ಹಾವೇರಿ | ಗಾಂಧೀಜಿಯವರ ಸ್ವಾತಂತ್ರಯ ಸಮಾನತೆ ಮತ್ತು ಸೌಹಾರ್ದತೆಗಳ ಸಂದೇಶವನ್ನು ಸಾರುವ ನಾಟಕ

Date:

ಹಳ್ಳಿಯೊಂದಕ್ಕೆ ಪಾದಯಾತ್ರೆಯ ಮೂಲಕ ಬರುವ ಗಾಂಧೀಜಿಯವರು ಗಿಡವೊಂದನ್ನು ನೆಡುತ್ತಾರೆ. ಅದು ಬೆಳೆದಂತೆ ಅದರ ಫಲಗಳನ್ನು ಬೇರೆ ಬೇರೆ ಜನಪ್ರತಿನಿಧಿಗಳು ದುರೂಪಯೋಗ ಪಡಿಸಿಕೊಳ್ಳುತ್ತ, ಗಾಂಧೀ ಗಿಡಕ್ಕೆ ಕಾವಲು ಮತ್ತು ಬೇಲಿಯನ್ನು ಹಾಕುತ್ತಾರೆ. ಕೊನೆಯಲ್ಲಿ ಜನ ಸಾಮಾನ್ಯರ ವಿರೋಧಿಸಿ ಗಾಂಧಿ ಗಿಡವನ್ನು ಮುಕ್ತಗೊಳಿಸುತ್ತಾರೆ. ನಾಟಕದಲ್ಲಿ ಗಾಂಧೀಜಿಯವರ ಸ್ವಾತಂತ್ರ ಸಮಾನತೆ ಮತ್ತು ಸೌಹಾರ್ದತೆಗಳ ಸಂದೇಶವನ್ನು ಸಾರುವಲ್ಲಿ ನಾಟಕ ಯಶಸ್ವಿಯಾಯಿತು. ಇದು ನಾಟಕದ ಒಟ್ಟು ಸಾರವಾಗಿದೆ.

ಹಾವೇರಿ ಪಟ್ಟಣದ ಕೆ.ಲ್.ಇ ಗುದ್ಲೆಪ್ಪ ಕಾಲೇಜಿನಲ್ಲಿ ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಬೆಂಗಳೂರು, ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾ ವಿದ್ಯಾಲಯ ಹಾಗೂ ರಾಷ್ಟಿçÃಯ ಸೇವಾ ಯೋಜನೆ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಒಂದು ವಾರದ ಗಾಂಧೀ ವಿಚಾರ ಪ್ರಣೀತ ರಾಜ್ಯ ಪಟ್ಟದ ಎನ್.ಎಸ್.ಎಸ್. ನಾಯಕತ್ವ ತರಬೇತಿ ಶಿಬಿರದಲ್ಲಿ ಹಾವೇರಿ ಕಲಾ ಬಳಗ ಅಭಿನಯಿಸಿದ ಗಾಂಧಿ ಗಿಡ ನಾಟಕ ಪ್ರದರ್ಶನವಾಯಿತು.

ನಾಟಕದಲ್ಲಿ 30ಕ್ಕೂ ಹೆಚ್ಚು ಕಲಾವಿದರು ಅಭಿನಯಿಸಿದ್ದರು. ಗಾಂಧೀ ಪಾತ್ರಧಾರಿ ಕೆ.ಎನ್ ಜಾನ್ವೇಕರ ಶಕ್ತಿ ಕೇಂದ್ರವಾಗಿದ್ದರು. ಇನ್ನುಳಿದಂತೆ ಸರ್ವಶ್ರೀ ತಿಪ್ಪೇಸ್ವಾಮಿ, ಮುತ್ತುರಾಜ ಹಿರೇಮಠ, ಬಸವರಾಜ ಎಸ್, ಚೈತ್ರಾ ಕೊರವರ, ಧನುಶ್, ಅನಿತ ಮಂಜುನಾಥ, ನೇತ್ರಾ ಅಂಗಡಿ, ಅಂಬಿಕಾ ಹಂಚಾಟೆ, ರೇಣುಕಾ ಗುಡಿಮನಿ, ಅರುಣ ನಾಗವತ್, ರಾಜೇಂದ್ರ ಹೆಗಡೆ, ಸಿ.ಎಸ್. ಚಿಕ್ಕಮಠ, ಈರಣ್ಣ ಬೆಳವಡಿ ಮುಂತಾದವರು ಅಭಿನಯಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸಾರೇ ಜಹಾ ಸೇ ಅಚ್ಚಾ, ರಘುಪತಿ ರಾಘವ ರಾಜಾರಾಮ್, ಯಾರಿಗೆ ಬಂತು ಎಲ್ಲಿಗೆ ಬಂತು, ಕಟ್ಟತೇವ ನಾವು ಕಟ್ಟತೇವ ಮುಂತಾದ ಗೀತೆಗಳು ನಾಟಕಕ್ಕೆ ಕಳೆ ಕಟ್ಟದ್ದವು. ಹಿರಿಯ ಲೇಖಕ ಸತೀಶ ಕುಲಕರ್ಣಿ ಬರೆದು ನಿದೇಶಿಸಿದ್ದರು. 

ಇದೇ ಸಂದರ್ಭದಲ್ಲಿ ಹುಚ್ಚಾಸ್ಪತ್ರೆ ಎಂಬ ಕಿರು ನಾಟಕ ತನ್ನ ಹಾಸ್ಯದ ಮೂಲಕ ವಿದ್ಯಾರ್ಥಿ ಸಮೂಹದ ಮನವನ್ನು ಗೆದ್ದಿತು. ಮುತ್ತುರಾಜ ಹಿರೇಮಠ ಮತ್ತು ಕೆ.ಎನ್ ಜಾನ್ವೇಕರ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದರು. 

ನಾಟಕ ಪ್ರದರ್ಶನವನ್ನು ಡಾ. ರಮೇಶ ತೆವರಿ ಉದ್ಘಾಟಿಸಿದ್ದರು. ಅಧ್ಯಕ್ಷತೆಯನ್ನು ಬಸವರಾಜ ಮಾಸೂರ ವಹಿಸಿದ್ದರು. ಡಾ. ಶಮಂತಕುಮಾರ ಕೆ.ಎಸ್. ವಂದಿಸಿದರು. 

WhatsApp Image 2024 10 05 at 15.43.57 586b60ff min e1728123396595
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...