ಕರ್ನಾಟಕ ರತ್ನ ಡಾ//ವಿಷ್ಣುವರ್ಧನ್ ರವರ ಪುತ್ತಳಿಯನ್ನು ಹಾವೇರಿ ಪಟ್ಟಣದಲ್ಲಿ ಸೂಕ್ತವಾದ ಸ್ಥಳದಲ್ಲಿ ನಿರ್ಮಾಣ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗದ ವತಿಯಿಂದ ಹಾವೇರಿ ಪಟ್ಟಣದ ನಗರಸಭೆಯಲ್ಲಿ ಪ್ರತಿಭಟನೆ ನಡೆಸಿ ಆಯುಕ್ತರಿಗೆ ಮನವಿ ಮನವಿ ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರವೇ ಸ್ವಾಭಿಮಾನಿ ಬಳಗ ಜಿಲ್ಲಾಧ್ಯಕ್ಷರು ಯಲ್ಲಪ್ಪ ಮರಾಠೆ ಮಾತನಾಡಿ, “ಪಟ್ಟಣದ ವೃತ್ತಕ್ಕೆ ಡಾಕ್ಟರ್ ವಿಷ್ಣುವರ್ಧನರವರ ಹೆಸರಿಡಬೇಕು. ಇದು ಬರೆ ನಮ್ಮ ಕನಸಲ್ಲ ಅನೇಕ ಕನ್ನಡಿಗರ ಕನಸು, ಅವರ ಅಭಿಮಾನಿಗಳ ಕನಸು. ಈ ಕನಸನ್ನು ತಾವು ಆದಷ್ಟು ಬೇಗ ನಮ್ಮ ಜಿಲ್ಲೆಯಲ್ಲಿ ನನಸು ಮಾಡಬೇಕು” ಎಂದು ಹೇಳಿದರು.
“ಕರ್ನಾಟಕ ರತ್ನ ಡಾಕ್ಟರ್ ವಿಷ್ಣುವರ್ಧನರವರ ಪುತ್ತಳಿಯನ್ನು ನಿರ್ಮಿಸುವ ಮುಖಾಂತರ ತಾವುಗಳು ಅಭಿಮಾನಿಗಳ ಆಸೆಯನ್ನು ಪೂರೈಸಿದಂತಾಗುತ್ತದೆ” ಎಂದು ಮನವಿ ಸಲ್ಲಿಸಿದರು.
ಈ ಮನವಿಯನ್ನು ಸ್ವೀಕರಿಸಿದ ನಗರಸಭೆ ಆಯುಕ್ತರು ಮಾತನಾಡಿ, “ತಾವು ನೀಡಿದ ಮನವಿಯನ್ನು ನಮ್ಮ ನಗರಸಭೆ ಕಮಿಟಿ ಜೊತೆ ಚರ್ಚಿಸಿ ಇದಕ್ಕೆ ಸೂಕ್ತ ಸ್ಥಳ ಪರಿಶೀಲನೆ ಮಾಡಿ ಕರ್ನಾಟಕ ರತ್ನ ಡಾಕ್ಟರ್ ವಿಷ್ಣುವರ್ಧನ್ ರವರ ಪುತ್ತಳಿಯನ್ನು ನಿರ್ಮಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದು ಭರವಸೆ ನೀಡಿದರು.
ಈ ಮನವಿ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಬಳಗದ ಸಂಸ್ಥಾಪಕರು ಅಧ್ಯಕ್ಷರು ಡಾ. ಎಂ ಲಿಂಗರಾಜು, ಉತ್ತರ ಕರ್ನಾಟಕ ಕಾರ್ಯಾಧ್ಯಕ್ಷರು ಯೂಸುಫ್ ಸೈಕಲಗಾರ, ಮಹಿಳಾ ಜಿಲ್ಲಾಧ್ಯಕ್ಷರು ಗೀತಾಬಾಯಿ ಲಮಾಣಿ, ಜಿಲ್ಲಾ ಉಪಾಧ್ಯಕ್ಷರು ಪ್ರದೀಪ್ ಗೌಡರ್, ಜಿಲ್ಲಾ ಯುವ ಘಟಕದ ಅಧ್ಯಕ್ಷರು ರಿಯಾಜ್ ಲೋಹಾರ, ಹಾವೇರಿ ತಾಲೂಕ ಅಧ್ಯಕ್ಷರು ರಾಜಾಭಕ್ಷ ಮಾನೇಗಾರ, ಖಲಂದರ್ ಎಲೆದಹಳ್ಳಿ, ಶಂಕರ್ ಬಡಿಗೇರ, ದೇವರಾಜ್ ಈಳಗೇರ, ಯುನೊಸ್ ಕಿಲ್ಲೆದಾರ್, ನಿಲಮ್ಮ ಅಂಗಡಿ, ಶೇಕವ್ವ ಹುಲುಗುರು, ಅರುಂಧತಿ ಆರೇರ, ಪುಷ್ಪ ಲಮಾಣಿ, ಮಹಾವೀರ ಹಳ್ಳಿಯವರು, ರಿಯಾಯಿಜುದ್ದೀನ್ ಕಚವಿ, ಹೊನ್ನೂರ್ ಸಾಬ್, ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.





