“ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದರೂ ಈ ಹಿಂದೆ ಬ್ರಿಟೀಷರು ಆಳಿ ಹೋದ ಗುಲಾಮಗಿರಿ ಪದ್ಧತಿಯು ಇನ್ನೂ ಹೆಚ್ಚಾಗುತ್ತಾ ಬಂದಿದೆ. ರೈತರ ಮೇಲೆ ಶೋಷಣೆಗಳು ಹೆಚ್ಚಾಗುತ್ತಾ ಇವೆ. ಈಗಾಗಲೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹಿಂಗಾರಿ ಮಳೆಯು ಅತೀ ಹೆಚ್ಚು ಸುರಿಯುತ್ತಿದೆ. ಇದರಿಂದ ಬೆಳೆಗಳು ಹಾಳಾಗಿದ್ದು, ರೈತರಿಗೆ ಸೂಕ್ತ ಬೆಳೆ ಪರಿಹಾರ, ಬೆಳೆ ವಿಮೆ ನೀಡಬೇಕು” ಎಂದು ರೈತರು ಪ್ರತಿಭಟನೆ ನಡೆಸಿದರು. ಆಗ್ರಹಿಸಿದರು.
ಹಾವೇರಿ ಜಿಲ್ಲೆಯ ರಾಣಿಬೆನ್ನೂರು ಪಟ್ಟಣದಲ್ಲಿ ಸತತ ಮಳೆಯಿಂದ ರೈತರ ಬೆಳೆ ಹಾಳಾಗಿದ್ದು, ಸೂಕ್ತ ಬೆಳೆ ಪರಿಹಾರ ಹಾಗೂ ಬೆಳೆ ವಿಮೆ ನೀಡುವಂತೆ ಕರ್ನಾಟಕ ರಾಜ್ಯ ರೈತದ ನೇತೃತ್ವದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಹಣಮಂತಪ್ಪ ಕಬ್ಬಾರ ಮಾತನಾಡಿ, “ಹಾವೇರಿ ಜಿಲ್ಲೆಯಲ್ಲಿ ಮುಖ್ಯವಾಗಿ ಅತೀ ಹೆಚ್ಚು ಮೆಕ್ಕೆಜೋಳ ಮತ್ತು ತರಕಾರಿ ಇತರೆ ಬೆಳೆಗಳನ್ನು ರೈತರು ಬಿತ್ತನೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಮುಂಗಾರು ಮಳೆ ಬಿಟ್ಟು ಬಿಡದೆ ಸುರಿಯುತ್ತಿದೆ. ಈಗ ಯೂರಿಯಾ ಗೊಬ್ಬರಕ್ಕಾಗಿ ಹಿಂದೆ ರೈತರು ಪ್ರಾಣತ್ಯಾಗ ಮಾಡಿ ಗೊಬ್ಬರ ತೆಗೆದುಕೊಂಡಿದ್ದು ಇನ್ನೂ ಮಾಸಿಲ್ಲ. ಈ ಹಿಂದೆ ಸನ್ಮಾನ್ಯ ಶ್ರೀಯಡಿಯೂರಪ್ಪನವರ ಅಧಿಕಾರದಲ್ಲಿಯೇ ರೈತರ ಮೇಲೆ ಗೋಲಿಬಾರ್ ಆಗಿತ್ತು” ಎಂದು ಹೇಳಿದರು.
“ಈಗಾಗಲೇ ರೈತರು ಮೆಕ್ಕೆಜೋಳ, ತರಕಾರಿ ಹಾಗೂ ಇನ್ನಿತರೆ ಬೆಳೆಗಳನ್ನು ಬಿತ್ತನೆಗೆ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದಾರೆ. ಇದರಿಂದ ರೈತರ ಸ್ಥಿತಿ ಚಿಂತಾಜನಕವಾಗಿದ್ದು, ತಾಲೂಕು ಮತ್ತು ಜಿಲ್ಲಾಢಳಿತ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಿದರೆ ರೈತರಿಗೆ ಸರ್ಕಾರದ ಸೌಲಭ್ಯಗಳು ದೊರಕಲು ಸಾಧ್ಯವಾಗುತ್ತದೆ” ಎಂದರು.
“2023-24 ನೇ ಸಾಲಿನ ಬೆಳೆವಿಮೆ 25% ಕೊಟ್ಟು ಇನ್ನೂ ಪೂರ್ಣ ಬೆಳೆ ವಿಮೆ ಕೊಡದೆ ವಂಚನೆ ಮಾಡಿರುವುದು ಖಂಡನೀಯ. ಈಗಾಗಲೇ ಸರ್ಕಾರದಿಂದ ಕಳೆದ ಬಾರಿ ಸರ್ಕಾರದ ಪರಿಹಾರವನ್ನು ಸಮರ್ಪಕವಾಗಿ ರೈತರಿಗೆ ತಲುಪಿಸಿಲ್ಲ. ಈಗಾಗಲೇ ವರುಣನ ಅರ್ಭಣ ಜೋರಾಗಿದ್ದು, ರೈತರು ಬೆಳೆದ ಬೆಳೆಗಳು ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿವೆ. ಇದರಿಂದ ರೈತರು ತುಂಬಾ ಸಂಕಷ್ಟ ಎದುರಿಸುತ್ತಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತ ಸ್ಥಿತಿ ನಿರ್ಮಾಣವಾಗಿದೆ” ಎಂದು ಎಂದರು.
“ಕೂಡಲೇ ಸರ್ಕಾರ ಪರಿಹಾರ ಘೋಷಣೆ ಮಾಡಬೇಕು. ಸರ್ಕಾರ ನೆಪಕ್ಕ ಮಾತ್ರ ಮೂಗಿಗೆ ತುಪ್ಪ ಸವರುವಂತ ಕೆಲಸ ಮಾಡುತ್ತಿದೆ. ದಯಮಾಡಿ ಸರ್ಕಾರ ತಮ್ಮ ಅವಧಿಯಲ್ಲಿ ಸಾಕಷ್ಟು ನೋವುಗಳನ್ನು ಕಂಡಿದ್ದು, ಅದನ್ನು ನಿವಾರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಕೂಡಲೇ ಎಚ್ಚೆತ್ತುಕೊಂಡು ಸರಿಪಡಿಸುವಂತಹ ವ್ಯವಸ್ಥೆ ಕೈಗೊಳ್ಳಬೇಕು. ಕೆರೆಗಳ ಒತ್ತುವರಿಗಳನ್ನು ತೆರವುಗೊಳಿಸಿ ಹೂಳೆತ್ತಿ ಕೆರೆ ತುಂಬಿಸುವ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು. ಇದರಿಂದ ನೀರಿನ ಕೊರತೆ ತಪ್ಪಿಸಬಹುದು” ಎಂದು ಹೇಳಿದರು.
ಪ್ರತಿಭಟನೆಯಲ್ಲಿ ವಿವಿಧ ಗ್ರಾಮದ ನೂರಾರು ರೈತರು ಪಾಲ್ಗೊಂಡಿದ್ದರು.





