“ಸಿಎಂ ಅವರು ಘೋಷಿಸಿದಂತೆ ಕನಿಷ್ಟ ರೂ.10,000 ಗಳ ಗೌರವಧನ ಮತ್ತು ಬಜೆಟ್‌ನಲ್ಲಿ ರೂ.1000 ಹೆಚ್ಚಳವನ್ನು ಆದೇಶಗಳನ್ನು ಕೂಡಲೇ ಹೊರಡಿಸಬೇಕು” ಆಶಾ ಕಾರ್ಯಕರ್ತರು ಆಗ್ರಹಿಸಿಸರು.
ಹಾವೇರಿ ಪಟ್ಟಣದಲ್ಲಿ ಜಿಲ್ಲಾಡಳಿತ ಕಛೇರಿ ಮುಂಭಾಗದಲ್ಲಿ ಇಂದು ಎಐಯುಟಿಯುಸಿ ಗೆ ಸೇರಿದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಸುರಿವ ಮಳೆಯಲ್ಲಿಯೇ ಬೃಹತ್ ಪ್ರತಿಭಟನೆ ನಡೆಸಿದರು.
“ಕಳೆದ ಜನವರಿಯಲ್ಲಿ ನಡೆದ ಆಶಾ ಕಾರ್ಯಕರ್ತೆಯರ ರಾಜ್ಯ ಮಟ್ಟದ ಅನಿರ್ದಿಷ್ಟ ಹೋರಾಟದದಲ್ಲಿ ಸಿಎಂ ಅವರು ಆಶಾ ಸಂಘದ ನಾಯಕರು, ಮಾನ್ ಆರೋಗ್ಯ ಸಚಿವರು ಮತ್ತು ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಎಪ್ರಿಲ್ 1ರಿಂದ ಜಾರಿಯಾಗುವಂತೆ ಕನಿಷ್ಟ ರೂ.10,000 ಗಳ ಗೌರವಧನವನ್ನು ನೀಡಲಾಗುವುದು. ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ಭತ್ಯೆ ಕೊಡಲಾಗುವುದು ಎಂದು ಹೇಳದ್ದ ಸಿಎಂ ಅವರು ಮಾತು ಉಳಿಸಿಕೊಂಡಿಲ್ಲ” ಎಂದು ಆಗ್ರಹಿಸಿದರು.
“ಈ ವರ್ಷದ ಬಜೆಟ್‌ನಲ್ಲಿ ಎಲ್ಲಾ ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ಹೆಚ್ಚಿಸಿದಂತೆ ಆಶಾಗಳಿಗೂ ರೂ.1000 ಹೆಚ್ಚಳ ಮಾಡಲಾಗುವುದು, ಎಂದು ಭರವಸೆ ನೀಡಲಾಗಿತ್ತು. ಈಡೇರಿಸಿಲ್ಲ. ಆಶಾ ಕಾರ್ಯಕರ್ತೆಯರ ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ದುಬಾರಿ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ಕನಿಷ್ಠ ರೂ.2000ರಷ್ಟು ಗೌರವಧನವನ್ನು ಹೆಚ್ಚಿಗೆ ಮಾಡಬೇಕು” ಎಂದರು.
“ಆಶಾ ಕಾರ್ಯಕರ್ತೆಯರಿಗೆ ಪ್ರತೀ ತಿಂಗಳು ಸರಿಯಾಗಿ ವೇತನ ಆಗುತ್ತಿಲ್ಲ. ಈಗಲೂ 2-3 ತಿಂಗಳ ಪ್ರೋತ್ಸಾಹಧನ ಬಾಕಿ ಇದೆ. ಸುಮಾರು 2000 ಸುಗಮಕಾರರನ್ನು ಕಳೆದ 10 ವರ್ಷಗಳಿಂದ ಕೆಲಸಕ್ಕೆ ಪಡೆದುಕೊಂಡು ದಿಢೀರನೆ ತೆಗೆದು ಹಾಕಿರುವರು. 60 ವರ್ಷ ವಯಸ್ಸಿನ ಆಶಾಗಳನ್ನೂ ಏಕಾಏಕಿ ತೆಗೆದು ನಿವೃತ್ತಿ ಮಾಡಿರುತ್ತಾರೆ. 17 ವರ್ಷದಿಂದ ಸೇವೆ ಮಾಡಿದ ಈ ಆಶಾಗಳಿಗೆ ಯಾವುದೇ ಪರಿಹಾರ ನೀಡದೆ ಬೀದಿಗೆ ತಳ್ಳಿರುವರು. ಇದೀಗ ಎಲ್ಲ ಆಶಾ ಕಾರ್ಯಕರ್ತೆಯರಿಗೆ ಅವರ ಕೆಲಸದ ಮೌಲ್ಯಮಾಪನ ಮಾಡುವುದಾಗಿ ಆದೇಶ ಹೊರಡಿಸಿ ಕೆಲಸದಿಂದಲೇ ತೆಗೆದು ಹಾಕುವ ಬಗ್ಗೆ ಆದೇಶ ಮಾಡಿದ್ದಾರೆ. ಇದನ್ನು ಖಂಡಿಸುತ್ತೇವೆ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು
“60 ವರ್ಷಕ್ಕೆ ಸೇವಾ ನಿವೃತ್ತಿ ಪಡೆಯುವ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳದ ಮಾದರಿಯಲ್ಲಿ ₹ 5 ಲಕ್ಷ ಇಡಿಗಂಟು ನೀಡುವುದಾಗಿಯೂ ಭರವಸೆ ನೀಡಿದ್ದರು. ಬಗ್ಗೆ ನಿರ್ಣಯಿಸುವುದಾಗಿ ಹೇಳಿದ್ದರು. ಈ ಬಗ್ಗೆಯೂ ಯಾವುದೇ ಆದೇಶ ಹೊರಬಿದ್ದಿಲ್ಲ. ಆಶಾ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು ನಿಗದಿತ ಸಮಯಕ್ಕೆ ವೇತನ ಆಗುತ್ತಿಲ್ಲ. 2ರಿಂದ 3 ತಿಂಗಳ ಪ್ರೋತ್ಸಾಹಧನವೂ ಬಾಕಿಯಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಅನ್ನಭಾಗ್ಯಕ್ಕೆ 12 ವರ್ಷದ ಸಂಭ್ರಮ; ಜಾರಿ ಮಾಡುವ ಹಮಾಲಿ ಕಾರ್ಮಿಕರಿಗೆ ಅನ್ಯಾಯ
“ಈ ಹಿನ್ನಲೆಯಲ್ಲಿ ನೊಂದ ಆಶಾ ಕಾರ್ಯಕರ್ತೆಯರಿಗೆ ನ್ಯಾಯ ದೊರಕಿಸಲು ಸಿಎಂ ಅವರೇ ಘೋಷಿಸಿದಂತೆ ಹತ್ತು ಸಾವಿರ ನಿಗದಿಯಾದ ಬಗ್ಗೆ ಸ್ಪಷ್ಟ ಆದೇಶ ನೀಡುವಂತೆ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಆಶಾಗಳ ಪ್ರತಿರೋಧವನ್ನು ಎದುರಿಸ ಬೇಕಾಗುತ್ತದೆ ಎಂದು ರಾಜ್ಯ ಉಪಾಧ್ಯಕ್ಷ ಗಂಗಾಧರ ಬಡಿಗೇರ, ಜಿಲ್ಲಾಧ್ಯಕ್ಷರಾದ ಜಯಶೀಲಾ ಎಸ್.ಬಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಹಾವೇರಿ ಜಿಲ್ಲೆಯ ಎಲ್ಲ ತಾಲ್ಲೂಕು ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.





