ಹಾವೇರಿ | ವೈಚಾರಿಕ ಪ್ರಜ್ಞೆಯ ಪ್ರತೀಕವೇ ಕುವೆಂಪು: ಅಶೋಕ ಶಾಸ್ತ್ರಿ

Date:

“ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ರಾಷ್ಟ್ರಕವಿ ಕುವೆಂಪು ನಮ್ಮ ನಾಡಿನ ಪ್ರತಿಭಾವಂತ ಸಾಹಿತಿ. ಮೌಢ್ಯದೊಳಗೆ ಮುಳುಗಿದವರನ್ನು ಎಚ್ಚರಿಸಲು ವೈಚಾರಿಕ ಚಿಂತನೆಗಳನ್ನು ಬಿತ್ತಿದವರು. ವೈಜ್ಞಾನಿಕ ದೃಷ್ಟಿಕೋನದಿಂದ ಶಾಸ್ತ್ರಗಳನ್ನು ವಿಮರ್ಶಿಸಿ, ಎದೆಯ ದನಿಗೆ ಕಿವಿಗೊಡಿ ಅದಕ್ಕಿಂತ ಮಿಗಿಲಾದ ಶಾಸ್ತ್ರ ಯಾವುದೂ  ಇಲ್ಲವೆಂದವರು. ಜನರನ್ನ ವಿಭಾಗಿಸಿರುವ ಜಾತಿ, ಧರ್ಮ, ಮತಗಳನ್ನ ತೊರೆದು ಮನುಜ ಮತಕ್ಕೆ, ವಿಶ್ವಪಥಕ್ಕೆ ಬನ್ನಿ ಎಂದು ಕರೆಕೊಟ್ಟ ವಿಶ್ವಮಾನವ ಕುವೆಂಪು ಅವರು ವೈಚಾರಿಕ ಪ್ರಜ್ಞೆಯ ಪ್ರತೀಕರು” ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಶೋಕ ಶಾಸ್ತ್ರಿ ಹೇಳಿದರು.

ಹಾವೇರಿ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕ, ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾವೇರಿ ಮತ್ತು ಬಾಲಕಿಯರ ಕಾಲೇಜಿನ ಸಹಯೋಗದಲ್ಲಿ ನಡೆದ ರಾಷ್ಟ್ರಕವಿ ಕುವೆಂಪು ಜನ್ಮದಿನದ ಪ್ರಯುಕ್ತ ‘ವಿಶ್ವಮಾನವ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

“ಕುವೆಂಪು ಇಂಗ್ಲಿಷ್ ಸಾಹಿತ್ಯದಲ್ಲಿ ಪಾಂಡಿತ್ಯ ಹೊಂದಿದ್ದರೂ ಕನ್ನಡ ಸಾಹಿತ್ಯ ರಚನೆಗಿಳಿದು ಸಾಹಿತ್ಯದ ಮೇರು ಪರ್ವತವಾಗಿ ಬೆಳೆದು ನಿಂತರು. ಕನ್ನಡ ನಾಡು, ನುಡಿ, ಜಲ ಸಂಪತ್ತು ರಕ್ಷಣೆಗೆ ಅಚಲವಾದ ಬದ್ಧತೆಯನ್ನು ಹೊಂದಿದವರು. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿದ ಪುಟ್ಟಪ್ಪನವರು ಪ್ರಗತಿಪರ ಚಿಂತನೆಗಳನ್ನ ಪ್ರತಿಪಾದಿಸುತ್ತಾ ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುವ ಸಾಹಿತ್ಯವನ್ನು ಕಟ್ಟಿಕೊಟ್ಟರು.ತಮ್ಮ ವಿಭಿನ್ನ ದೃಷ್ಟಿಕೋನದಿಂದ ಮಹಾಕಾವ್ಯಗಳನ್ನ ಅಧ್ಯಯನ ಮಾಡಿ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯವನ್ನು ಸೃಷ್ಟಿ ಮಾಡಿ ಕನ್ನಡಕ್ಕೆ ಜ್ಞಾನಪೀಠವನ್ನು ತಂದುಕೊಟ್ಟವರು. ಇಂತಹ ಮಹಾಕವಿಯ ಚಿಂತನೆಗಳನ್ನ ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಅಗತ್ಯವಿದೆ” ಎಂದು ಅಭಿಪ್ರಾಯಪಟ್ಟರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮೊದಲು ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಶೇಖರ ಭಜಂತ್ರಿ ಪ್ರಸ್ತಾವಿಕವಾಗಿ “ನಾವೆಲ್ಲ ಒಂದೇ ದೇಶದ ಪ್ರಜೆಗಳು. ಆದರೆ ಬೇರೆ ಬೇರೆ ಧರ್ಮ ಜಾತಿಗಳಲ್ಲಿ ಒಡೆದು ಹೋಗಿದ್ದೇವೆ. ಮನುಷ್ಯರೇ ಸೃಷ್ಟಿಸಿಕೊಂಡ ಶ್ರೇಷ್ಠತೆಯ ವ್ಯಸನದಿಂದಾಗಿ ಜಾತಿ, ಧರ್ಮಗಳಲ್ಲಿ ಸಿಲುಕಿದ್ದೇವೆ. ಈ ಗೂಡೆಗಳನ್ನು ಬೀಳಿಸಿ ಸೇತುವೆಗಳನ್ನು ಕಟ್ಟಬೇಕು. ಮನುಷ್ಯರೆಲ್ಲ ಒಂದೇ ಎಂದು ತಿಳಿದು ಪರಸ್ಪರ ಪ್ರೀತಿಸುವುದನ್ನು ಕಲಿಯಬೇಕು ಸಮಾನತೆ, ಸೌಹಾರ್ದತೆ ಮತ್ತು ಸರ್ವೋದಯದ ಕಲ್ಪನೆಗಳನ್ನು ಕುವೆಂಪುರವರು ನಮಗೆ ನೀಡಿದ್ದಾರೆ. ಪ್ರಸ್ತುತ ಕಾಲಘಟ್ಟದಲ್ಲಿ ಬೇರೆ ಬೇರೆ ಕಾರಣಕ್ಕಾಗಿ ನಮ್ಮ ಮಧ್ಯೆ ಕಂದಕಗಳನ್ನು ಸೃಷ್ಟಿಸುವವರ ನಡುವೆ ಕುವೆಂಪುರವರ ಚಿಂತನೆಗಳು ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತವಾಗಿ ಕಾಣುತ್ತಿವೆ. ಪ್ರತಿಯೊಂದು ಮಗು ಹುಟ್ಟುವಾಗ ವಿಶ್ವಮಾನವನಾಗಿರುತ್ತದೆ.ಬೆಳೆಯುತ್ತಾ ನಾವುಗಳೇ ಅವರನ್ನು ಅಲ್ಪ ಮಾನವನಾಗಿ ಮಾಡುತ್ತೇವೆ” ಎಂದರು.

ನಂತರ ‘ವಿದ್ಯಾರ್ಥಿ ಕವಿಗೋಷ್ಠಿ’ಯಲ್ಲಿ ವಿದ್ಯಾರ್ಥಿನಿಯರು ಗಿರಿಜಾ ಕಡೇಕೊಪ್ಪ, ಪ್ರಿಯ ಬೊಮ್ಮನಹಳ್ಳಿ, ಸಾನಿಯಾ ಗುಳೇದ, ತನುಷಾ ಪೂಜಾರ  ಮತ್ತು ಶೈಲಜಾ ಕೋರಿಶೆಟ್ಟರ ಕುವೆಂಪು ಕುರಿತು ಸ್ವರಚಿತ ಕವಿತೆಗಳನ್ನು ವಾಚಿಸಿದರು.

ಮುಖ್ಯ ಅತಿಥಿಗಳು ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಅವರು ಮಾತನಾಡಿ, “ಕುವೆಂಪುರವರು ನಾಡು ಕಂಡ ಶ್ರೇಷ್ಠ ಕವಿ. ಶಿಸ್ತುಬದ್ಧ ಜೀವನ ನಡೆಸಿ ಸಮಯ ಪ್ರಜ್ಞೆಗೆ ಹೆಚ್ಚು ಮಹತ್ವ ಕೊಟ್ಟವರು. ಮನಸ್ಸನ್ನು ಸುತ್ತುವರೆದಿರುವ ವಿವಿಧ ಬಂಧನಗಳಿಂದ ಆಚೆ ಬಂದು, ನಿರಂಕುಶಮತಿಗಳಾಗಿ ಸ್ವತಂತ್ರ ಯೋಚನೆಗಳನ್ನು, ವಿಚಾರ ಪ್ರಚೋದಕ ಚಿಂತನೆಗಳನ್ನು ಬೆಳೆಸಿಕೊಳ್ಳಿ” ಎಂದು ಪ್ರತಿಪಾದಿಸಿದವರು.

“ಗಂಡು ಹೆಣ್ಣು ಮದುವೆಯಾಗುವ ಮೊದಲು ಎಲ್ಲರೂ ಜಾತಕ ಕೇಳುತ್ತಾರೆ. ಆದರೆ ಕುವೆಂಪುರವರು ‘ಜಾತಕದ ಬದಲು ತಾವು ಮದುವೆಯಾಗುವ ಹೆಣ್ಣು ಮತ್ತು ತಮ್ಮ ರಕ್ತದ ಗುಂಪು ಹೊಂದಿಕೆಯಾಗುತ್ತದೆಯೇ ನೋಡಿ’ ಎಂದು ಕೇಳುತ್ತಾರೆ. ಇದು ಅವರಲ್ಲಿನ ವೈಜ್ಞಾನಿಕ ಪ್ರಜ್ಞೆಯನ್ನು ತೋರುತ್ತದೆ. ಸರಳ ಮದುವೆಗಾಗಿ ‘ಮಂತ್ರ ಮಾಂಗಲ್ಯ’ ಎಂಬ ಹೊಸ ಕಲ್ಪನೆಯನ್ನು ಕೊಟ್ಟವರು. ಅವರ ನಾಟಕದ ದೃಶ್ಯ ಒಂದರಲ್ಲಿ ಯುದ್ಧವನ್ನು ಕಾಣುವ ಪರಿಯೇ ವಿಭಿನ್ನವಾಗಿದೆ” ಎಂದರು.

“ದೃಶ್ಯದಲ್ಲಿ ಕೌರವರು ಪಾಂಡವರ ನಡುವೆ ಘೋರ ಯುದ್ಧ ನಡೆದು ಸಾವಿರಾರು ಹೆಣಗಳ ರಾಶಿ ಬಿದ್ದಿರುತ್ತದೆ. ಒಬ್ಬ ಮುದುಕಿ ಮಗನನ್ನು ಹಾಗೂ ಒಬ್ಬ ಮಹಿಳೆ ಗಂಡನನ್ನು ಹುಡುಕುತ್ತಾ ಬಂದಾಗ ಇಬ್ಬರು ಸೈನಿಕರು ಪರಸ್ಪರ ಚುಚ್ಚಿಕೊಂಡು ಸತ್ತು ಬಿದ್ದಿದ್ದು ಕಂಡು ಮುದುಕಿ ಒಬ್ಬನನ್ನ ತೋರಿ ನನ್ನ ಮಗ ಎಂದಳು. ಇನ್ನೊಬ್ಬನನ್ನ ತೋರಿ ಮಹಿಳೆ ನನ್ನ ಗಂಡ ಎಂದಳು. ನೋವು ಆಕ್ರೋಶದಿಂದ ಮುದುಕಿ ಮತ್ತು ಮಹಿಳೆ ಪರಸ್ಪರ ಕೌರವರು ಪಾಂಡವರಿಗೆ ಪ್ರತ್ಯೇಕವಾಗಿ ಧಿಕ್ಕಾರ ಕೂಗುತ್ತಾರೆ. ನಂತರ ಇಬ್ಬರೂ ಯೋಚಿಸಿ ಯಾರದೋ ಒಳಿತಿಗಾಗಿ ನಡೆದ ಯುದ್ಧದಲ್ಲಿ ನಮ್ಮವರು ಅನ್ಯಾಯವಾಗಿ ಸತ್ತರು. ಈ ಯುದ್ಧಕ್ಕೆ ದಿಕ್ಕಾರ ಪಾಂಡವರು ಕೌರವರಿಗೂ ಧಿಕ್ಕಾರ ಎಂದು ಒಟ್ಟಿಗೇ  ಕೂಗುತ್ತಾರೆ. ಹೀಗೆ ಕುವೆಂಪುರವರ ಸಾಹಿತ್ಯದ ನೋಟ ವಿಭಿನ್ನವಾಗಿತ್ತು”  ಎಂದರು.

ಹಾವೇರಿ ತಾಲೂಕು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೈ.ಬಿ. ಆಲದಕಟ್ಟಿಯವರು ಕುವೆಂಪುರವರ ಬದುಕು ಬರಹ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಭಾರಿ ಪ್ರಾಚಾರ್ಯ ರಮೇಶ ಲಮಾಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಬಿಜಿವಿಎಸ್ ರಾಜ್ಯ ಸಮಿತಿ ಸದಸ್ಯ ರೇಣುಕಾ ಗುಡಿಮನಿ, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಎಸ್. ಎಸ್.ನಿಸ್ಸಿಮಗೌಡರ, ರವೀಂದ್ರ ಮುದ್ದಿ, ಈರಣ್ಣ ಬೆಳವಡಿ, ಶಂಕರ ಸುತಾರ, ಸಾಲಿಮಠ ಮತ್ತು ಇತರರು ಉಪಸ್ಥಿತರಿದ್ದರು. ಮೊದಲಿಗೆ ಅಕ್ಕಮಹಾದೇವಿ ಹಾನಗಲ ಪ್ರಾರ್ಥಿಸಿದರೆ, ಉಪನ್ಯಾಸಕ ಮಂಜುನಾಥ ಹಟ್ಟಿಯವರ ಸ್ವಾಗತಿಸಿದರು. ಈಶ್ವರಗೌಡ ಪಾಟೀಲ ನಿರೂಪಿಸಿ ಅಮೂಲ್ಯ ಕೋಟಿ ವಂದಿಸಿದರು.

WhatsApp Image 2024 10 05 at 15.43.57 586b60ff min e1728123396595
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...