ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉಚಿತ ಮಧ್ಯಾಹ್ನದ ಊಟ ವಿತರಣೆಯ ಸಮಾಜಮುಖಿ ಫಲಹಿ ಕಾರ್ಯಕ್ರಮವನ್ನು ಉಮ್ಮತ್ ವೆಲ್ಫೇರ್ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ (UWECT) ವತಿಯಿಂದ ಹಮ್ಮಿಕೊಳ್ಳಲಾಗಿದ್ದು, ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಸರಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.
ಟ್ರಸ್ಟ್ ಸದಸ್ಯರು ರಾಣೇಬೆನ್ನೂರು ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಮುನಾವರ್ ಅವರನ್ನು ಭೇಟಿ ಮಾಡಿ, ಪ್ರತಿ ಮಂಗಳವಾರ ರೋಗಿಗಳು ಮತ್ತು ಅವರ ಜತೆಗಾರರಿಗೆ ಉಚಿತ ಮಧ್ಯಾಹ್ನದ ಊಟ ವಿತರಣೆ ಮಾಡಲು ಕೇಳಿದಾಗ, ಸಂತೋಷದಿಂದ ಒಪ್ಪಿಕೊಂಡರು ” ಎಂದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಮುಷ್ಟಾಕ್ ಅಹ್ಮದ್ ಸೈಕಲಗಾರ ಮಾತನಾಡಿ, “ದೂರದ ಊರುಗಳಿಂದ ಚಿಕಿತ್ಸೆಗಾಗಿ ಬರುವ ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟ ಅಥವಾ ರೋಗಿಯ ಆರೈಕೆಯಿಂದಾಗಿ ಊಟವನ್ನೇ ತಪ್ಪಿಸಿಕೊಳ್ಳುವ ಪರಿಸ್ಥಿತಿಗೆ ಒಳಗಾಗುತ್ತಾರೆ. ಅಂತವರಿಗೆ ಈ ಕಾರ್ಯಕ್ರಮ ಪ್ರಯೋಜನ ಆಗಲಿದೆ” ಎಂದರು.
“ಉಮ್ಮತ್ ವೆಲ್ಫೇರ್ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ಮೂಲಕ ಪ್ರತೀ ವಾರ ಸ್ವಚ್ಛ, ಆರೋಗ್ಯಕರ ಹಾಗೂ ತಾಜಾ ಆಹಾರ ಒದಗಿಸಲು ಮುಂದಾಗಿದೆ” ಎಂದರು.
“ಟ್ರಸ್ಟ್ ತಂಡವು ಆಸ್ಪತ್ರೆಯ ಆಡಳಿತಕ್ಕೆ ಆಹಾರವನ್ನು ಸಂಪೂರ್ಣ ಹೈಜಿನಿಕ್ ರೀತಿಯಲ್ಲಿ ತಯಾರಿಸಿ, ಸುರಕ್ಷಿತವಾಗಿ ಸಾಗಿಸಿ, ಯಾವುದೇ ಅಡಚಣೆ ಉಂಟಾಗದಂತೆ ಶಿಸ್ತುಬದ್ಧವಾಗಿ ವಿತರಿಸಲಾಗುತ್ತದೆ ಎಂದು ಭರವಸೆ ನೀಡಿತು.
“ಆಸ್ಪತ್ರೆಯ ಎಲ್ಲಾ ಸ್ವಚ್ಛತೆ, ಭದ್ರತೆ ಮತ್ತು ಆಡಳಿತ ಮಾರ್ಗಸೂಚಿಗಳನ್ನು ಪಾಲಿಸಲಾಗುವುದು” ಎಂದೂ ತಿಳಿಸಿದರು.

ಟ್ರಸ್ಟ್‌ನ ಈ ಸಮಾಜಮುಖಿ ಕಾರ್ಯವನ್ನು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮುನಾವರ್ ಅವರು ಶ್ಲಾಘಿಸಿದರು.
ಕಾರ್ಯಕ್ರಮದ ಆರಂಭದ ದಿನ ರಾಣೇಬೆನ್ನೂರು ತಹಶೀಲ್ದಾರ್ ಶ್ರೀ R. H. ಭಗವಾನ್ ಆಸ್ಪತ್ರೆಯನ್ನು ಭೇಟಿ ಮಾಡಿ ಕಾರ್ಯಕ್ರಮವನ್ನು ವೀಕ್ಷಿಸಿದ ಅವರಿಗೆ ಟ್ರಸ್ಟ್ ಅಧ್ಯಕ್ಷ ಮುಷ್ಟಾಕ್ ಅಹ್ಮದ್ ಸೈಕಲಗಾರ ಅವರು ಶಾಲ್ ಹೊದಿಸಿ ಗೌರವಿಸಿದರು.
ಕಾರ್ಯಕ್ರಮದ ನಂತರ ಅಧ್ಯಕ್ಷ ಮುಷ್ಟಾಕ್ ಅಹ್ಮದ್ ಸೈಕಲ್ಗರ್ ಹೇಳುವಂತೆ, “ಈ ಮೊದಲ ಕಾರ್ಯಕ್ರಮದ ಯಶಸ್ಸು ಕಂಡಿದೆ. ಇಂತಹ ಸೇವಾ ಚಟುವಟಿಕೆಗಳ ಅಗತ್ಯ ಮತ್ತು ಪರಿಣಾಮಕಾರಿತ್ವವನ್ನು ಸಾಬೀತುಪಡಿಸಿದೆ. UWECT ಮುಂದೆಯೂ ಇದೇ ಉತ್ಸಾಹದಿಂದ ಸೇವೆ ಮುಂದುವರಿಸುತ್ತದೆ” ಎಂದರು.
ಟ್ರಸ್ಟ್‌ನ ಸಂಪೂರ್ಣ ತಂಡ ಎ. ಎ. ಬಣಕಾರ, ಎ.ಎಚ್.ರೋಟಿವಾಲೆ, ಅನ್ಸಾರ್ ಖಾಜಿ, ಘೌಸ್ ಮತ್ತು ಎಲ್ಲಾ ಟ್ರಸ್ಟಿ ಸದಸ್ಯರು ಸಮಾಜದ ಹಿತಕ್ಕಾಗಿ ಇನ್ನಷ್ಟು ಫಲಹಿ ಕಾರ್ಯಕ್ರಮಗಳನ್ನು ಕೈಗೊಳ್ಳುವ ಬದ್ಧತೆಯನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟಿ ಮುಖಂಡರು ಜಾಕೀರ‍್ ಚಿಕ್ಕೇನೂರು, ಸರ್ಫರಾಜ್ ಕಲೆದೇವರ, ನೌಷಾದ್ ಖಾಜಿ, ಮುನೀರ್ ಕ್ಯಾದಗಿಕೊಪ್ಪ ಇದ್ದರು.





