತನಾಡಿ ಮನೆಗೊಂದು ಗ್ರಂಥಾಲಯ ಯೋಜನೆ ನಮಗೊಂದು ಒಳ್ಳೆಯ ಅವಕಾಶ, ನನ್ನ ಜನಗಳಿಗೆ ಪುಸ್ತಕ ಪ್ರೀತಿ ಹುಟ್ಟಿಸಲು ಕಾರಣವಾದ ಪ್ರಾಧಿಕಾರಕ್ಕೆ ನನ್ನ ನೂರು ಕೃತಜ್ಞತೆಗಳು ಎಂದು ಹೇಳಿದರು.
ಈ ಸುದ್ದಿ ಒದಿದ್ದೀರಾ? ಗದಗ | ಗಾಂಧಿ ಕೊಂದ ವಂಶಜರು ಇಂದು ಅಧಿಕಾರಕ್ಕೆ ಬಂದಿರುವರು: ಬಾಲು ರಾಠೋಡ
ಉದ್ಘಾಟನೆಯಲ್ಲಿ ಡಿ.ವಾಯ್.ಎಫ್.ಆಯ್ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಾಯ್.ಬಿ. ಆಲದಕಟ್ಟಿ, ಪರಿಮಳಾ ಜೈನ್, ಭಾರತ ಜ್ಞಾನ ವಿಜ್ಞಾನ ಸಮಿತಿಯ ರೇಣುಕಾ ಗುಡಿಮನಿ, ದೇವಸ್ಥಾನ ಸಮಿತಿಯ ಶೇಕಪ್ಪ ಮಠಪತಿ, ಶ್ರೀಮತಿ ಕವಿತಾ ಮುದಕಣ್ಣನವರ, ಹಾಸ್ಟೇಲ್ ವಾರ್ಡನ್ ಕಿರಣ ಮಾತನಾಡಿದರು.
ದಲಿತ ಸಂಘರ್ಷ ಸಮಿತಿಯ ಉಡಚಪ್ಪ ಮಾಳಗಿಮನಿ, ಡಾ.ಅಂಬಿಕಾ ಹಂಚಾಟೆ, ಶ್ರೀಮತಿ ರೇಣುಕಾ ಯಲ್ಲಪ್ಪ ಆಲದಕಟ್ಟಿ, ಜುಬೇದಾ ನಾಯಕ್, ಶಿಗ್ಗಾವಿ ಗುಡಿಸಲು ನಿವಾಸಿಗಳ ಅಧ್ಯಕ್ಷ ಈರಣ್ಣ, ಪೃಥ್ವಿರಾಜ ಬೆಟಗೇರಿ ಅನೇಕರು ಉಪಸ್ಥಿತರಿದ್ದರು. ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಸ್ವಾಗತಿಸಿದರು. ಗ್ರಂಥಾಲಯ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯ ಎಸ್ ಆರ್ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ದಮ್ಮಕ್ಕಾ ಶೆಟ್ಟಿ ವಿಭೂತಿ ವಂದಿಸಿದರು.





