ಗಣೇಶ ವಿಸರ್ಜನೆ ವೇಳೆ ಡಿಜೆ ಸೌಂಡ್ ಹಾಕಿ, ಕಾರ್ಯಕರ್ತರು ಹಾಗೂ ಯುವಕರು ಕುಣಿದು ಕುಪ್ಪಳಿಸಿದ್ದು, ಪೊಲೀಸರು ಡಿಜೆಯನ್ನು ವಶಕ್ಕೆ ಪಡೆದು, ಸರ್ಕಾರದ ಆದೇಶ ಉಲ್ಲಂಘನೆ ಮಾಡಿದ ಆರೋಪದಡಿ ಹಾವೇರಿ ಪೊಲೀಸರು 16 ಜನರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಾವೇರಿ ಪಟ್ಟಣದಲ್ಲಿ ರಾತ್ರಿ 12 ಗಂಟೆವರೆಗೆ ಡಿಜೆ ಬಳಸಿ, ಸಾರ್ವಜನಿಕರ ಶಾಂತಿಗೆ ಭಂಗ ತಂದಿದ್ದು, ಡಿಜೆ ಮಾಲಕರು ಹಾಗೂ ಗಣಪತಿ ಉತ್ಸವ ಸಮಿತಿ ಮುಖಂಡರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ.
ಅಲ್ಲದೇ ಗಜಾನನ ಉತ್ಸವ ಸಮಿತಿಯ 16 ಸದಸ್ಯರಾದ ನಿಖಿಲ್, ಶಿವರಾಜ್, ಬಸವರಾಜ್, ಕಿರಣ್, ಗಂಗಾಧರ್, ಆಕಾಶ, ರಾಘವೇಂದ್ರ, ಈರಣ್ಣ, ಸಿದ್ದಲಿಂಗಪ್ಪ, ಜೀವನ್, ಪವನ್, ಗಿರೀಶ್, ಮನೋಜ್, ಹರೀಶ್ ಕುಮಾರ್ ಸೇರಿದಂತೆ 16 ಜನರ ಮೇಲೆ ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಭಾಷ್ ಸರ್ಕಲ್ ಗಜಾನನ ಉತ್ಸವ ಸಮಿತಿ ಮುಖಂಡರು, ಹಾವೇರಿ ಕಾ ರಾಜಾ ಗಣಪತಿ ಉತ್ಸವ ಸಮಿತಿ ಹಾಗೂ ಡಿಜೆ ಮಾಲೀಕರ ವಿರುದ್ಧ ಸರ್ಕಾರದ ಆದೇಶ ಉಲ್ಲಂಘನೆ ಮಾಡಿದ ಆರೋಪದಡಿ ಕೇಸ್ ದಾಖಲಿಸಿಕೊಂಡಿದ್ದಾರೆ.





