“ಶಿಕ್ಷಣ ಮತ್ತು ಉದ್ಯೋಗ ಮೂಲಭೂತ ಹಕ್ಕಾಗಬೇಕು. ಮೊದಲು ಶಿಕ್ಷಣ ಮುಖ್ಯ. ಹಿಜಾಬ್-ಕೇಸರಿ ಶಾಲ್ ವಿವಾದ ಮಾಡಿಕೊಳ್ಳಲು ಅವಕಾಶ ಕಲ್ಪಿಸಬಾರದು. ಯಥಾಸ್ಥಿತಿ ಜೀವನವನ್ನು ವಿದ್ಯಾರ್ಥಿಗಳು ಕಾಯ್ದುಕೊಳ್ಳುಬೇಕು. ವಿದ್ಯಾರ್ಥಿಗಳು ಈ ಅತಿರೇಕದ ವರ್ತನೆಗಳಿಗೆ ಬಲಿಯಾಗಬಾರದು” ಎಸ್ ಎಫ್ ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡಿದರು.
ಹಾವೇರಿ ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ನೀಡಿದ ಅವರು “ವಿದ್ಯಾರ್ಥಿಗಳ ಐಕ್ಯತೆಯನ್ನು ಮುರಿಯಲು ಕಾಲೇಜು ಕ್ಯಾಂಪಸ್ ಗಳಲ್ಲಿ ಹಿಜಾಬ್ v/s ಕೇಸರಿ ಶಾಲು ವಿವಾದ ಸೃಷ್ಟಿಸಿರುವುದನ್ನು ಭಾರತ ವಿದ್ಯಾರ್ಥಿ ಫೆಡರೇಶನ್ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ” ಎಂದು ಹೇಳಿದರು.
“ಹಾವೇರಿ ಜಿಲ್ಲೆಯ ಅಕ್ಕಿಆಲೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಹಿಜಾಬ್ ಕೇಸರಿ ವಿವಾದ ಬೇಸರದ ಸಂಗತಿ ಆಗಿದೆ. ಹೀಜಾಬ್ ಮತ್ತು ಕೇಸರಿ ಶಾಲುಗಳಿಂದ ಶೈಕ್ಷಣಿಕ ವಾತಾವರಣ ಹದಗೆಡುತ್ತಿದೆ. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಕೋಮು ಪ್ರಚೋದನೆ ಶಕ್ತಿಗಳಿಗೆ ಒಳಗಾಬಾರದು. ತಮ್ಮ ತನವನ್ನು ಕಳೆದುಕೊಂಡು ಶೈಕ್ಷಣಿಕ ವಾತಾವರಣ ಹದಗೆಡಲು ಬಿಡಬಾರದು” ಎಂದು ಎಸ್ಎಫ್ಐರಾಜ್ಯ ಸಮಿತಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
“ವಿದ್ಯಾರ್ಥಿಗಳು ಕೋಮ ಪ್ರಚೋದನೆ ಶಕ್ತಿಗಳಿಗಾಗಿ ಒಳಗಾಗದೆ, ನಾವೆಲ್ಲರೂ ಒಂದೇ ಎಂಬ ಐಕ್ಯತೆಯ ಮಂತ್ರದಿಂದ ಕಟ್ಟಿ ಬೆಳೆಸಬೇಕಾಗಿದೆ. ವಿದ್ಯಾರ್ಥಿಗಳು ಎದುರಿಸುತ್ತಿರುವ ಶೈಕ್ಷಣಿಕ ಸಮಸ್ಯೆಗಳ ವಿರುದ್ಧ ವಿದ್ಯಾರ್ಥಿಗಳು ಐಕ್ಯತೆಯಿಂದ ಹೋರಾಡಬೇಕು” ಹೇಳಿದರು.
ಎಸ್ಎಫ್ಐ ಮುಖಂಡರಾದ ಅರುಣ್ ನಾಗವತ್, ಚೈತ್ರಾ ಕೊರವರ, ಫಕ್ಕಿರೇಶ್ ಮ್ಯಾಗಳಮನಿ, ಧನುಷ್ ದೊಡ್ಡಮನಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದರು.





