ಹಾವೇರಿ ಜಿಲ್ಲಾಧಿಕಾರಿ ಕಾರು ಜಪ್ತಿ ಪ್ರಕರಣ: ಕಾನೂನು, ಸಂವಿಧಾನ ಮತ್ತು ಅಧಿಕಾರಶಾಹಿ

Date:

55 ವರ್ಷದ ಹಿಂದಿನ ಭೂಸ್ವಾಧೀನ ಪ್ರಕರಣದಲ್ಲಿ ಇನ್ನೂ ರೈತರಿಗೆ ಪರಿಹಾರ ಕೊಡದೆ ಸತಾಯಿಸುತ್ತಿರುವ ಜಿಲ್ಲಾಧಿಕಾರಿಗಳ ನಡೆ ಖಂಡಿಸಿ ಅವರ ಕಾರನ್ನು ಜಪ್ತಿ ಮಾಡಲು ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣ ನ್ಯಾಯಾಲಯ ಆದೇಶಿಸಿದೆ.

ಬ್ಯಾಡಗಿ ತಾಲೂಕಿನ ಮಾಸಣಗಿ ಗ್ರಾಮದ 2 ಎಕರೆ 29 ಗುಂಟೆ ಜಮೀನನ್ನು 1970ರಲ್ಲಿ ಅಂದಿನ ಜಿಲ್ಲಾಧಿಕಾರಿಗಳು ಕೆರೆ ನಿರ್ಮಿಸಲು ಭೂಸ್ವಾಧೀನ ಮಾಡಿಕೊಂಡು ಸಣ್ಣ ನೀರಾವರಿ ಇಲಾಖೆಗೆ ಹಸ್ತಾಂತರಿಸಿದ್ದರು. ಅಂದು ಎಕರೆಗೆ 1ಲಕ್ಷ 30 ಸಾವಿರ ರೂ.ಗಳ ಘೋಷಿತ ಪರಿಹಾರ ನಿಗದಿ ಮಾಡಲಾಗಿತ್ತು. ಆದರೆ, ಈವರೆಗೆ ಪರಿಹಾರ ನೀಡಲಾಗಿಲ್ಲ. ಪರಿಹಾರ ಕೊಡಲು ವಿಳಂಬ ಮಾಡಿದ ಹಿನ್ನಲೆಯಲ್ಲಿ ಅಧಿಕಾರಶಾಹಿ (ಕಾರ್ಯಂಗ ಮತ್ತು ಶಾಸಕಾಂಗ) ವಿರುದ್ಧ ಸಂತ್ರಸ್ತರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಕೂಡಲೇ ಪರಿಹಾರ ಹಣ ಬಿಡುಗಡೆ ಮಾಡಬೇಕೆಂದು ನ್ಯಾಯಾಲಯ ಕಳೆದ ವರ್ಷವೇ ಆದೇಶಿಸಿದ್ದರೂ ಜಿಲ್ಲಾಡಳಿತ ಮಾತ್ರ ಪರಿಹಾರ ನೀಡಲು ಇನ್ನೂ ಮೀನಾಮೇಷ ಎಣಿಸುತ್ತಿದೆ.

ಅಂದಿನ, 1 ಲಕ್ಷ 30 ಸಾವಿರ ಪರಿಹಾರದ ಮೊತ್ತಕ್ಕೆ ಅಂದಿನಿಂದ ಇಂದಿನವರೆಗೆ ಬಡ್ಡಿ ಹಾಗೂ ಇತರೆ ವೆಚ್ಚಗಳನ್ನೂ ಸೇರಿಸಿ 45 ಲಕ್ಷ 80 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು 2024ರ ನವೆಂಬರ್ 23ರಂದೇ ನ್ಯಾಯಾಲಯ ಆದೇಶಿಸಿತ್ತು. ಆದರೆ, ಅಧಿಕಾರಶಾಹಿ ಅದನ್ನು ಗಣನೆಗೆ ತೆಗೆದುಕೊಂಡಿಲ್ಲ. ನ್ಯಾಯಾಲಯದ ಆದೇಶವನ್ನು ಕಡೆಗಣಿಸಿದ ಉಪವಿಭಾಗಾಧಿಕಾರಿಗಳ ಕಾರನ್ನು 2025ರ ಫೆಬ್ರುವರಿ 11 ರಂದು ಜಪ್ತಿ ಮಾಡಲಾಗಿದೆ. ಆದರೂ, ಅಧಿಕಾರಿಗಳು ಜಗ್ಗಲಿಲ್ಲ. ಹೀಗಾಗಿ, ದಪ್ಪ ಚರ್ಮದ ಅಧಿಕಾರಶಾಹಿಗೆ ಬಿಸಿ ಮುಟ್ಟಿಸಲು ಮಂಗಳವಾರ ಜಿಲ್ಲಾಧಿಕಾರಿಗಳ ಕಾರನ್ನು ಕೂಡ ನ್ಯಾಯಾಲಯ ಜಪ್ತಿ ಮಾಡಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಪ್ರಕರಣದಲ್ಲಿ ನ್ಯಾಯಾಲಯವನ್ನು ಅಭಿನಂದಿಸಬೇಕೇ ಅಥವಾ ನಮ್ಮ ಕಾನೂನು ವ್ಯವಸ್ಥೆ ಬಗ್ಗೆ ಮರುಕ ಪಡಬೇಕೆ? ಇಲ್ಲ ಅಧಿಕಾರಶಾಹಿ (ಶಾಸಕಾಂಗ ಹಾಗೂ ಕಾರ್ಯಂಗ) ಕಾರ್ಯಕ್ಕೆ ವ್ಯಥೆ ಪಡಬೇಕೆ ಅಥವಾ ಈಗಲಾದರೂ ನ್ಯಾಯದಾನವಾಯಿತಲ್ಲ ಇದೆ ನಮ್ಮ ಪ್ರಜಾಪ್ರಭುತ್ವದ, ಸಂವಿಧಾನದ ಸೌಂದರ್ಯ ಅಂತ ಹೆಮ್ಮೆ ಪಟ್ಟು ಮರೆತು ಬಿಡಬೇಕೆ?

ಜಿಲ್ಲಾಧಿಕಾರಿ ಕಾರು

ಪ್ರಕರಣದಲ್ಲಿ ‘Justice Delayed is Justice Denied’ ಎಂಬ ಆಂಗ್ಲ ನಾಣ್ಣುಡಿಯ ಪ್ರತಿ ಶಬ್ದವು ನಿಜವಾಗಿದೆ. ಈ 55 ವರ್ಷಗಳಲ್ಲಿ ಏನೆಲ್ಲ ಬದಲಾವಣೆಗಳಾಗಿವೆ. ಆದರೆ ಬಡ ರೈತರಿಗೆ ಪರಿಹಾರ ಮಾತ್ರ ಸಿಕ್ಕಿಲ್ಲ ಏಕೆ? ರೈತರೆಂದರೆ ಅಷ್ಟು ಅಸಡ್ಡೆಯೇ?

ಈ 55 ವರ್ಷಗಳ ಅವಧಿಯಲ್ಲಿ ಎಷ್ಟು ಜನ ಮುಖ್ಯಮಂತ್ರಿಗಳು, ಮಂತ್ರಿಗಳು, ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಬಂದು ಹೋದರು. ಈಗಿನ ಹಾವೇರಿ ಜಿಲ್ಲಾಧಿಕಾರಿ ಕಚೇರಿಯಿಂದ ಕೆಲವೇ ಕಿಲೋಮೀಟರು ದೂರದಲ್ಲಿ ಹರಿಯುವ ವರದಾ ನದಿಯಲ್ಲಿ ಎಷ್ಟು ನೀರು ಹರಿದಿದೆ. ಆದರೆ, ರೈತರಿಗೆ ಮಾತ್ರ ಇನ್ನೂ ನ್ಯಾಯ ಸಿಕ್ಕಿಲ್ಲ. ಈಗಲೂ ಜಿಲ್ಲಾಧಿಕಾರಿಗಳ ಕಾರು ಜಪ್ತಿ ಮಾಡಲಾಗಿದೆಯೇ ಹೊರತು ಇನ್ನೂ ಭೂಮಿ ಕಳೆದುಕೊಂಡ ಸಂತ್ರಸ್ತ ರೈತರ ಖಾತೆಗೆ ಪರಿಹಾರದ ಹಣ ಜಮಾ ಆಗಿಲ್ಲ!

ಇಂತಹ ಅಧಿಕಾರಶಾಹಿ ಕಂಡೆ ಅವತ್ತು ಕುವೆಂಪು ಅವರು ತಮ್ಮ ‘ರೈತನ ದೃಷ್ಟಿ’ ಕವನದಲ್ಲಿ
“ಸಾಮ್ರಾಜ್ಯವಾವಗಂ ಸುಲುಗೆ ರೈತರಿಗೆ
ವಿಜಯನಗರವೋ? ಮೊಗಲರಾಳ್ವಿಕೆಯೋ? ಇಂಗ್ಲಿಷರೊ?
ಎಲ್ಲರು ಜಿಗಣೆಗಳೇ ನಮ್ಮ ನೆತ್ತರಿಗೆ
ಕತ್ತಿ ಪರದೇಶಿಯಾದರೆ ಮಾತ್ರ ನೋವೇ?
ನಮ್ಮವರೆ ಹದ ಹಾಕಿ ತಿವಿದರದು ಹೂವೆ?” ಎಂದು ಬರೆದಿದ್ದರು.

ಇದೆಲ್ಲದರ ನಡುವೆ ಮೆಚ್ಚಬೇಕಾದ್ದು ಆ ಸಂತ್ರಸ್ತ ಕುಟುಂಬದ ತಲೆಮಾರುಗಳ ದಣಿವರಿಯದ ಹೋರಾಟ. ಆದರೆ ಎಷ್ಟು ಕುಟುಂಬಗಳಿಗೆ ಈ ತರಹದ ಗಟ್ಟಿ ಹೋರಾಟ ಕಟ್ಟಲು ಸಾಧ್ಯ? ಎಷ್ಟು ಕಾಲ ಹೋರಾಟ ಮಾಡಲು ಸಾಧ್ಯ?

ಈ ವರದಿ ಓದಿದ್ದೀರಾ?: ಸೌಜನ್ಯ ಪ್ರಕರಣದಲ್ಲಿ ಬಿಜೆಪಿ ಮೌನ; ಒಂದು ವೇಳೆ ಕೊಲೆಗಡುಕರು ಮುಸ್ಲಿಂ ಆಗಿದ್ದರೆ?

ಇಂತಹ ಗಟ್ಟಿ ಹೋರಾಟ ಮಾಡಲು ಸಾಧ್ಯವಿಲ್ಲದ ಸಾವಿರಾರು ಕುಟುಂಬಗಳು ತಮ್ಮ ಪಾಲಿನ ಭೂಮಿ ಕಳೆದುಕೊಂಡು ಇಂದಿಗೂ ಪರಿಹಾರಕ್ಕಾಗಿ ಅಲೆದಾಡುತ್ತಿವೆ. ಆದರೆ, ನ್ಯಾಯ ಮಾತ್ರ ಇನ್ನೂ ಸಿಕ್ಕಿಲ್ಲ. ಇಂತಹ ಪ್ರಕರಣಗಳ ಅದೆಷ್ಟೊ ಫೈಲುಗಳು ಯಾವ ಸರ್ಕಾರೀ ಕಚೇರಿಗಳ ಅಥವಾ ಯಾವ ನ್ಯಾಯಾಲಯಗಳ ರೆಕಾರ್ಡ್ ರೂಮುಗಳಲ್ಲಿ ಕೊಳೆಯುತ್ತಿವೆಯೋ?

ಅಷ್ಟಕ್ಕೂ ಈ ಭೂಸ್ವಾಧೀನವಾದಾಗ ಹಾವೇರಿ ಜಿಲ್ಲೆಯೇ ಆಗಿರಲಿಲ್ಲ. ಅದು ಹಳೆ ಧಾರವಾಡ ಜಿಲ್ಲೆಯ ಭಾಗವಾಗಿತ್ತು. ಮಾತ್ರವಲ್ಲ, ಕರ್ನಾಟಕ ರಾಜ್ಯವೇ ಉದಯಿಸಿರಲಿಲ್ಲ. ಇನ್ನು ವ್ಯಂಗ್ಯವೆಂದರೆ ಇದೆ ತಾಲೂಕಿನ ಆಡಳಿತ ಕೇಂದ್ರ ಬ್ಯಾಡಗಿ ನಗರದ ಮುಖ್ಯರಸ್ತೆ ಅಗಲೀಕರಣಕ್ಕಾಗಿ ಭೂಸ್ವಾಧೀನ ಮಾಡಲು ಈ ಅಧಿಕಾರಶಾಹಿಗೆ ಕಳೆದ 15 ವರ್ಷಗಳಿಂದ ಸಾಧ್ಯವಾಗಿಲ್ಲ ಎಂದರೆ ಆಡಳಿತಶಾಹಿ ಎಷ್ಟು ದಪ್ಪ ಚರ್ಮದ್ದಿರಬಹುದು.

ಇಂತಹ ಪ್ರಕರಣದಲ್ಲಿ ಅಧಿಕಾರಶಾಹಿ ಮಾನವೀಯ ನೆಲೆಯಲ್ಲಿ ಹೆಜ್ಜೆ ಇಡದೆ ಹೊರತು ಪರಿಹಾರ ಸಾಧ್ಯವಿಲ್ಲ. ಇಲ್ಲದಿದ್ದಲ್ಲಿ ಅದೆಷ್ಟು “ತಬರನ ಕಥೆಗಳು” ಕಥೆ ಆಗದೆ ಹಾಗೆ ಉಳಿಯುತ್ತವೋ ಕಾಲಗರ್ಭದಲ್ಲಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...