ಸರ್ಕಾರಿ ಕನ್ನಡ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಮುಚ್ಚುವ ರಾಜ್ಯ ಸರ್ಕಾರದ ಹುನ್ನಾರ ವಿರೋಧಿಸಿ, ಸರ್ಕಾರಿ ಶಾಲೆಗಳ ಉಳಿವಿಗಾಗಿ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮುನಿಸಿಪಲ್ ಮೈದಾನದಿಂದ ಪ್ರಾರಂಭವಾದ ಬೃಹತ್ ಮೆರವಣಿಗೆ ಜೆ.ಎಚ್.ಪಾಟೀಲ್ ಸರ್ಕಲ್ ನಿಂದ ಪಿ.ಬಿ.ರಸ್ತೆ ಎಸ್ಪಿ ಕಚೇರಿ, ಹೊಸಮನಿ ಸಿದ್ದಪ್ಪ ಸರ್ಕಲ್ ಮಾರ್ಗವಾಗಿ ಗಾಂಧಿ ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿ ತಹಶಿಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ವಿದ್ಯಾರ್ಥಿಗಳು ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷರು ಬಸವರಾಜ ಎಸ್ ಮಾತನಾಡಿ, ಕೆಪಿಎಸ್ ಉನ್ನತಿಕರಣದ ಹೆಸರಿನಲ್ಲಿ ಸರ್ಕಾರಿ ಶಾಲೆಗಳ ದಾಖಲಾತಿ ನೆಪಹೇಳಿ ಶಾಲೆಗಳನ್ನು ಮುಚ್ಚುತ್ತಿದೆ. ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಯಾಕೆ ಕಡಿಮೆಯಾಗುತ್ತಿದೆ ಎಂದು ಅಧ್ಯಯನ ಮಾಡದೇ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ, ಶಿಕ್ಷಕರ ನೇಮಕಾತಿ, ಸರಿಯಾದ ಸಮಯಕ್ಕೆ ಪಠ್ಯ ಪುಸ್ತಕ ನೀಡದೆ ಹಾಗೂ ಸೈಕಲ್ ಯೋಜನೆ ನಿಲ್ಲಿಸಿರುವುದು ಹೀಗೆ ಯಾವುದೇ ಸೌಲಭ್ಯ ನೀಡದೆ ಸರ್ಕಾರ ಖಾಸಗಿಯವರ ಲಾಬಿಗೆ ಇಂದು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ನಾಶಮಾಡಲು ಸರ್ಕಾರ ಮುಂದಾಗಿರುವುದುದನ್ನು ಎಸ್ಎಫ್ಐ ತೀವ್ರವಾಗಿ ಖಂಡಿಸುತ್ತದೆ.
ಖಾಸಗಿ ಶಾಲಾ ಕಾಲೇಜುಗಳಿಗೆ ಕಡಿವಾಣ ಹಾಕುವ ಬದಲಾಗಿ ಸರ್ಕಾರಿ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಬಂದ್ ಮಾಡಲು ಮುಂದಾಗುತ್ತಿರುವುದು ನಾಚಿಕೆಗೆಡ್ಡಿನ ಸಂಗತಿ. ರಾಜ್ಯ ಸರ್ಕಾರಕ್ಕೆ ತಕತ್ತು ಇದ್ದರೆ ಸರ್ಕಾರಿ ಶಾಲೆಯ ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಖಾಸಗಿ ಶಾಲಾ ಕಾಲೇಜುಗಳನ್ನು ಬಂದ್ ಮಾಡಲಿ, ಖಾಸಗಿ ಶಾಲೆಗಳ ಶುಲ್ಕ, ಹೊಸ ಶಾಲೆಗಳು ಅನುಮತಿಗಳಿಗೆ ನಿಯಂತ್ರಣ ಕಾಯ್ದೆ ಜಾರಿಗೆ ತರಲು ಮುಂದಾಗಲಿ. ಅದನ್ನು ಬಿಟ್ಟು ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರಕ್ಕೆ ಕೈ ಹಾಕಿದ್ದು ಸರಿಯಲ್ಲ. ಕೂಡಲೇ ರಾಜ್ಯ ಸರ್ಕಾರ ಚಳಿಗಾಲದ ಅಧಿವೇಶನದ ಒಳಗೆ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ಕೈ ಬಿಡಬೇಕು ಇಲ್ಲದಿದ್ದರೆ ಸಾವಿರಾರು ಸಂಖ್ಯೆಯಲ್ಲಿ ಬೆಳಗಾವಿ ಚಲೋ ಹೋರಾಟ ತೀವ್ರಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು.
ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, 2011 ರಲ್ಲಿ ಬಿಜೆಪಿ ಸರ್ಕಾರ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿತ್ತು ಅಂದು ಎಸ್ಎಫ್ಐನ ಸಂಘರ್ಷ ಹೋರಾಟದಿಂದ ಶಾಲೆಗಳನ್ನು ಉಳಿಸಿಕೊಂಡ ಬಂದ ಹೆಮ್ಮೆ ಎಸ್ಎಫ್ಐಗೆ ಇದೆ. ಅದರ ಹಾದಿಯಲ್ಲೇ ಇವತ್ತಿನ ಕಾಂಗ್ರೆಸ್ ಸರ್ಕಾರವು ಕೂಡ ಕೆಪಿಎಸ್ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಮುಂದಾಗಿದೆ. ಶಾಲೆಗಳನ್ನು ಮುಚ್ಚುವ ನಿರ್ಧಾರವನ್ನು ಕೈಬಿಡಬೇಕು ಇಲ್ಲದಿದ್ದರೆ ಬಿಜೆಪಿಗೆ ಗತಿ ಕಾಂಗ್ರೆಸ್ ಗೂ ಬರುತ್ತದೆ. ಸರ್ಕಾರಿ ಕನ್ನಡ ಶಾಲೆಗಳನ್ನು ನೇರವಾಗಿ ಕೊಲೆ ಮಾಡುವ ಬದಲಾಗಿ ಸಮಾನ ಶಿಕ್ಷಣ ಜಾರಿಗೆ ತನ್ನಿ. ರಾಜ್ಯ ಎಲ್ಲಾ ಶಾಲೆಗಳನ್ನು ಪಬ್ಲಿಕ್ ಶಾಲೆಗಳ ರೀತಿಯ ಅಭಿವೃದ್ಧಿ ಪಡಿಸಿ ಎಂದು ಆಗ್ರಹಿಸಿದರು.
ರೈತ ಮುಖಂಡ ಸುರೇಶ ಛಲವಾದಿ ಮಾತನಾಡಿ, ರಾಜ್ಯ ಸರ್ಕಾರ ರೈತರಿಗೆ ಅಷ್ಟೇ ಅನ್ಯಾಯದ ಮಾಡುತ್ತಿಲ್ಲ ರೈತರ ಮಕ್ಕಳ ಶಿಕ್ಷಣದ ಹಕ್ಕಿಗೂ ಕೈ ಹಾಕಿದೆ. ಸರ್ಕಾರಿ ಶಾಲೆಗಳಲ್ಲಿ ಓದುವುದು ಬಹುತೇಕ ರೈತರ, ಬಡವರ ಮಕ್ಕಳ ಅವರ ಶಿಕ್ಷಣವನ್ನು ಕಸಿದುಕೊಳ್ಳುತ್ತಿರುವುದು ಖಂಡನೀಯ ಎಂದರು. ವಿದ್ಯಾರ್ಥಿನಿ ಶ್ರೇಯಾ ಮಾತನಾಡಿ, ಪಬ್ಲಿಕ್ ಸ್ಕೂಲ್ ಗಳಿಗೆ ಕೊಡುವ ಸೌಲಭ್ಯಗಳನ್ನು ನಮ್ಮ ಸರ್ಕಾರಿ ಶಾಲೆಗೂ ಕೊಡಿ ನಮ್ಮ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳಬೇಡಿ ನಮ್ಮ ತಂದೆತಾಯಿಗಳು ಬಾಳ್ ಬಡವರ ಇದ್ದಾರೆ ಸರ್ಕಾರಿ ಶಾಲೆಗಳು ಬಂದ್ ಆದರೆ ಹೇಗೆ ನಾವು ಓದುವುದು ಎಂದು ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು. ಸಾಕ್ಷಿ ವಿದ್ಯಾರ್ಥಿನಿ ಮಾತನಾಡಿ, ಒಂದು ಶಾಲೆ ಪ್ರಾರಂಭ ಮಾಡಿ ಹತ್ತಾರು ಶಾಲೆಗಳನ್ನು ಮುಚ್ಚುವುದು ಇದು ಯಾವ ಸರ್ಕಾರದ ಅಭಿವೃದ್ಧಿ, ಕೆಪಿಎಸ್ ಶಾಲೆಗೆ ಕೊಡುವ ಸೌಲಭ್ಯಗಳನ್ನು ನಮ್ಮ ಸರ್ಕಾರಿ ಶಾಲೆಗೂ ಕೊಡಿ, ನಾವು ನೂರಾರು ಕನಸು ಕಟ್ಟಿದ್ದೇವೆ ಉನ್ನತ ಅಧಿಕಾರಿ ಆಗಬೇಕು ಎಂದು. ನಮ್ಮ ಆಸೆಗಳ ಕಲ್ಲು ಹಾಕಬೇಡಿ ಒಂದು ವೇಳೆ ಇಂತಹ ನಿರ್ಧಾರಕ್ಕೆ ಹಾಕಿದ್ದಾರೆ ಎಸ್ಎಫ್ಐ ಜೊತೆಗೆ ಸೇರಿ ನಾವು ನಮ್ಮ ಪೋಷಕರು ದೊಡ್ಡ ಹೋರಾಟ ಮುಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶ್ರೇಯಸ್ ಶಿಕ್ಷಣ ಸಂಸ್ಥೆ ಮುಖ್ಯಸ್ಥರಾದ ತಿಪ್ಪೇಸ್ವಾಮಿ ಹೊಸಮನಿ, ಎಸ್ಎಫ್ಐ ಮುಖಂಡರಾದ ಅರುಣ್ ನಾಗವತ್, ಶಿವರಾಜ ಎಮ್, ವಿದ್ಯಾರ್ಥಿನಿ ನಯನ ಮಾತನಾಡಿದರು. ಪ್ರದೀಪ್ ಲಮಾಣಿ, ಪ್ರಶಾಂತ್ ಲಮಾಣಿ ಕಾಂತೇಶ ಅಗರಗಟ್ಟಿ, ದರ್ಶನ್ ಕೊಪ್ಪದ, ಚೇತನ್ ತಮಣ್ಣನವರ, ಅಯಾನ್ ಎಂ, ಕಿರಣ್ ಬಿ, ಮೌಲಾಲಿ ಸಿ, ರಾಯಪ್ಪ ಸಿದ್ದಪ್ಪ , ಸಣ್ಣಲಗ ಮನ್ನವರ್, ವಿಜಯ್ ಪಿ, ಅಭಿಷೇಕ ಎಂ ,ಗೋವಿಂದಪ್ಪ ಎಸ್, ಮಹದೇವಪ್ಪ, ಕೆ, ಮಲ್ಲೇಶ್ ಎನ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕರವೇ ಸ್ವಾಭಿಮಾನಿ ಬಳಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಮರಾಠೆ ಅವರ ನೇತೃತ್ವದಲ್ಲಿ ಹೊಸಮನಿ ಸಿದ್ದಪ್ಪ ಸರ್ಕಲ್ ನಿಂದ ಭುವನೇಶ್ವರಿ ಭಾವಚಿತ್ರದ ಮೆರವಣಿಗೆಯೊಂದಿಗೆ ಪ್ರಮುಖ ಬೀದಿಗಳಲ್ಲಿ ವಾದ್ಯ ಮೇಳಗಳೊಂದಿಗೆ ಸಂಚರಿಸಿ, ಜಿಲ್ಲಾ ಗುರುಭವನಕ್ಕೆ ತಲುಪಿತು. ತದನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬಸವ ಶಾಂತಲಿಂಗ ಸ್ವಾಮಿಗಳು, ಹೊಸಮಠ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಮಹಿಳಾ ಅಧ್ಯಕ್ಷೆ ಗೀತಾಬಾಯಿ ಲಮಾಣಿ ಮಾತನಾಡಿದರು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಿಗಿದವು. ಇದೇ ಸಂದರ್ಭದಲ್ಲಿ ಕಲಾವಿದರಿಗೆ ಸನ್ಮಾನಿಸಿ, ಗೌರವಿಸಿದರು.
ಉತ್ತರ ಕರ್ನಾಟಕ ಕಾರ್ಯಾಧ್ಯಕ್ಷ ಯೂಸುಫ್ ಸೈಕಲಗಾರ, ಜಿಲ್ಲಾಧ್ಯಕ್ಷ ಯಲ್ಲಪ್ಪ ಮರಾಠೆ, ಹಾವೇರಿ ತಾಲೂಕ ಅಧ್ಯಕ್ಷ ರಾಜಾಭಕ್ಷ ಮಾನೇಗಾರ, ಕಲಂದರ್ ಎಲೆದಹಳ್ಳಿ, ಅನಿಲ್ ಮಾವಕರ್, ಮಂಜು ಮ್ಯಾಗೇರಿ, ಪರಶುರಾಮ ಮೋಟೆ, ಈರಪ್ಪ ಅಂಗಡಿ, ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು, ಎಲ್ಲಾ ತಾಲೂಕ ಅಧ್ಯಕ್ಷರು, ಕಾರ್ಯಕರ್ತರು ಭಾಗವಹಿಸಿದ್ದರು.





