ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಾಹಿತಿ ಕಲಾವಿದರ ಬಳಗದ ಸಂಯುಕ್ತ ಆಶ್ರಯದಲ್ಲಿ ದಿ ಜನೆವರಿ 8ಕ್ಕೆ ಗುರುವಾರ ಬೆಳಿಗ್ಗೆ ೧೧ ಗಂಟೆಗೆ ಇಲ್ಲಿಯ ವಿನಾಯಕ ನಗರದ ಬಿ ಬ್ಲಾಕ್ ನಲ್ಲಿರುವ ಗಂಗಾಧರ ನಂದಿ ಅವರ ಸಾಹಿತಿ ಭವನದಲ್ಲಿ ಗಾಳಿಪಟಗಳು ಎಂಬ ಲಲಿತ ಪ್ರಬಂಧ ಸಂಪುಟದ ಬಿಡುಗಡೆ ನಡೆಯಲಿದೆ.
೮೬ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ತೃತೀಯ ವರ್ಷದ ಸವಿನೆನಪಿಗಾಗಿ ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಅವರ ಸಂಪಾದಿಸಿದ ಗಾಳಿ ಪಟಗಳು ಕೃತಿಯನ್ನು ಹಿರಿಯ ಜಾನಪದ ವಿದ್ವಾಂಸ ಡಾ. ಶಂಭು ಬಳಿಗಾರ ಲೋಕಾರ್ಪಣೆ ಮಾಡುವರು.
ಸಮಾರಂಭವನ್ನು ಜಿ.ಎಚ್. ಕಾಲೇಜಿನ ಪ್ರಾಚಾರ್ಯರು ಪ್ರೊ. ಮಂಜುನಾಥ ಎಂ ಹೊಳ್ಳಿಯವರ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಲಿಂಗಯ್ಯ ಬಿ ಹಿರೇಮಠ ವಹಿಸುವರು.
ಡಾ. ಕಾಂತೇಶ ಅಂಬಿಗೇರ ಕೃತಿ ಪರಿಚಯ ಮಾಡುವರು. ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ವಾಯ್.ಬಿ. ಆಲದಕಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡುವರು. ಅತಿಥಗಳು ಡಾ. ನಾಗರಾಜ ದ್ಯಾಮನಕೊಪ್ಪ ಮತ್ತು ಶ್ರೀನಿವಾಸ ಕಾಕಿ ಆಗಮಿಸುವರು.
ಈ ಸಂದರ್ಭದಲ್ಲಿ ಡಾಕ್ಟರೇಟ್ ಪುರಸ್ಕೃತರಾದ ಡಾ. ಲಕ್ಷ್ಮಿಕಾಂತ್ ಮಿರಜಕರ್ ಮತ್ತು ಗಾಳಿಪಟ ಲಲಿತ ಪ್ರಬಂಧ ಖ್ಯಾತಿಯ ರಾಕು ಅವರ ಪುತ್ರ ದತ್ತಾತ್ರೇಯ ಕುಲಕರ್ಣಿ ಅವರನ್ನು ಸನ್ಮಾನಿಸಲಾಗುವದು. ಪೃಥ್ವಿರಾಜ ಬೆಟಗೇರಿ ಕಾರ್ಯಕ್ರಮ ನಡೆಸಿಕೊಡುವರು.





