ಹಾವೇರಿ | ಜನರಲ್ಲಿ ಜಾಗೃತಿ ಮೂಡಿಸುವ ಪರಸಪ್ಪನ ಕಥೆ ಬೀದಿ ನಾಟಕ

Date:

ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ ಸಂದೇಶಕ್ಕೆ ಕಲಾತ್ಮಕ ಆಯಾಮ ಕೊಡುವ ರೀತಿಯಲ್ಲಿ ‘ಪರಸಪ್ಪನ ಕಥೆ’ ಎಂಬ ಬೀದಿ ನಾಟಕ ಜನರಲ್ಲಿ ಜಾಗೃತಿ ಮೂಡಿಸುವ ನಾಟಕ. ಈ ನಾಟಕ ಹಾವೇರಿ ಪಟ್ಟಣದ ದುಂಡಿಬಸವೇಶ್ವರ ದೇವಸ್ಥಾನದ ಕೂಟದಲ್ಲಿ ಪ್ರದರ್ಶನವಾಯಿತು.

ಒಂದು ತಿಂಗಳಿಂದ ಹುಕ್ಕೇರಿಮಠದ ಸದಾಶಿವ ಸ್ವಾಮಿಗಳ ನೇತೃತ್ವದಲ್ಲಿ ಜಿಲ್ಲ್ಲೆಯಾದ್ಯಂತ ಸಂಚರಿಸುತ್ತಿದೆ. 

ಕಿಕ್ಕಿರಿದು ಸೇರಿದ್ದ ಜನಸಂದಣಿಯ ನಡುವೆ ಪರಸಪ್ಪ ಎಂಬ ಕಾರ್ಮಿಕ ಕಬ್ಬಿನ ಕಾರ್ಖಾನೆಯೊಂದರ ಆವರಣದಲ್ಲಿ ನಡೆಯುತ್ತಿರುವ ಕಾರ್ಮಿಕ ದಿನಾಚರಣೆಯ ಸಮಾರಂಭದಲ್ಲಿ ಅತ್ಯುತ್ತಮ ಕಾರ್ಮಿಕ ಪ್ರಶಸ್ತಿ ಪಡೆಯುತ್ತಿರು ಸನ್ನಿವೇಶದೊಂದಿಗೆ ನಾಟಕ ಆರಂಭವಾಗುತ್ತದೆ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬಂಗಾರದ ಪದಕ, ನಗದು ಪಡೆದ ಪರಸಪ್ಪ ನಂತರ ದುಷ್ಟ ಮಿತ್ರರ ಪಾರ್ಟಿ ನೆಪದಲ್ಲಿ ಕುಡಿತಕ್ಕೆ ಬೀಳುತ್ತಾನೆ. ಕ್ರಮೇಣ ಅಧಃಪತನಕ್ಕೆ ಬೀಳುವ ಪರಸಪ್ಪ ತನ್ನ ಬಂಗಾರದ ಪದಕ ಮಾರಲು ಸರಾಯಿ ಅಂಗಡಿಗೆ ಬಂದಾಗ ‘ಏನಿದ್ದಿ, ಏನಾದ್ಯೋ, ಹಾದಿ ಬಿಟ್ಟೆಲ್ಲೊ ನೀ ಹಾದಿ ಬಿಟ್ಟೆಲ್ಲೋ’ ಎಂದು ಅಂಗಡಿ ಮಾಲಿಕ ಹಿಯಾಳಿಸುತ್ತಾನೆ.

“ಪ್ರಾಯಶ್ಚಿತೆಗೆ ಗುರಿಯಾಗುವ ಪರಸಪ್ಪ ಮರು ವರ್ಷದ ಕಾರ್ಮಿಕ ದಿನಾಚರಣೆಯ ಸಮಾರಂಭಕ್ಕೆ ಬಂದು ನಾನು ತಪ್ಪು ಮಾಡಿದೆ, ನನ್ನ ಹೆಸರನ್ನು ಉಳಿಸಿ ಕೊಳ್ಳುತ್ತೇನೆ ದುಶ್ಚಟಗಳನ್ನು ಬಬಿಡುತ್ತೇನೆ” ಎಂದು ಎಲ್ಲರೆದರು ಪ್ರತಿಜ್ಞೆ ಮಾಡುತ್ತಾನೆ. ವಿಶೇಷವೆಂದರೆ ನಾಟಕವನ್ನು ವೀಕ್ಷಿಸಿದ ಸದಾಶಿವ ಸ್ವಾಮಿಗಳ ಜೋಳಿಗೆಗೆ ತನ್ನ ದುಶ್ಚಟಗಳನ್ನು ಹಾಕುವ ಸನ್ನಿವೇಶದೊಂದಿಗೆ ಪರಸಪ್ಪನ ಕಥೆ ನಾಟಕ ಮುಕ್ತಾಯವಾಗುತ್ತದೆ.

ಮುಖ್ಯ ಪಾತ್ರ ಪರಸಪ್ಪನಾಗಿ ಶಂಕರ ತುಮ್ಮಣ್ಣನವರ, ಹೆಂಡತಿ ಶಶಿಕಲಾ ಅಕ್ಕಿ, ದಾರಿ ತಪ್ಪಿಸುವ ಗೆಳೆಯರಾಗಿ ಮುತ್ತುರಾಜ ಹಿರೇಮಠ ಮತ್ತು ಶಂಕರ ಮಡಿವಾಳರ ಗಮನ ಸೆಳೆದರು. 

ಇನ್ನುಳಿದಂತೆ ಬಸವರಾಜ ಪೂಜಾರ, ತಿಪ್ಪೇಸ್ವಾಮಿ, ಈರಣ್ಣ ಬೆಳವಡಿ, ಸಿ.ಎಸ್. ಚಿಕ್ಕಮಠ, ಸೋಮಣ್ಣ ಡೊಂಬರಮತ್ತೂರ, ಬಸವರಾಜ ಎಸ್ ಮುಂತಾದವರು ಅಭಿನಯಿಸಿದ್ದರು. ಹಾವೇರಿ ವಿಶ್ವ ವಿದ್ಯಾಲಯದ ಕುಲಪತಿಗಳು ಡಾ.ಸುರೇಶ ಜಂಗಮಶೆಟ್ಟಿ ನಾಟಕಕ್ಕೆ ಚಾಲನೆಯನ್ನು ನೀಡಿದರು. ಪ್ರಗತಿ ಕಲಾ ತಂಡ, ಭಾರತ ಜ್ಞಾನವಿಜ್ಞಾನ ಸಮಿತಿ ಹಾಗೂ ಜಿಲ್ಲಾ ಕಲಾ ಬಳಗದ ಕಲಾವಿದರು ಅಭಿನಯಿಸಿದ್ದರು.

WhatsApp Image 2024 10 05 at 15.43.57 586b60ff min e1728123396595
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...