“ಸಮುದಾಯದಲ್ಲಿ ಬೆರೆತು ಕೆಲಸ ಮಾಡುವಾಗ ಸಾಮಾಜಿಕ ಕಾರ್ಯಕರ್ತರ ಆರೋಗ್ಯ ಬಹಳ ಮುಖ್ಯ. ಹಲವು ಸ್ವಭಾವದ ಜನರೊಡನೆ ಒಳಗೊಳ್ಳಲು ಆರೋಗ್ಯ ಸಂಪತ್ತು ಬೇಕು. ಅಂದಾಗ ಮಾತ್ರ ಉತ್ತಮ ಸಮಾಜ ಸೇವಕರಾಗಲು ಸಾಧ್ಯ” ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಯಶ್ರೀ ಪಾಟೀಲ ಹೇಳಿದರು.
ಹಾವೇರಿ ಪಟ್ಟಣದ ಶಿವಾಜಿ ನಗರದ ಮೂರನೇಯ ಕ್ರಾಸ್ ನಲ್ಲಿರುವ ಮಹಿಳಾ ಶಕ್ತಿ ಸದನದಲ್ಲಿ ನಡೆದ ಎರಡು ದಿನಗಳ ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರಿಗೆ ಮಾನಸಿಕ ಆರೋಗ್ಯ ಕಾರ್ಯಾಗಾರವನ್ನು ಉದ್ಘಾಟಿಸಿ ನುಡಿದರು.
ಮನೋವೈದ್ಯಕೀಯ ಸಮಾಜ ಕಾರ್ಯ ವಿಭಾಗ ಮತ್ತು ರಾಷ್ಟ್ರೀಯ ಮಾನಸಿಕ ನರವಿಜ್ಞಾನ ಸಂಸ್ಥೆಯ ಸಂಶೋಧಕ ಡಾ. ಶಿವಾನಂದ ಯರೇಶೀಮಿ ಶಿಬಿರದ ನಿರ್ದೇಶಕರು ಮಾತನಾಡಿ, “ನನ್ನ ತವರು ಜಿಲ್ಲೆಯಾದ ಹಾವೇರಿಯನ್ನೇ ಸಮೂದಾಯ ಮಾನಸಿಕ ಆರೋಗ್ಯ ಅಧ್ಯಯನಕ್ಕ ಆಯ್ಕೆ ಮಾಡಿಕೊಂಡಿದ್ದು ಇನ್ನೂ ಅನೇಕ ಕಾರ್ಯಾಗಾರಗಳನ್ನು ನಡೆಸಲಿಚ್ಚಿಸುವೆ” ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರು ಪರಿಮಳಾ ಜೈನ್ ಮಾತನಾಡಿ, “ಮಹಿಳಾ ಸ್ವಧಾರದಲ್ಲಿ ಮಾನಸಿಕವಾಗಿ ತೊಂದರೆಗೊಳಗಾದ ಅನೇಕ ಮಹಿಳೆಯರು ಆಗಾಗ ದಾಖಲಾಗುತ್ತಿದ್ದಾರೆ. ಅಂಥವರ ಮನೋರೋಗವನ್ನು ಗುಣ ಪಡಿಸಿ ಮುಖ್ಯವಾಹಿನಿಗೆ ತರುವುದೇ ಕಾರ್ಯಾಗಾರದ ಉದ್ದೇಶ” ಎಂದರು.
ಬೆಂಗಳೂರಿನ ನಿಮಾಮ್ಸ್ ಮತ್ತು ನಗರದ ಇಡಾರಿ ಸಂಸ್ಥೆಗಳು ಜಂಟಿಯಾಗಿ ಏರ್ಪಡಿಸಿದ್ದ ಈ ಕಾರ್ಯಾಗಾರದಲ್ಲಿ ಜಿಲ್ಲೆಯ ಸ್ವಯಂಸೇವಾ ಸಂಸ್ಥೆಗಳ ೩೫ ಕಾರ್ಯಕರ್ತರು ಎರಡು ದಿನಗಳ ಕಾಲ ತರಬೇತಿ ಪಡೆದರು.
ಕಾರ್ಯಕ್ರಮದಲ್ಲಿ ಬಸವರಾಜ ಪೂಜಾರ, ರೇಣುಕಾ ಕಹಾರ, ಡಾ. ಬಸನಗೌಡ ಪಾಟೀಲ, ನಾಗರಾಜ ಹುಡೇದ, ಮಂಜುನಾಥ ಸಂಣ್ಣಿಂಗಮ್ಮನವರ, ಎಚ್.ಎಫ್ ಮಜೀದ್, ಡಾ. ಶಂಕರ ಪೇಠಕರ, ಶೈಲಾ ಎನ್, ಹಾಲಮ್ಮಾ ಕಳಸಾಪೂರ, ಲೇಖಕಿ ಭಾಗ್ಯಾ ಎಂ.ಕೆ, ನಾಗರಾಜ ಹುಡೇದ ಮುಂತಾದವರು ಭಾಗವಹಿಸಿದ್ದರು.





