ಹಾವೇರಿ | ಬಸವಣ್ಣನವರ ಸಮಾನತೆಯ ಸಮಾಜ ನಮ್ಮೆಲರ ಆಶಯವಾಗಬೇಕು: ಉಡಚಪ್ಪ ಮಾಳಗಿ

Date:

“ಬಸವಣ್ಣನವರು ಕಂಡ ವರ್ಣರಹಿತ, ವರ್ಗರಹಿತ, ಧಾರ್ಮಿಕ ಸಮಾನತೆಯ ಸಮಾಜ ನಮ್ಮೆಲ್ಲರ ಇಂದಿನ ಆಶಯವಾಗಬೇಕಾಗಿದೆ. ಬಸವಣ್ಣನವರ ಮಾರ್ಗದಲ್ಲಿ ನಾವೆಲ್ಲರೂ ಮುನ್ನಡೆಯೋಣ. ಸಮಾಜದಲ್ಲಿ ಶಾಂತಿಯನ್ನು ಕಾಪಾಡೋಣ” ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ,ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ(ರಿ)ಯ ರಾಜ್ಯಾಧ್ಯಕ್ಷರಾದ ಉಡಚಪ್ಪ ಮಾಳಗಿ ಹೇಳಿದರು.

ಹಾವೇರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ,ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ವತಿಯಿಂದ ಆಯೋಜಿಸಿದ ವಿಶ್ವಗುರು ಬಸವಣ್ಣ ಅವರ 892 ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

“ಸಮಾನತೆಯ ಹರಿಕಾರರಾಗಿ  ಉತ್ತಮ ಸಮಾಜ ನಿರ್ಮಾಣಕ್ಕೆ ತಮ್ಮದೆಯಾದ ಕೊಡುಗೆ ನೀಡಿದ ಬಸವಣ್ಣನವರು ತಮ್ಮ ವಚನಗಳ ಮೂಲಕ ಬದುಕಿನ ದಾರಿ ತೋರಿಸಿದವರು. ಬಸವಣ್ಣನವರ ವಾಣಿಯಂತೆ ಶರಣ ಧರ್ಮದ ಮೂಲ ಆಧಾರವೇ ದಯೆ. ಶರಣ ಧರ್ಮದ ಮೂಲ ತಳಹದಿಯೇ ದಯೆ. ಪರಸ್ಪರ ಪ್ರೀತಿ, ಪ್ರೇಮ, ದಯೆಯಂತಹ ಮಾನವೀಯ ಗುಣಗಳಿಂದಾಗಿ ಶರಣರು ಪ್ರತಿಪಾದಿಸಿದ ಧರ್ಮ ಮಾನವ ಧರ್ಮವಾಯಿತು. ಎಲ್ಲಾ ಮಾನವರು ಶ್ರೇಷ್ಠ ಎಂಬ ಭಾವನೆ ಆಶಯ ಬಸವಣ್ಣನವರ ಬದುಕಿನಲ್ಲಿ ಕಾಣಬಹುದಾಗಿತ್ತು. ಅವರ ಜೀವನದ ಆಶಯಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಬದುಕನ್ನು ಶ್ರೇಷ್ಠವನ್ನಾಗಿಸಿಕೊಳ್ಳೋಣ” ಎಂದು ಉಡಚಪ್ಪ ಮಾಳಗಿ ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ? ಗದಗ | ಸೂಪರ್ ಮಾರುಕಟ್ಟೆ ಕಾಂಪೌಂಡ್‌, ಪಿಲ್ಲರುಗಳಲ್ಲಿ ಬಿರುಕು: ಕಳಪೆ ಕಾಮಗಾರಿ ಆರೋಪ

ಈ ಸಂದರ್ಭದಲ್ಲಿ ಕಲ್ಯಾಣ ಸಮಿತಿ ಜಿಲ್ಲಾಧ್ಯಕ್ಷರಾದ ಮಂಜಪ್ಪ ಮರೋಳ, ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ರೇಣುಕಾ ಬಡಕ್ಕಣ್ಣನವರ, ಮುಖಂಡರಾದ  ಶೆಟ್ಟಿ ಯುವತಿ. ಮಂಜುನಾಥ ಕಚವಿ, ನಗೀನಾ ಬಾನು, ಬಸವರಾಜ ದೇವವರಮನಿ, ಹಾನಗಲ್ ತಾಲ್ಲೂಕಾಧ್ಯಕ್ಷರು ಜಗದೀಶ ಹರಿಜನ, ಬ್ಯಾಡಗಿ ತಾಲ್ಲೂಕಾಧ್ಯಕ್ಷ ಹನಮಂತಪ್ಪ ಸಿ.ಡಿ, ಶೇಖಪ್ಪ ಹಲಸೂರ, ಮುಸ್ತಾಪ ಅಗಸನಹಳ್ಳಿ, ಬಸವಣ್ಣೆಪ್ಪ ಅಳ್ಳಳ್ಳಿ, ಪ್ರವೀಣ ಭಾಂಡಗೆ. ಮಹೇಶಪ್ಪ ಹರಿಜನ, ಅನ್ನಪೂರ್ಣ ಅರಕೇರಿ, ನೇತ್ರಾ ಕಾಂತೇಶ ದೊಡ್ಮನಿ, ಗೀತಾ ಶೀಡೆನೂರ, ಮಂಜವ್ವ ಶಿಡೇನೂರ, ಮಾಯವ್ವ ಶಿಡೇನೂರ, ಸುನೀತಾ ಶಿಡೇನೂರ, ಸುಮಂಗವ್ವ ಕೃಷ್ಣಾಪೂರ, ದುರಗಮ್ಮ, ಗೀತಮ್ಮ ಕಡೆಮನಿ, ಗೀತವ್ವ ಒಳಗುಡ್ಡಿ,ಎಲ್ಲಮ್ಮ ಸಣ್ಣಮನಿ, ಸುಮಂಗಲ  ರಾಣೆಬೆನ್ನೂರು, ಶಿಡೇನೂರ ಸೇರಿದಂತೆ ಅನೇಕರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...