ಹಾವೇರಿ | ಕಿಶೋರಿಯರಿಗೆ ಶಿಕ್ಷಣ ಸಾಮಗ್ರಿ ವಿತರಣೆ

Date:

ದೇವದಾಸಿ ಕುಟುಂಬದ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಮತ್ತು ಸುಧಾರಣೆಗಾಗಿ ಹಿರೇಕೆರೂರ, ರಾಣೇಬೆನ್ನೂರ್, ತಾಲೂಕಿನ ಆಯ್ದ ಕಿಶೋರಿಯರಿಗೆ ಇಂದು ರಾಣೇಬೆನ್ನೂರ್ ಆಂಗ್ಲೋ ಹೈ ಸ್ಕೂಲ್ ಆವರಣದಲ್ಲಿ ಶಿಕ್ಷಣ ಸಾಮಗ್ರಿ ವಿತರಣೆ ಮಾಡಲಾಯಿತು.

ಹಾವೇರಿ ಜಿಲ್ಲೆಯ ರಾಣಿಬೆನ್ನೂರ ಪಟ್ಟಣದ ಆಗ್ಲೋ ಹೈಸ್ಕೂಲ್ ನಲ್ಲಿ ವನಸಿರಿ ಗ್ರಾಮೀಣ ಅಭಿರುದ್ದಿ ಸಂಸ್ಥೆ ರಾಣೇಬೆನ್ನೂರ ಚಿಲ್ಡ್ರನ್ ಇಂಡಿಯಾ ಫೌಂಡೇಶನ್ ಹಾಗೂ ಗುಡ್ ಯೋಜನೆ ಮೂಲಕ ರೋಟರಿ ಕ್ಲಬ್  ಸಾಮಗ್ರಿ ವಿತರಣಾ ಕಾರ್ಯಕ್ರಮ ನಡೆಯಿತು.

ಕಾರ್ಯಮದಲ್ಲಿ ರಾಮಚಂದ್ರ ಜಿ.ಎಸ್ ಮಾತನಾಡಿ, “ಹಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಶಾಲೆಯಿಂದ ಹೊರಗೆ ಉಳಿಯಬಾರದು. ಶಿಕ್ಷಣ ಜೊತೆಗೆ ವಿವಿಧ ಹಲವಾರು ಕೌಶಲ್ಯಗಳ ಬಗ್ಗೆ ಸಹ ತರಬೇತಿ ನೀಡುವಲ್ಲಿ ಮುಂದಿನ ದಿನಗಳಲ್ಲಿ ವನಸಿರಿ ಗ್ರಾಮೀಣ ಅಭಿರುದ್ದಿ ಸಂಸ್ಥೆ ಹಾಗೂ ರೋಟರಿ ಕ್ಲಬ್ ಮೂಲಕ ಸಹಾಯ ಮಾಡಲಾಗುವುದು. ಪ್ರತಿಯೊಬ್ಬ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ವನಸಿರಿ ಗ್ರಾಮೀಣ ಅಭಿವೃದ್ದಿ ಸಂಸ್ಥೆಯು ಪ್ರತಿ ವರ್ಷ ಬಡ ಮಕ್ಕಳಿಗೆ ನೆರವು ನೀಡಲಾಗುತ್ತದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವನಸಿರಿ ಸಂಸ್ಥೆ ಖಜಾಂಚಿ ಹಬೀಬ್ ಬಾನು ಹಾನಗಲ್ ಮಾತನಾಡಿ, “ಹೆಣ್ಣುಮಕ್ಕಳು ಕುಟುಂಬದಲ್ಲಿ ಬಡತನ ಕಾರಣಕ್ಕೆ ಶಾಲೆಯನ್ನು ಬಿಡದೆ ಕಷ್ಟ ಪಟ್ಟು ವಿಧ್ಯಬ್ಯಾಸ ಮಾಡಬೇಕು.  ತಂದೆ ತಾಯಿ ಹಾಗೂ ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಶಿಕ್ಷಣ ಅತ್ಯುತ್ತಮ ಸಾಧನವಾಗಿದೆ. ಪ್ರತಿಯೊಂದು ಮಕ್ಕಳು ವಾರ್ಷಿಕ ಪರೀಕ್ಷೆಯನ್ನು ಉತ್ತಮವಾಗಿ ಓದಿ ಪರೀಕ್ಷೆ ಸುಲಲಿತವಾಗಿ ಬರೆಯುವಂತೆ ಹಾಗೂ ಯಾವುದೇ ಒತ್ತಡಕ್ಕೆ ಒಳಗಾಗ ಬಾರದು” ಎಂದು ತಿಳಿಸಿದರು.

ಈ ಯೋಜನೆ ಮೇಲ್ವಿಚಾರಕರು ತರನುಮ ಖತಿಬ್, ಮಾತನಾಡಿ, “ಕಳೆದ ಒಂದು ವರ್ಷದಲ್ಲಿ ದೇವದಾಸಿ ಕುಟುಂಬದ ಆಯ್ದ ಹೆಣ್ಣುಮಕ್ಕಳ ಶಿಕ್ಷಣ ಸಲುವಾಗಿ ಮಕ್ಕಳಿಗೆ ಕಿಶೋರಿ ಆರೋಗ್ಯ, ಸ್ವಚ್ಛತೆ, ಕ್ರೀಡೆಗಳು ಹಾಗೂ ನಿರಂತರ ಶಿಕ್ಷಣಕ್ಕೆ ಬೇಕಾಗುವ ಮಕ್ಕಳಿಗೆ ಪ್ರೇರಣೆ ದಾಯಕ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ಹಾಗೂ ದೇವದಾಸಿ ಕುಟುಂಬಗಳ ಜೀವನ ಸುಧಾರಣೆಯ ಕಾರ್ಯಕ್ರಮ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.

ಸಭೆಯಲ್ಲಿ ಗಣಿತ ವಿಷಯ ಶಿಕ್ಷಕರು ಶಬ್ಬೀರ್ ಅಹ್ಮದ್ ಹಾಗೂ ವಿಜ್ಞಾನ ಶಿಕ್ಷಕಿ ಅಲಿಯಾ, ಅಂಜುಮ್ ಅವರು ವಿವಿಧ ವಿಷಯ ಉಪನ್ಯಾಸ ನೀಡಿದರು.

ವನಸಿರಿ ಗ್ರಾಮೀಣ ಅಭಿರುದ್ದಿ ಸಂಸ್ಥೆ ಕಾರ್ಯ ನಿರ್ವಾಹಕ ನಿರ್ದೇಶಕರು ಎಸ್, ಡಿ, ಬಳಿಗಾರ್ ಮಾತನಾಡಿ, “ಹೆಣ್ಣುಮಕ್ಕಳ ಶಿಕ್ಷಣ ಹಾಗೂ ಶಸಕ್ತಿಕಾರಣ ಯೋಜನೆ ಪ್ರತಿ ವರ್ಷ ಬಡ ಪ್ರತಿಭವಂತ ಮಕ್ಕಳಿಗೆ ಟ್ಯೂಷನ್, ಶಿಕ್ಷಣ ಸಾಮಗ್ರಿ , ಸ್ಕ್ಯಾಲರ್ ಶಿಪ್ ನೀಡಿ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತಗಬಾರದು ಅನ್ನುವ ಗುರಿ ಹೊಂದಿದೆ ಹಾಗೆ ಈ ವರ್ಷ ದೇವದಾಸಿ ಕುಟುಂಬದಿಂದ 100 ಮಕ್ಕಳಿಗೆ ನೆರವು ನೀಡಲಾಗುತ್ತದೆ” ಎಂದು ತಿಳಿಸಿದರು.

WhatsApp Image 2024 10 05 at 15.43.57 586b60ff min e1728123396595
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...