ವಿಕಲಚೇತನ ಅಂಗವಿಕಲರಿಗೆ ಅನುಕಂಪಕ್ಕಿಂತ ಮುಖ್ಯವಾಗಿ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ಅಂಗವಿಕಲರಿಗಾಗಿ 40 ದಿನಗಳ ವಿಶೇಷ ತರಬೇತಿಯ ಜೊತೆಗೆ ಉದ್ಯೋಗವಕಾಶಗಳನ್ನು ಒದಗಿಸುವ ವಸತಿಯುತ ಉಚಿತ ತರಬೇತಿಯನ್ನು ಹಾವೇರಿಯ ಹುಕ್ಕೇರಿಮಠದಲ್ಲಿ ಫೆ. 12ರಂದು ಹಮ್ಮಿಕೊಂಡಿದ್ದಾರೆ.
ಅರ್ಹತೆ: ಅವರ ಕೆಲಸಗಳನ್ನು ಅವರೇ ಮಾಡಿಕೊಳ್ಳುವಷ್ಟು ಸಾಮರ್ಥ್ಯ ಹೊಂದಿರಬೇಕು. 18ರಿಂದ 35 ವರ್ಷ ಒಳಗಿರಬೇಕು. 10ನೇ ತರಗತಿ ಪಾಸ್ ಅಥವಾ ಫೈಲ್ ಆಗಿದ್ದರೂ ಓದು, ಬರಹ, ಲೆಕ್ಕ ತಿಳಿದಿರಬೇಕು. ಉದ್ಯೋಗ ಪಡೆಯಲು ಆಸಕ್ತಿ ಉಳ್ಳವರಾಗಿರಬೇಕು.
ಇದನ್ನೂ ಓದಿ ಹಾವೇರಿ | ಬೇಂದ್ರೆಯವರ ಮನೆಯ ಮಾತು ಮರಾಠಿಯಾದರೂ, ಮನದ ಮಾತು ಕನ್ನಡ: ಮಲ್ಲಪ್ಪ ಕರೆಣ್ಣನವರ
ಆಸಕ್ತಿ ಉಳ್ಳವರು ಈ ಹಸೀನಾ ಹೆಡಿಯಾಲ- 8496033423 ಇವರ ನಂಬರಿಗೆ ಕರೆ ಮಾಡಬಹುದು ಎಂದು ಅಂಗವಿಕಲ ಸಾಮಾಜಿಕ ಕಾರ್ಯಕರ್ತೆ ಹಸೀನಾ ಹೆಡಿಯಾಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





