“ಭಾರತದ ಸಂಸ್ಕೃತಿ ಸಂಸ್ಕಾರಗಳನ್ನು ಇಂದಿನ ಯುವ ಪೀಳಿಗೆ ಅನುಸರಿಸಿ ಆಚರಿಸುವ ಅಗತ್ಯವಿದೆ. ಹಿರಿಯರು ಮಕ್ಕಳಿಗೆ ಇಂತಹ ಮಾರ್ಗದರ್ಶನ ಮಾಡಬೇಕು” ಎಂದು ಕೆಡಿಪಿ ಸದಸ್ಯ ರಾಜೇಶ್ ಚೌಹಾಣ ಹೇಳಿದರು.
ಹಾವೇರಿ ಜಿಲ್ಲೆಯ ಹಾನಗಲ್ಲಿ ಪಟ್ಟಣದ ರೋಶನಿ ಸಮಾಜ ಸೇವಾ ಸಂಸ್ಥೆಯಲ್ಲಿ ಆಯೋಜಿಸಿದ ಯುವ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ನಮ್ಮ ಜನಪದ ಸಂಸ್ಕೃತಿಯನ್ನು ತಿಳಿಯಲು ಇಂದಿನ ಯುವಕರು ಅದರ ಮಾರ್ಗದರ್ಶನ ಹಾಗೂ ಅದರಲ್ಲಿಯೂ ಸಾಂಸ್ಕೃತಿಕ ಪರಿಚಯವಾಗಬೇಕಾಗಿದೆ. ಅದಕ್ಕಾಗಿ ಯುವ ಜನತೆಗೆ ಇಂತ ಸ್ಪರ್ಧೆಗಳನ್ನು ನಡೆಸುವ ಮೂಲಕ ನಮ್ಮ ಜನಪದದ ಕಾಳಜಿಗೆ ಸಹಕರಿಬೇಕು” ಎಂದರು.
ಮುಖ್ಯ ಅತಿಥಿ ಶಿಕ್ಷಕ ಜಗದೀಶ ಮಡಿವಾಳರ ಮಾತನಾಡಿ, “ಯುವಕರಿಗೆ ಹೊಸ ವೈಚಾರಿಕ ಸಾಂಸ್ಕೃತಿಕ ಚಿಂತನೆಗಳ ಪರಿಚಯವಾಗಬೇಕು. ನಮ್ಮ ದೇಶಿಯ ಕಲೆಗಳ ಅರಿವು ಮೂಡಿಸಬೇಕು. ನಮ್ಮ ಆಚರಣೆಗಳಲ್ಲಿರುವ ಸಾಂಸ್ಕೃತಿಕ ಅಂಶಗಳ ಅರಿವು ಮೂಡಿಬೇಕು. ಯುವಕರು ಉತ್ತಮ ಗುಣ ಸ್ವಭಾವಗಳನ್ನು ಅರಿತು ಆಚರಿಸಲು ಇಂತಹ ಚಟುವಟಿಕೆಗಳು ಸಹಕಾರಿ” ಎಂದರು.
ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಅನಿತಾ ಡಿಸೋಜ ಅಧ್ಯಕ್ಷತೆವಹಿಸಿ ಮಾತನಾಡಿ, “ನಮ್ಮ ಯುವಕರು ಬಂದ ಸಮಸ್ಯೆಗಳನ್ನು ಸನ್ನದ್ಧರಾಗಬೇಕು. ದೇಶದ ಭವಿಷ್ಯ ಯುವಕರ ಕೈಯಲ್ಲಿದೆ. ನಮ್ಮ ಸಂಸ್ಥೆ ಯುವ ಸಮುದಾಯದ ಹಿತಕ್ಕಾಗಿ ಸದಾ ಸಿದ್ಧವಿದೆ ಎಂದರು.
ವಿವಿಧಸ್ಪರ್ಧೆಗಳ ನಿರ್ಣಾಯಕರು ಡಾ.ಎನ್.ಎಫ್.ಕಮ್ಮಾರ, ಸ್ವಪ್ನ ಪವಾರ ಕಾರ್ಯ ನಿರ್ವಹಿಸಿದರು. ಲಕ್ಷ್ಮಿದೇವಿ ಯುವಕರ ಸಂಘ ಡೊಳ್ಳು ಕುಣಿತಕ್ಕೆ ಪ್ರಥಮ ಬಹುಮಾನ ಮತ್ತು ನಿಸೀಮೇಶ್ವರ ಯುವಕರ ಸಂಘ ಆಲದಕಟ್ಟಿ ದ್ವಿತೀಯ ಹಾಗೂ ಸೇವಾಲಾಲ ಬಾಳೂರ ತಂಡ ತೃತೀಯ ಸ್ಥಾನ ಹಾಗೂ ಮಾತಂಗೇಶ್ವರ ಭಜನಾ ಸಂಘ ಕಲ್ಲಾಪೂರ ಮತ್ತು ಬಾಳಂಬೀಡ ಹೆಣ್ಣು ಮಕ್ಕಳ ಡೊಳ್ಳು ಕುಣಿತ ಸಮಾಧಾನಕರ ಬಹುಮಾನ ಪಡೆದುಕೊಂಡರು.
ಬಿ.ಆರ್. ಶೆಟ್ಟರ, ಚೈತ್ರಾ ಕಂಬಾಳಿಮಠ, వరాం, ಪಾಲಾಕ್ಷಯ್ಯ ಹಿರೇಮಠ, ರಾಜೇಂದ್ರ ಈಳಿಗೇರ, ಲಕ್ಷ್ಮ ಆಲೂರ, ಜನ ವೇದಿಕೆ ಮುಖಂಡರು ಮತ್ತು ಹಳ್ಳಿ ಅಭಿನವೃದ್ಧಿ ಸಮಿತಿ ಸದಸ್ಯರು, ರೋಶನಿ ಸಂಸ್ಥೆಯ ಸಿಬ್ಬಂದಿ ವರ್ಗ ಮತ್ತು ವ್ಯಸನ ಮುಕ್ತ ಕೇಂದ್ರದಶಿಬಿರಾರ್ಥಿಗಳುಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪರಸಪ್ಪ ದಾಳೇರ, ಪ್ರಕಾಶ ನಂದಿಕೊಪ್ಪ, ಎನ್. ಎಂ ಪೂಜಾರ, ರಶೀದ್ ಆಹ್ಮದ್ ದೊಡ್ಡನಿ ಇದ್ದರು. ಮಂಜುನಾಥ ಗೌಳಿ ನಿರೂಪಿಸಿದರು. ನಿರ್ಮನಿ ಮಡಿವಾಳರ ವಂದಿಸಿದರು. ಯುವಕರು ಮತ್ತು ಲಿಂಗತ್ಯ ಅಲ್ಪಸಂಖ್ಯಾತರರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಲಂಬಾಣಿ ನೃತ್ಯ, ಭಜನಾಪದಗಳು, ಡೊಳ್ಳುಕುಣಿತ ಕಲೆಗಳಿಗೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.





