“ಯುವಜನರು ಸಮುದಾಯದಲ್ಲಿ ನಾಯಕ ಆಗಬೇಕಾದರೆ ತಮ್ಮಲ್ಲಿರುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ಅದಕ್ಕಾಗಿಯೇ ಯುವಜನರು ಹೆಚ್ಚು ಹೆಚ್ಚು ತರಬೇತಿಗಳನ್ನು ಪಡೆದಕೊಳ್ಳಬೇಕು. ಸಮಾಜದ ಆಗು ಹೋಗುಗಳ ಅವಲೋಕನ ಮಾಡಬೇಕು. ಸದೃಡ ಸಮಾಜ ಕಟ್ಟಲು ಬದ್ಧರಾಗಬೇಕು” ಎಂದು ಯುವಜನರಿಗೆ ಸಾಮರ್ಥ್ಯ ಬಲವರ್ಧನೆ ತರಬೇತಿ ಕಾರ್ಯಗಾರದಲ್ಲಿ ಫಾದರ್ ಜೇಸನ್ ಪೈಸ್ ಹೇಳಿದರು.
ಹಾವೇರಿ ಜಿಲ್ಲೆಯ ಹಾನಗಲ್ಲ ಪಟ್ಟಣದ ಲೊಯೋಲ ವಿಕಾಸ ಕೇಂದ್ರದಲ್ಲಿ ಲೊಯೋಲ ವಿಕಾಸ ಕೇಂದ್ರ, ರೋಶನಿ ಸಮಾಜ ಸೇವಾ ಸಂಸ್ಥೆ ಹಾನಗಲ್ಲ, ಇಂಡಿಯನ್ ಸೋಶಿಯಲ್ ಇನ್ಸ್ಟಿಟ್ಯೂಟ್, ಅಕ್ಕಮಹಾದೇವಿ ಸಂಸ್ಥೆ ಹಾನಗಲ್ಲ ಇವರ ಆಶ್ರಯದಲ್ಲಿ ಸಾಮರ್ಥ್ಯ ಬಲವರ್ಧನೆ ತರಬೇತಿ ಕಾರ್ಯಗಾರದಲ್ಲಿ ಪ್ರಸ್ತಾವಿಕವಾಗಿ ಫಾದರ್ ಜೇಸನ್ ಪೈಸ್ ಮಾತನಾಡಿದರು.
“ಯುವಜನತೆ ಈ ದೇಶದ ಶಕ್ತಿ ಅದು ಅನುಪಯುಕ್ತ ವಿಷಯಗಳಿಗೆ ಬೆಂಬಲ ನೀಡದೆ, ದೇಶದ ಅಭಿವೃದ್ಧಿ ವಿಚಾರಗಳಿಗೆ ದ್ವನಿ ಗುಡಿಸಿದರೆ, ಖಂಡಿತವಾಗಿಯೂ ನವ ಸಮಾಜದ ನಿರ್ಮಾಣದ ಕನಸು ನನಸಾಗುತ್ತದೆ” ಎಂದು ತಿಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಿಸ್ಟರ್ ಶಾಂತಿ ರೋಶನಿ ಸಮಾಜ ಸೇವಾ ಸಂಸ್ಥೆ ಇವರು ಮಾತನಾಡಿ, “ಯುವಜನರು ಸಮುದಾಯದಲ್ಲಿ ಬೆಳದು ನಿಲ್ಲಬೇಕಾದರೆ ಅವರಿಗೆ ಶಕ್ತಿಯ ಜೊತೆಗೆ ಯುಕ್ತಿಯು ಬೇಕು. ಯುಕ್ತಿ ಜ್ಞಾನ, ತಿಳಿವಳಿಕೆ, ಮತ್ತು ಅನುಭವದ ಮೂಲಕ ಸಿಗುತ್ತದೆ. ಹಾಗಾಗಿ ಯುವಜನರು ತಮ್ಮಲ್ಲಿರುವ ಜ್ಞಾನ ಮತ್ತು ಶಕ್ತಿ ಬೆಳಲಿಸಿಕೊಳ್ಳಲು ಸಾಮರ್ಥ್ಯ ವೃದ್ಧಿಸಿಕೊಳ್ಳುವುದು ಬಹು ಮುಖ್ಯ” ಎಂದು ತಿಳಿಸಿದರು.
ಕಾರ್ಯಗಾರದಲ್ಲಿ ಸಂವಾದ ಸಂಸ್ಥೆ ಹಕೀಮ್ ಅವರು ಯುವಜನರ ಹಕ್ಕುಗಳು ಮತ್ತು ಯುವಜನ ಆಯೋಗದ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಜನಾರ್ಧನ ಕೇಸರಗದ್ದೆ ಕೋ ಎಕ್ಸಿಕ್ಯೂಟಿವ್ ಡೈರೆಕ್ಟರ್ ಸಂವಾದ ಬೆಂಗಳೂರು, ಪ್ರಗತಿಪರ ಸಂಘಟಕರು ಫೈರೋಜ್ ಅಹ್ಮದ ಶಿರಬಡಗಿ ಸೇರಿದಂತೆ ಐವತ್ತಕ್ಕೂ ಹೆಚ್ಚು ಯುವಜನರು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಪಕ್ಕೀರೇಶ್ ಗೌಡಳ್ಳಿ ನಿರೂಪಿಸಿದರು, ಗೀತಾ ಬಿಸಗಣ್ಣನವರ ಸ್ವಾಗತಿಸಿದರು, ಮೈಲಾರಿ ಜಾಡರ ಅವರು ವಂದಿಸಿದರು.





