ಹಾವೇರಿ | ಭೀಮಾ ಕೋರೆಂಗಾವ್ ಶೌರ್ಯ, ಪರಾಕ್ರಮ ಸಂಕೇತ: ಉಡಚಪ್ಪ ಮಾಳಗಿ

Date:

“ಭೀಮಾ ಕೋರೆಂಗಾವ್ ಘಟನೆಯನ್ನು ಶೌರ್ಯ- ಸಾಹಸಮಯ ಹಾಗೂ ಕೆಚ್ಚೆದೆಯ ಸೈನಿಕರ ಪರಾಕ್ರಮವೆಂದು ಹೇಳಬಹುದು. ಪೇಶ್ವೆ ಬಾಜಿರಾಯನ ಸೈನ್ಯದ ವಿರುದ್ಧ ದಲಿತರು ಶೌರ್ಯದಿಂದ  ಹೋರಾಡಿ ಅವನ ಸೈನ್ಯವನ್ನು ಧೂಳಿಪಟ ಮಾಡಿ, ವಿಜಯ ಪತಾಕಿ ಹಾರಿಸಿದ ಈ ದಿನವು ಡಾ.ಬಿ.ಆರ್ ಅಂಬೇಡ್ಕರ್ ಅವರಿಗೆ ಅತ್ಯಂತ ಪ್ರೀತಿಯ ದಿನವಾಗಿದೆ” ಎಂದು ಕಲ್ಯಾಣ ಸಮಿತಿ(ರಿ)ಯ ರಾಜ್ಯಾಧ್ಯಕ್ಷರು ಉಡಚಪ್ಪ ಮಾಳಗಿ ಹೇಳಿದರು.

ಹಾವೇರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ,ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ(ರಿ)ಯ ವತಿಯಿಂದ ಜನವರಿ 1 ರಂದು ದಲಿತರ ಶೌರ್ಯ ದಿನ  ಸಂಕೇತವಾಗಿ ಭೀಮಾ ಕೋರೆಂಗಾವ್ ವಿಜಯೋತ್ಸವ ದಿನವನ್ನು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ದಲಿತರ ಶೌರ್ಯ ತೋರಿದ ಸ್ವಾಭಿಮಾನದ ಸಂಕೇತವಾಗಿ ಭೀಮಾ  ಕೋರೆಂಗಾವ್ ವಿಯೋತ್ಸವ ದಿನವಾಗಿ ಆಚರಣೆ ಮಾಡಲಾಗುತ್ತದೆ. ದಲಿತರು ಪ್ರೀತಿಗೂ ಸೈ,ಸ್ವಾಭಿಮಾನದ  ಹೋರಾಟಕ್ಕೂ ಸೈ ಎಂಬ ಧೋರಣೆ ಎಲ್ಲರಿಗೂ ತಿಳಿಸಿದ ಹೋರಾಟವಾಗಿದೆ. ಜ-1 ನಾವೆಲ್ಲರೂ ಮರೆಯದೇ ಅವಿಸ್ಮರಣೀಯ ದಿನವೆಂದು ಮುನ್ನಡಿಯಬೇಕಿದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಲಿಡ್ಕರ್ ಮಾಜಿ ಉಪಾಧ್ಯಕ್ಷರು ಡಿ ಎಸ್ ಮಾಳಗಿ  ಮಾತನಾಡಿ, “ಭೀಮಾ ಕೋರೆಂಗಾವ್ ವಿಯೋತ್ಸವ ದಿನ ನಮ್ಮೆಲ್ಲರ ಹೆಮ್ಮೆಯ ದಿನವಾಗಿದೆ. ಅನ್ಯಾಯ ಶೋಷಣೆ ವಿರುದ್ಧ ಹೋರಾಟ ಮಾಡಬೇಕು ಎಂಬುವುದನ್ನು ಭೀಮಾ ಕೋರೆಂಗಾವ್ ಯುದ್ಧ ಪ್ರೇರಣೆ ನೀಡಲಿದೆ. ಜ-1 ಕಲ್ಯಾಣ ಸಮಿತಿಯ ರಾಜ್ಯಾಧ್ಯಕ್ಷರಾದ ಉಡಚಪ್ಪ ಮಾಳಗಿ ಅವರ ಹುಟ್ಟು ಹಬ್ಬವು ಆಗಿದ್ದು,ಅವರಿಗೆ ದೇವರು ಒಳ್ಳೆಯದು ಮಾಡಲಿ ಅವರ ಉತ್ತಮ ಕೆಲಸಕ್ಕೆ ನಾವು ಕೈಜೋಡಿಸೋಣ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಲ್ಯಾಣ ಸಮಿತಿ  ಜಿಲ್ಲಾಧ್ಯಕ್ಷರರು ಮಂಜಪ್ಪ  ಮರೋಳ, ಡಿಎಸ್ ಎಸ್ ಜಿಲ್ಲಾ ಸಂಚಾಲಕರು ಮಾಲತೇಶ ಯಲ್ಲಾಪುರ, ಅಲೆಮಾರಿ ಸಮಾಜದ ಜಿಲ್ಲಾಧ್ಯಕ್ಷರು ಶೆಟ್ಟಿ ವಿಭೂತಿ, ಬಿಎಸ್ ಪಿ ಪಕ್ಷದ ಮುಖಂಡರು ಎಂ ಕೆ ಮುಲ್ಲಾ, ಮುಖಂಡರು ಎಂ ಆಂಜನೇಯ, ವಕೀಲರಾದ ಮಹೇಶ ಹಂಚಿನಮನಿ, ಸುಭಾಸ ಚೌವ್ಹಾಣ, ವೆಂಕಟೇಶ ಬಿಜಾಪುರ, ಅಶೋಕ ಮರೆಣ್ಣನವರ, ಹೊನ್ನಪ್ಪ ಮಾಳಗಿ, ಯಲ್ಲಪ್ಪ ಮಾಸೂರ, ಜಗದೀಶ ಹರಿಜನ, ನೀಲಮ್ಮ ಮರೆಮ್ಮನವರ, ಭೀಮಣ್ಣ ಯಲ್ಲಾಪುರ, ಗುಡ್ಡಪ್ಪ ಚಿಕ್ಕಪ್ಪನವರ, ನವೀನ ಶಿಡ್ಲಣ್ಣನವರ, ರಾಜು ತರ್ಲಗಟ್ಟ, ಗುಡ್ಡಪ್ಪ ಬಣಕಾರ, ಮಲ್ಲೇಶ ಕಡಕೋಳ, ಹನುಮಂತಪ್ಪ ಹೌಂಶಿ, ಮಹೇಶಪ್ಪ ಹರಿಜನ, ಹೊನ್ನಪ್ಪ ದಾಸಪ್ಪನವರ, ಬಸವಣ್ಣೆಪ್ಪ ಹಳ್ಳಳ್ಳಿ, ಗುಡ್ಡಪ್ಪ ಮಾಳಗಿ, ರಾಜಪ್ಪ ಕರೆಣ್ಣನವರ, ದುರಗಪ್ಪ, ಹನುಮಂತಪ್ಪ ಪರಸನವರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

WhatsApp Image 2024 10 05 at 15.43.57 586b60ff min e1728123396595
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...