“ಒಳ ಮಿಸಲಾತಿಗಾಗಿ ಮೂವತ್ತು ವರ್ಷಗಳಿಂದ ಹೋರಾಟ ಮಾಡುತ್ತಾ ಬರುತ್ತಿದ್ದು, ಸರ್ಕಾರಕ್ಕೆ ಎಚ್ಚರಿಕೆ ನೀಡುವ ಉದ್ದೇಶದಿಂದ ಅಗಷ್ಟ್-01 ರಂದು ಜಿಲ್ಲಾಡಳಿತ ಭವನದ ಮುಂದೆ ಬೃಹತ್ ಪ್ರತಿಭಟನೆ-ಹೋರಾಟ ಮಾಡಲಾಗುತ್ತಿದೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಶಕ್ತಿ ತುಂಬಬೇಕು” ಎಂದು ಒಳಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರು ಉಡಚಪ್ಪ ಮಾಳಗಿ ಕರೆ ನೀಡಿದರು.
ಹಾವೇರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಗಷ್ಟ್-01 ರ ಹೋರಾಟದ ಪೂರ್ವಭಾವಿಯಾಗಿ ಒಳಮೀಸಲಾತಿ ಹೋರಾಟದ ಮುಖಂಡರ ಹಾಗೂ ಸಮಾಜದವರ ಜಿಲ್ಲಾ ಮಟ್ಟದ ಸಭೆಯಲ್ಲಿ ಅವರು ಭಾಗಿಯಾಗಿ ಹೋರಾಟವನ್ನು ಯಶಸ್ವಿಗೊಳಿಸಲು ಕರೆ ನೀಡಿದರು.
“ಆಗಸ್ಟ್ 1-2024 ರಂದು ಸುಪ್ರೀಂಕೋರ್ಟಿನ ಸಂವಿಧಾನ ಪೀಠ ಒಳಮೀಸಲಾತಿಯನ್ನು ಜಾರಿ ಮಾಡುವ ಅಧಿಕಾರವನ್ನು ರಾಜ್ಯಗಳಿಗೆ ಕೊಡುವ ಐತಿಹಾಸಿಕ ತೀರ್ಪು ಪ್ರಕಟಿಸಿತು. ತೀರ್ಪು ಬಂದ ವರ್ಷವಾಗಿದ್ದು, ಒಳಮೀಸಲಾತಿ ಮಾಡುವುದಕ್ಕೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಅಮೆಗತಿಯಲ್ಲಿ ಸಾಗಿದೆ. ರಾಜ್ಯ ಸರ್ಕಾರ ಒಳಮೀಸಲಾತಿಯನ್ನು ಬೇಗ ಮಾಡುವಂತೆ ಒತ್ತಾಯಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಗಷ್ಟ್-01 ರಂದು ಪ್ರತಿಭಟನೆಗಳನ್ನು ಮಾಡಲು ಒಳಮೀಸಲಾತಿ ಹೋರಾಟ ಸಮಿತಿ ಕರೆ ನೀಡಿರುತ್ತದೆ” ಎಂದು ತಿಳಿಸಿದರು.
“ಅಂದು ಹಾವೇರಿ ಜಿಲ್ಲೆಯಲ್ಲಿ ದೇವಗಿರಿಯ ಜಿಲ್ಲಾಡಳಿತ ಭವನದ ಮುಂದೆ ಬೆಳಿಗ್ಗೆ 10-30 ಘಂಟೆಗೆ ಬೃಹತ್ ಪ್ರತಿಭಟನೆ ಮಾಡಲಾಗುತ್ತಿದ್ದು,ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದವರು ಭಾಗವಹಿಸಿರಿ”ಎಂದು ಉಡಚಪ್ಪ ಮಾಳಗಿ ವಿನಂತಿಕೊಂಡರು.
ಮುಖಂಡರು ಡಿ.ಎಸ್ ಮಾಳಗಿ ಮಾತನಾಡಿ, “ನಮಗೆ ಒಳಮೀಸಲಾತಿ ಮಾಡಿದರೆ ಸರ್ಕಾರಗಳ ಸೌಲಭ್ಯ ಪಡೆಯಲು ಸಮಾಜದವರಿಗೆ ಅನುಕೂಲವಾಗಲಿದೆ.ನಮ್ಮ ಬೇಡಿಕೆ ಈಡೇರುವವರಿಗೂ ಹೋರಾಟ ಮಾಡಲಾಗುವುದು” ಎಂದರು.
ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣನವರ ಮಾತನಾಡಿ, “ರಾಜ್ಯ ಸರ್ಕಾರ ಒಳಮೀಸಲಾತಿ ಮಾಡಲು ಮೀನಾಮೇಷ ಮಾಡುತ್ತಿರುವುದು ಖಂಡನೀಯವಾಗಿದೆ.ನ್ಯಾಯಯುತ ಬೇಡಿಕೆಗಾಗಿ ಸುಮಾರು ಮೂವತ್ತು ವರ್ಷಗಳಿಂದ ಹೋರಾಟ ಮಾಡುತ್ತಿದ್ದು, ಸಮಾಜದವರು ನಿರಂತರವಾಗಿ ಹೋರಾಟಕ್ಕೆ ಶಕ್ತಿ ತುಂಬವ ಕೆಲಸ ಮಾಡುತ್ತಿದ್ದಾರೆ” ಎಂದರು.
ಪೂರ್ವಭಾಗಿ ಸಭೆಯ ಅಧ್ಯಕ್ಷತೆವಹಿಸಿದ ಜಿಲ್ಲಾಧ್ಯಕ್ಷರು ನಾಗರಾಜ ಮಾಳಗಿ ಮಾತನಾಡಿ, “ಪಕ್ಷಾತೀತವಾಗಿ ನಮ್ಮ ಹೋರಾಟಕ್ಕೆ ಸಮಾಜದ ಎಲ್ಲರೂ ಒಗ್ಗೂಡಿ ಬೆಂಬಲ ಸೂಚಿಸಬೇಕು.
ಸಭೆಯಲ್ಲಿ ಮುಖಂಡರು ಹೊನ್ನಪ್ಪ ತಗಡಿನಮನಿ, ಅಶೋಕ ಮರೆಣ್ಣನವರ, ಮಾಲತೇಶ ಯಲ್ಲಾಪುರ, ಮಂಜಪ್ಪ ಮರೋಳ, ಚಂದ್ರಪ್ಪ ಹರಿಜನ, ಪ್ರಕಾಶ ಪೂಜಾರ, ಸುಭಾಸ ಮಾಳಗಿ, ನಾಗರಾಜ ಹಾವನೂರ, ಜಗದೀಶ ಹರಿಜನ, ಭೀಮಪ್ಪ ಯಲ್ಲಾಪುರ, ಕುಮಾರ ಮಾಳಗಿ, ದಾಸಪ್ಪ ಮೈಲಮ್ಮನವರ, ಮೈಲಪ್ಪ ಗೋಣಿಬಸಮ್ಮನವರ, ಫಕ್ಕಿರೇಶ ಕಾಳಿ, ಹನುಮಂತಪ್ಪ ಹೌಂಸಿ,ಮಾರುತಿ ಬಣಕಾರ, ಶೇಖಪ್ಪ ದಂಡಿನ, ಫಕ್ಕಿರೇಶ ಪುರದ, ಮಾಲತೇಶ ಬ್ಯಾಡಗಿ, ಮಾರುತಿ ಸೊಟ್ಟಪ್ಪನವರ, ಮಲ್ಲೇಶ ಕಡಕೋಳ, ನಾಗರಾಜ ಬಣಕಾರ, ಗುತ್ತೆಪ್ಪ, ಪರಶುರಾಮ ಹತ್ತಿಮತ್ತೂರ, ಶಂಭಣ್ಣ ದಿವಟಗಿ, ರಶೀದಸಾಬ್, ಮಾಲತೇಶ ಚೌಡಮ್ಮನವರ, ನಾಗರಾಜ ಪೂಜಾರ, ಮಾಲತೇಶ ತಳಗೇರಿ, ಮಾಲತೇಶ ಕನ್ನಮ್ಮನವರ ಸೇರಿದಂತೆ ಒಳಮೀಸಲಾತಿ ಹೋರಾಟ ಸಮಿತಿಯ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.





