ಇವತ್ತಿನ ದಿನ ಕನ್ನಡಪರ ಸಂಘಟನೆಗಳು ಇಲ್ಲವಾಗಿದ್ದರೆ ಅಕ್ಕ ಪಕ್ಕದ ರಾಜ್ಯಗಳು ನಮ್ಮ ರಾಜ್ಯವನ್ನು ಕಂಬಳಿಸಿ ಬಿಡುತ್ತಿದ್ದವು. ನಮ್ಮ ಸಂಘಟನೆ ನಾಡು, ನುಡಿ, ಜಲ, ಭಾಷೆಯ ಸಲುವಾಗಿ, ಬಡವರ, ದಲಿತರ ಹಾಗೂ ಸಮಾಜದ ಕಟ್ಟೆ ಕಡೆಯ ವ್ಯಕ್ತಿಗೆ ಅನ್ಯಾಯವಾದಾಗ ಧ್ವನಿಯೆತ್ತುವ ಕೆಲಸ ಮಾಡುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗದ ವತಿಯಿಂದ ಹಾವೇರಿಯಲ್ಲಿ ಹಮ್ಮಿಕೊಂಡಿದ್ದ, ಕರ್ನಾಟಕ ರತ್ನ ಡಾಕ್ಟರ್ ವಿಷ್ಣುವರ್ಧನ್ ಸ್ಮರಣಾತ್ಮಕವಾಗಿ “ಕೆಚ್ಚೆದೆ ಕನ್ನಡಿಗರ ಹಬ್ಬ” ಕಾರ್ಯಕ್ರಮವದಲ್ಲಿ ರಾಜ್ಯಾಧ್ಯಕ್ಷ ಡಾ. ಎಂ. ಲಿಂಗರಾಜು ಮಾತನಾಡಿದರು.
ಕರವೇ ಸ್ವಾಭಿಮಾನಿ ಬಳಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಮರಾಠೆ ಅವರ ನೇತೃತ್ವದಲ್ಲಿ ಹೊಸಮನಿ ಸಿದ್ದಪ್ಪ ಸರ್ಕಲ್ ನಿಂದ ಭುವನೇಶ್ವರಿ ಭಾವಚಿತ್ರದ ಮೆರವಣಿಗೆಯೊಂದಿಗೆ ಪ್ರಮುಖ ಬೀದಿಗಳಲ್ಲಿ ವಾದ್ಯ ಮೇಳಗಳೊಂದಿಗೆ ಸಂಚರಿಸಿ, ಜಿಲ್ಲಾ ಗುರುಭವನಕ್ಕೆ ತಲುಪಿತು. ತದನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬಸವ ಶಾಂತಲಿಂಗ ಸ್ವಾಮಿಗಳು, ಹೊಸಮಠ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಮಹಿಳಾ ಅಧ್ಯಕ್ಷೆ ಗೀತಾಬಾಯಿ ಲಮಾಣಿ ಮಾತನಾಡಿದರು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಿಗಿದವು. ಇದೇ ಸಂದರ್ಭದಲ್ಲಿ ಕಲಾವಿದರಿಗೆ ಸನ್ಮಾನಿಸಿ, ಗೌರವಿಸಿದರು.
ಇದನ್ನೂ ಓದಿ ಚಳಿಗಾಲದಲ್ಲಿ ಆರೋಗ್ಯ ಕಾಪಾಡುವ ಸವಾಲು; ಮುನ್ನೆಚ್ಚರಿಕೆಯೇ ಮದ್ದು
ಉತ್ತರ ಕರ್ನಾಟಕ ಕಾರ್ಯಾಧ್ಯಕ್ಷ ಯೂಸುಫ್ ಸೈಕಲಗಾರ, ಜಿಲ್ಲಾಧ್ಯಕ್ಷ ಯಲ್ಲಪ್ಪ ಮರಾಠೆ, ಹಾವೇರಿ ತಾಲೂಕ ಅಧ್ಯಕ್ಷ ರಾಜಾಭಕ್ಷ ಮಾನೇಗಾರ, ಕಲಂದರ್ ಎಲೆದಹಳ್ಳಿ, ಅನಿಲ್ ಮಾವಕರ್, ಮಂಜು ಮ್ಯಾಗೇರಿ, ಪರಶುರಾಮ ಮೋಟೆ, ಈರಪ್ಪ ಅಂಗಡಿ, ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು, ಎಲ್ಲಾ ತಾಲೂಕ ಅಧ್ಯಕ್ಷರು, ಕಾರ್ಯಕರ್ತರು ಭಾಗವಹಿಸಿದ್ದರು.





