ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ ಆರ್ ಗವಾಯಿಯವರ ಮೇಲೆ ಶೂ ಎಸೆದು ಶೂ ಎಸೆದು ಹಲ್ಲೆ ಮಾಡಲು ಮುಂದಾದ ದೇಶದ್ರೋಹಿ ವಕೀಲ ಯಾವುದೇ ಜಾತಿ ಧರ್ಮದವನಾದರೂ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಈತನ ವಿರುದ್ಧ ಯುಎಪಿಎ ಕಾಯಿದೆ ಅಡಿ ಪ್ರಕರಣ ದಾಖಲಿಸಿ ಆತನ್ನು ಬಂಧಿಸಬೇಕು, ಅಲ್ಲದೆ ಆತನನ್ನು ವಿಚಾರಣೆಗೊಳಪಡಿಸಿ ಸತ್ಯವನ್ನು ಬಹಿರಂಗಗೊಳಿಸಬೇಕು ಎಂದು ದಲಿತ ಒಕ್ಕೂಟದ ಕಾರ್ಯಕರ್ತರು ಆಗ್ರಹಿಸಿದರು.
ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ದಲಿತ ಒಕ್ಕೂಟಗಳ ಸಹಯೋಗದೊಂದಿಗೆ ಸೋಮವಾರ ಪ್ರತಿಭಟನೆ ನಡೆಸಿ ನ್ಯಾಯಮೂರ್ತಿ ಬಿ ಆರ್ ಗವಾಯಿಯವರ ಮೇಲೆ ಶೂ ಎಸೆದಿರುವುದನ್ನು ಖಂಡಿಸಿದ್ದು, ತಹಶೀಲ್ದಾರರ ಮೂಲಕ ರಾಷ್ಟಪತಿಯವರಿಗೆ ಮನವಿ ಸಲ್ಲಿಸಿದರು.
ದಲಿತ ಮುಖಂಡ ರಾಮಚಂದ್ರ ಕಲ್ಲೇರ ಮಾತನಾಡಿ, “ಈ ದೇಶದಲ್ಲಿ ಸಂವಿಧಾನವೇ ಅಪಾಯದಲ್ಲಿ ಸಿಲುಕಿದೆ. ಸಂವಿಧಾನ ಉಳಿಸುವ ಕೆಲಸವನ್ನು ದೇಶದ ಜನರು ಮಾಡಲೇಬೇಕಾದ ಅಗತ್ಯತೆ ಎದ್ದುಕಾಣುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದರು.
“ಸಂವಿಧಾನಕ್ಕೆ ಅಪಾಯ ತಂದೊಡ್ಡುವ ಮನಸ್ಸುಗಳ ವಿರುದ್ಧ ಹಗಲಿರುಳು ಹೋರಾಟ ಮಾಡುವುದು ಅನಿವಾರ್ಯವಾಗಿದ್ದು, ಬಾಬಾ ಸಾಹೇಬ ಅಂಬೇಡ್ಕರ್ ಅವರು ಹಾಕಿಕೊಟ್ಟ ಬುನಾದಿಯ ಮೇಲೆ ಚಲಿಸಿದ್ದೇ ಆದಲ್ಲಿ ದೇಶಾದ್ಯಂತ ಅಶಾಂತಿ ಮೂಡಿಸುವಂಥ ಕೈಗಳನ್ನು ಕಟ್ಟಿಹಾಕಬಹುದು” ಎಂದು ಅಭಿಪ್ರಾಯಪಟ್ಟರು.
“ಸಿಜೆಐ ಮೇಲೆ ಶೂ ಎಸೆದ ದುಷ್ಟ ವಕೀಲ ರಾಕೇಶ್ ಕಿಶೋರ್ ಉದ್ದೇಶ ದೇಶದ್ರೋಹಿ ನಡೆಯಾಗಿದ್ದು, ಕೂಡಲೇ ಸರ್ಕಾರ ಆತನನ್ನು ದೇಶದಿಂದಲೇ ಗಡಿಪಾರು ಮಾಡಬೇಕು” ಎಂದು ಒತ್ತಾಯಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಪ್ರತಿಭಟನಾ ಮೆರವಣಿಗೆ ನಗರದ ಪ್ರವಾಸಿ ಮಂದಿರದಿಂದ ಹೊರಟು ಕನಕ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಘೋಷಣೆಗಳನ್ನು ಕೂಗುತ್ತ ತಾಲೂಕು ಪಂಚಾಯತ್ ಆವರಣದಲ್ಲಿರುವ ಡಾ. ಬಿ ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಈ ಸುದ್ದಿ ಓದಿದ್ದೀರಾ? ಮೈಸೂರು | ‘ಇಂದಿರಾ ಆಹಾರ ಕಿಟ್’ ವಿತರಣೆಗೆ ರೈತ ಸಂಘದ ಸ್ವಾಗತ
ಪ್ರತಿಭಟನೆಯಲ್ಲಿ ಮುಖಂಡರಾದ ಪುಟ್ಟಪ್ಪ ನರೇಗಲ್, ಟಾಕನಗೌಡ ಪಾಟೀಲ್, ಜಯರಾಮ ಮಾಳಾಪುರ, ಕೊಟ್ರಪ್ಪ ಕುದರಿಸಿದ್ದನವರ, ಅನಿತಾ ಡಿಸೋಜ, ಚಂದ್ರಪ್ಪ ಹರಿಜನ, ಸಿದ್ಧನಗೌಡ ಪಾಟೀಲ, ವಿಜಯಕುಮಾರ್ ದೊಡ್ಡಮನಿ, ಎನ್ ಎಂ ಪೂಜಾರ, ಮಂಜುನಾಥ ಗೊರಣ್ಣನವರ್, ಅಣ್ಣಪ್ಪ ಚಿಕ್ಕಣ್ಣನವರ್, ಬರಮಣ್ಣ ಶಿವೂರ, ಉಮೇಶ್ ಮಾಳಗಿ, ಮಂಜುನಾಥ ಕರ್ಜಗಿ, ನೀಲಪ್ಪ ದೊಡ್ಡಮನಿ, ಶಿವಾನಂದ ಕನ್ನಕ್ಕನವರ್, ಹನುಮಂತಪ್ಪ ಯಳ್ಳೂರ, ಉಮೇಶ್ ದೊಡ್ಡಮನಿ, ಶಿವು ಭದ್ರಾವತಿ, ಶಿವು ತಳವಾರ, ಶಿವಪುತ್ರಪ್ಪ ಗಾಮನಗಟ್ಟಿ, ನಿಂಗಪ್ಪ ಹೊಸೂರು, ಮಾರುತಿ ಪೂರ್ಲಿ, ರಾಜಕುಮಾರ್ ಶಿರಪಂತಿ, ಸುರೇಶ್ ನಾಗಣ್ಣನವರ್, ಪೈರೋಜ್ ಶಿರಬಡಗಿ, ಮಂಜು ಯಳ್ಳೂರ, ಮಾರುತಿ ಹಂಚಗಿ, ರಾಮನಗೌಡ ಪಾಟೀಲ್, ಗನಿ ಪಾಳಾ, ರಾಜೇಶ್ ಲಮಾಣಿ, ಬಸವರಾಜ್ ದುಮ್ಮಣ್ಣನವರ, ರಮೇಶ್ ತಳವಾರ, ರವಿ ಜಾಲಗೇರಿ, ಶಂಭು ಕಳಸದ, ರೇಖಾ ಕರಿಬಿಮಣ್ಣನವರ, ಕುಮಾರ ಲಮಾಣಿ ಸೇರಿದಂತೆ ಬಹುತೇಕರು ಇದ್ದರು.





