ದೆಹಲಿ ಕೆಂಪು ಕೋಟೆಯ ಬಳಿ ನಡೆದ ಕಾರು ಸ್ಫೋಟ ಘಟನೆಯನ್ನು ಖಂಡಿಸಿ, ಘಟನೆಯಲ್ಲಿ ಮಡಿದವರಿಗೆ ಮೇಣದ ಬತ್ತಿ ಬೆಳಗಿ ಮಂಗಳವಾರ ಸಂಜೆ ಹಾವೇರಿಯ ಗಾಂಧಿ ವೃತ್ತದಲ್ಲಿ ಎಸ್ಎಫ್ಐ, ಡಿವೈಎಫ್ಐ, ಸಾಹಿತಿ ಕಲಾವಿದರ ಬಳಗ, ಸಮಾನಮನಸ್ಕರ ಸಂಘಟನೆಗಳಿಂದ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.
ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ “ಕೆಂಪುಕೋಟೆ ಬಳಿ ರಕ್ತಹರಿಸಿದ ದುಷ್ಕರ್ಮಿಗಳ ಕುಕೃತ್ಯವನ್ನ ತೀವ್ರವಾಗಿ ಖಂಡಿಸುತ್ತೇವೆ. ಅಮಯಾಕರ ಜೀವ ಬಲಿ ಪಡೆದ ಪಾಪಿಗಳ ಕೃತ್ಯಕ್ಕೆ ತಕ್ಕಶಾಸ್ತಿ ಮಾಡಬೇಕು” ಎಂದು ಆಗ್ರಹಿಸಿದರು.
“ಘಟನೆಯಲ್ಲಿ ಗಾಯಗೊಂಡಿರುವ ಜೀವಗಳು ಆದಷ್ಟು ಬೇಗ ಚೇತರಿಸಿಕೊಳ್ಳುವಂತೆ ಆಗಲಿ. ಈ ರೀತಿಯ ಕೃತ್ಯಗಳು ಮರುಕಳಿಸದಂತೆ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪದೇ ಪದೇ ಈ ರೀತಿಯ ಘಟನೆಗಳಲ್ಲಿ ಅಮಾಯಕರು ಜೀವಕಳೆದುಕೊಳ್ಳುತ್ತಿದ್ದಾರೆ” ಎಂದರು.
ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, “ದೆಹಲಿಯಲ್ಲಿ ನಡೆದ ಕಾರು ಸ್ಫೋಟ ಅಮಾನವೀಯ ಘಟನೆಯನ್ನು ಮಾನವೀಯತೆಯ ಪರವಾಗಿರುವ ಎಲ್ಲಾ ಸಮಾನ ಮನಸ್ಕ ಸಂಘಟನೆಗಳ ಪರವಾಗಿ ತೀವ್ರವಾಗಿ ಖಂಡಿಸುತ್ತೇವೆ. ಅಮಾಯಕ ಜನರ ಜೀವ ಬಲಿ ಪಡೆದ ಕೆಟ್ಟ ಮನಸ್ಥಿತಿವರು ಈ ಜಾತ್ಯಾತೀತ, ಸೌಹಾರ್ದತೆ ನೆಲದ ಮನಸ್ಸುಗಳನ್ನು ಹೊಡೆಯುವುದು ಸಹಿಸುವುದಿಲ್ಲ. ಕೂಡಲೇ ಕೇಂದ್ರ ಸರ್ಕಾರ ನಿಷ್ಪಕ್ಷಪಾತ ತನಿಖೆ ಆದೇಶಿಸಬೇಕು ಎಂದು ಆಗ್ರಹಿಸಿದರು. ಈ ಕೃತ್ಯೆ ಎಸಗಿದವರ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂದರೆ ಮುಂದೆ ಈ ರೀತಿಯ ಕೃತ್ಯವನ್ನು ಯಾರು ಮಾಡಬಾರದು ಆ ರೀತಿ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಅಲ್ಪಾ ಸಂಖ್ಯಾತರ ಆಯೋಗದ ಸದಸ್ಯರು ಪರಿಮಳ ಜೈನ್, ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್, ಸಾಹಿತಿ ಕಲಾವಿದರ ಬಳಗದ ಈರಣ್ಣ ಬೆಳವಡಿ, ಶಂಕರ್ ಮಡಿವಾಳ, ವಿರೂಪಾಕ್ಷ ಹಾವನೂರು, ಶಿವಯೋಗಿ, ಚಂದ್ರಶೇಖರ್ ಮಾಳಗಿ, ಅಂಬಿಕಾ ಹಂಚಾಟೆ, ನೇತ್ರಾವತಿ ಅಂಗಡಿ,ಶಶಿಕಲಾ ಅಕ್ಕಿ, ರೇಣುಕ ಗುಡಿಮನಿ, ರಾಜೇಶ್ವರಿ ಬಿಷ್ಮ್ನಗೌಡ, ಮಹೇಶ್ ಗುರುಲಿಂಗದೆವರಮಠ, ಎಸ್ಎಫ್ಐ ಮುಖಂಡರಾದ ಅರುಣ್ ನಾಗವತ್, ಚೈತ್ರಾ ಕೊರವರ , ರವಿ ಬಂಕಾಪುರ, ಪಕಿರೇಷ ಮ್ಯಾಗಳಮನಿ, ಸಂಜೀವ್ ಕೆ, ಬಾಲಸಂಘಂನ ಧನುಷ್ ದೊಡ್ಡಮನಿ, ಪ್ರಜ್ವಲ್ ಕೊಪ್ಪದ, ಮೈನುದ್ದೀನ್ ಇಲಿಬುಡ್ಡಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.





