“ಗ್ರಾಮಿಣ ಪ್ರದೇಶಗಳ ಅಭಿವೃದ್ಧಿ ಆಗಬೇಕಾದರೆ ಸರ್ಕಾರಿ ಆಸ್ಪತ್ರೆ, ಗಟಾರಗಳ ಸ್ವಚ್ಛತೆ, ವಿದ್ದುತ್, ಶುದ್ಧು ನೀರು, ವಸತಿಯಂತಹ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದಾಗ ಹಳ್ಳಿಗಳು ಉತ್ತಮ ಬೆಳವಣಿಗೆ ಹೊಂದಲು ಸಾಧ್ಯ” ಎಂದು ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೆಶಕರು ಸಿಸ್ಟರ್ ಅನಿತಾ ಡಿಸೋಜಾ ಹೇಳಿದರು.
ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಸಾಂವಸಗಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಪ್ರಗತಿಪರ ಸಂಘಟನೆ, ಸಾಂವಸಗಿ ಗ್ರಾಮ ಪಂಚಾಯತ ಹಾಗೂ ರೋಶನಿ ಸಮಾಜ ಸೇವಾ ಸಂಸ್ಥೆ ಸಹಯೋಗದಲ್ಲಿ ‘ಕರವಸೂಲಿ’ ಬೀದಿ ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಹಾನಗಲ್ಲ ತಾಲೂಕು ಮಾದರಿ ಆಗಬೇಕಾದರೆ ಜನರು ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಅರಿತು ಇತರರಿಗೆ ತಮ್ಮ ಮನೆ ಟ್ಯಾಕ್ಸ್ ಕಟ್ಟಿ ಮಾದರಿ ಆಗುವುದರ ಜೊತೆಗೆ ಹಳ್ಳಿಗಳ ಅಭಿವೃದ್ದಿಗೆ ಪ್ರತಿ ಕುಟುಂಬದವರು ಕೈ ಜೋಡಿಸಬೇಕಾಗುತ್ತದೆ” ಎಂದರು.
ಪ್ರಗತಿಪರ ಸಂಘಟಣೆಯ ಮುಖಂಡರು ಹಾಗೂ ಹಿಂದೂಳಿದ ವರ್ಗಗಳ ಇಲಾಖೆಯ ನಿವೃತ ಎಮ್. ಎನ್. ಪೂಜಾರ ಅವರು ಮಾತನಾಡಿ, “ಜನರ ಮನದಾಳದಲ್ಲಿ ಸುಂದರ ಗ್ರಾಮದ ಕನಸು ಬಿತ್ತಿ ನಮ್ಮ ಮುಂದಿನ ಮಕ್ಕಳ ಭವಿಷ್ಯಕಾಗಿ ಸ್ವಚ್ಛಂದ ಪರಿಸರ ನಿರ್ಮಾಣ ಮಾಡಲು ಜನರಲ್ಲಿ ಜಾಗೃತಿ ಮೂಡಿಸಬೇಕು. ಪಂಚಾಯತ ವ್ಯಾಪ್ತಿಯ 5 ಹಳ್ಳಿಗಳಲ್ಲಿ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜನರು ಟ್ಯಾಕ್ಸ್ ಕಟ್ಟಲು ಮುಂದೆ ಬರುತ್ತಿರುವುದು ಒಳ್ಳೆಯ ಬೆಳವಣಿಗೆ” ಎಂದು ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು.
“ಪಂಚಾಯತ ಅಭಿವೃದ್ಧಿ ಅಧಿಕಾರಿ ಸುಮಂಗಳಾ ದೇವಗೆರಿ ಅವರು, “ಬೀದಿ ನಾಟಕ ಜಾಗೃತಿಯಿಂದ ಸ್ಥಳದಲ್ಲಿ 30000 ರೂ ಮನೆ ಟ್ಯಾಕ್ಸ್ ಕಟ್ಟಿರುವುದು ಜನರಲ್ಲಿ ಜವಬ್ದಾರಿ ಹೆಚ್ಚಿದೆ” ಎಂದು ಸಂತಸ ವ್ಯಕ್ತ ಪಡಿಸಿದರು.
“ಸಾಂವಸಗಿ ಗ್ರಾಮ ಪಂಚಾಐತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಯಾವುದೇ ಅಭಿವೃದ್ಧಿಗೆ ಸಂಬಂದಿಸಿದ ಸಮಸ್ಯೆಗಳು ಕಂಡುಬಂದಲ್ಲಿ ಮನವಿ ನೀಡಿದರೆ ತಕ್ಷಣವೇ ಸ್ಪಂದಿಸಿ ಸರಿಪಡಿಸುವುದಾಗಿ” ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ಸಂಘಟಣೆಯ ಗೌರವಾಧ್ಯಕ್ಷ ಡಾ. ಎನ್ ಎಫ್ ಕಮ್ಮಾರ, ಬಿ ಆರ್ ಶೆಟ್ಟರ, ಪೈರೊಜನ್ಮದ ಶಿರಬಡಗಿ, ರವಿರಾಜ ತೀರುಮಲೆ, ನ್ಯಾಯವಾದಿ ಎನ್ ಎಮ್ ನೆಗಳೂರು, ಜವೇದಿಕೆಯ ಕಲೀಮ ಮಾಸನಕಟ್ಟಿ, ಪಕ್ಕಿರಪ್ಪ ಬಾಳೂರು, ರೋಶನಿ ಸಂಸ್ಥೆಯ ಸಿಸ್ಟರ್ ಶಾಂತಿ ಡಿಸೋಜಾ, ಸಿಸ್ಟರ್ ಇವುಲಿನ, ಕೆ ಎಫ್ ನಾಯ್ಕರ, ಸಿಸ್ಟರ್ ಅಮ್ಮಿತಾ ಮಸ್ಕರನೆಸ್, ಸಿಸ್ಟರ್ ಜಾನೇಟ್ ಪಿಂಟೊ, ಸಿಸ್ಟರ್ ಬೆಣ್ಣೆ ಬೆಣಿಡಿಕ್ಷಾ, ಸಿಸ್ಟರ್ ಟ್ರೇಜಾ ಸಿಸ್ಟರ್ ಕ್ಲೀಟಾ, ಹಾಜರಿದ್ದರು.
ಬೀದಿನಾಟಕದ ಮಾರ್ಗದರ್ಶಕಾರಾಗಿ ಸಾಹಿತಿ ಎಮ್ ಪ್ರಸನಕುಮಾರ, ಅಶೋಕ ದಾಸರ, ಕಾರ್ಯನಿರ್ವಹಿಸಿದರು ರೋಶನಿ ಸಂಸ್ಥೆಯ ಪ್ರೀ ನಾವೀಸಸ್ ಪ್ರಶಿಕ್ಷಣಾರ್ಥಿಗಳು ತಂಡದ 11 ಸಿಸ್ಟರವರು ಬೀದಿನಾಟಕ ಪಾತ್ರದಾರಿರಾಗಿದ್ದರು. ಮಲ್ಲಿಗಾರ, ಸಂವಸಗಿ, ಸಾತೆನಹಳ್ಳಿ, ಶಿರ್ಮಾಪುರ, ಕಾಡಶೆಟ್ಟಿಹಳ್ಳಿ 5 ದಿನಗಳಕಾಲ ನಾಟಕವನ್ನು ಸಾವಿರಾರು ಜನ ವಿಕ್ಷಣೆ ಮಾಡಿದರು ಪಂಚಾಯತ ಸಿಬಂದ್ದಿ ರೋಶನಿ ಸಿಬ್ಬಂದಿ ಹಾಜರಿದ್ದರು.





