“ಇತಿಹಾಸದಲ್ಲಿ ರಾಜರುಗಳು ಆಡಳಿತ ನಡೆಸುತ್ತಿರುವುದನ್ನ ನಾವೆಲ್ಲರೂ ಓದಿದ್ದೇವೆ, ಕೇಳಿದ್ದೇವೆ. ಅಂಬೇಡ್ಕರ್ ಅವರು ಬರೆದ ಸಂವಿಧಾನ ಪುಸ್ತಕದಿಂದ ಮತದಾನದ ಡಬ್ಬಿಯಲ್ಲಿ ನಮ್ಮನ್ನಾಳುವ ಪ್ರತಿನಿಧಿಗಳು ಹುಟ್ಟುತ್ತಾರೆ” ಎಂದು ರೋಶನಿ ಸಂಸ್ಥೆಯ ನಿರ್ದೇಶಕರು ಸಿಸ್ಟರ್ ಅನಿತಾ ಡಿಸೋಜ ಅವರು ಹೇಳಿದರು.
ಹಾವೇರಿ ಜಿಲ್ಲೆಯ ಹಾನಗಲ್ಲ ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆ, ತಾಲೂಕು ಪಂಚಾಯತ್ ತಾಲೂಕ ಆಡಳಿತ, ರೋಶನಿ ಲೊಯೊಲ ಸ್ವಯಂಸೇವಾ ಸಂಸ್ಥೆಗಳು ತಾಲ್ಲೂಕಿನ ತಾಲೂಕಿನ ವಿವಿಧ ಸಂಘಟನೆ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಈಗಲೂ ಮೇಲಿನಂತಹ ಪ್ರವೃತ್ತಿಗಳು ನಡೆಯುತ್ತಿರುವುದನ್ನು ನಾವು ನೋಡುತ್ತೇವೆ. ಆದರೆ ಪ್ರಸ್ತುತ ರಾಜಕೀಯದಲ್ಲಿ ಅಧಿಕಾರ ಹಣದ ಆಸೆಗಳಿಂದ ಜನರನ್ನು ಬಲಿ ಪಡೆದು ಅಧಿಕಾರ ಹಿಡಿಯುವುದು ಖೇದದ ಸಂಗತಿ” ಎಂದರು.
“ನಾವು ಪ್ರಜ್ಞಾವಂತರಾಗಿ ಮತದಾನ ಮಾಡಿದರೆ ಉತ್ತಮ ಪ್ರಜೆಗಳು ನಮ್ಮನ್ನು ಆಳುತ್ತಾರೆ. ಎನ್ನುವುದು ನಮಗೆಲ್ಲರಿಗೂ ಮನದಟ್ಟು ಆಗಬೇಕಾಗಿದೆ” ಎಂದರು.
ಕಾರ್ಯಕ್ರಮವನ್ನು ಮಾನ್ಯ ತಾಲೂಕ ದಂಡಾಧಿಕಾರಿಗಳು ರೇಣುಕಮ್ಮ ಎಸ್ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ವಿಜಯಕುಮಾರ್ ದೊಡ್ಡಮನಿ ಹಾಗೂ ಸಮಾಜ ಚಿಂತಕ ಶಿಕ್ಷಣ ಪ್ರೇಮಿ ರಾಮಚಂದ್ರ ಕಲ್ಲೆರ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಇನ್ನೂ ಅನೇಕ ಗಣ್ಯರು ಸಂವಿಧಾನದ ಮಹತ್ವ ಕುರಿತು ಮಾತನಾಡಿದರು.
ಹಾನಗಲ್ಲ ಪಟ್ಟಣದ ಕುಮಾರೇಶ್ವರ ಮಠದಿಂದ ಪ್ರಮುಖ ಬೀದಿಗಳ ಮೂಲಕ ಬಾಬು ಜಗಜೀವನ್ ರಾಮ್ ಸಮುದಾಯ ಭವನದವರಿಗೆ ಡೊಳ್ಳು ಕುಣಿತ, ಸಂವಿಧಾನ ಪುಸ್ತಕಗಳು ಬಾವುಟಗಳು, ಅಂಬೇಡ್ಕರ್ ಅವರ ಅರಿವಿನ ಹಾಡು ಮತ್ತು ಅಂಬೇಡ್ಕರ ಭಾವಚಿತ್ರ ಬೃಹದ್ದಾಕಾರ ಸಂವಿಧಾನದ ಪುಸ್ತಕದ ಮೆರವಣಿಗೆ ಕಾರ್ಯಕ್ರಮದ ಅಂದ ಹೆಚ್ಚಿಸಿತ್ತು.
ವಿವಿಧ ಇಲಾಖೆ ಅಧಿಕಾರಿಗಳು ವಿವಿಧ ಸಮಾಜದ ಮುಖಂಡರು, ರೈತ ಮುಖಂಡರು, ಪ್ರಗತಿಪರ ಸಂಘಟನೆ ಸದಸ್ಯರು, ಶಾಲಾ ಮಕ್ಕಳು ಶಿಕ್ಷಕರು, ಮಹಿಳೆಯರು, ಇಲಾಖೆಗಳ ಸಿಬ್ಬಂದಿಗಳು, ರಾಜಕೀಯ ಗಣ್ಯರು ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆಯ ಶ್ರೀಮತಿ ಜಿ ಬಿ ಹಿರೇಮಠ, ಅವರು ಸ್ವಾಗತ ಕೋರಿದರು. ಕಾರ್ಯಕ್ರಮದಲ್ಲಿ ಮಕ್ಕಳ ನೃತ್ಯ ಹಾಡು ಸಂವಿಧಾನ ದಿನಾಚರಣೆಗೆ ವಿಶೇಷ ಮೆರಗು ನೀಡಿದವು. ಅನೇಕ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಬಹುಮಾನಗಳನ್ನ ವಿತರಿಸಿದರು.





