‘ಚಕೋರ’ ವೇದಿಕೆಯ ನೂತನ ಹಾವೇರಿ ಜಿಲ್ಲಾ ಸಂಚಾಲಕರಾಗಿ ಶೇಖರ ಭಜಂತ್ರಿ ಹಾಗೂ ಮಾರುತಿ ತಳವಾರ ಅವರನ್ನು ನೇಮಕ ಮಾಡಲಾಗಿದೆ” ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಎಲ್. ಏನ್. ಮುಕುಂದರಾಜ್ ಅವರು ಆದೇಶ ಹೊರಡಿಸಿದ್ದಾರೆ.
‘ಚಕೋರ’ ವೇದಿಕೆಯ ಮೂಲಕ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ಶಾಲೆ, ಕಾಲೇಜು ಮತ್ತು ಸಂಘ-ಸಂಸ್ಥೆಗಳಲ್ಲಿ ಸಾಹಿತ್ಯ ಕಾರ್ಯಕ್ರಮಗಳಾದ ಉಪನ್ಯಾಸ, ಕವಿಗೋಷ್ಠಿ ಇತ್ಯಾದಿ ಕಾರ್ಯಕ್ರಮಗಳನ್ನು ಏರ್ಪಡಿಸಿ ಜನರಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಲು ಸೂಚಿಸಲಾಗಿದೆ.
ಚಕೋರ ವೇದಿಕೆಯ ಅಧ್ಯಕ್ಷರು ಮತ್ತು ಸದಸ್ಯ ಸಂಚಾಲಕರಾದ ಡಾ.ಮಲ್ಲಿಕಾರ್ಜುನ ಬಿ. ಮಾನ್ಪಡೆಯವರ ಜೊತೆಯಲ್ಲಿ ಅಕಾಡೆಮಿಯ ಘನತೆಗೆ ತಕ್ಕಂತೆ ಚಕೋರ ವೇದಿಕೆಯ ಕಾರ್ಯಕ್ರಮಗಳನ್ನು ನಿರ್ವಹಿಸಿಕೊಂಡು ಹೋಗಲು ಅಧ್ಯಕ್ಷರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಹಾವೇರಿ | ಪ್ರೀತಿ ವಂಚಿತ ಮಕ್ಕಳೊಂದಿಗೆ ಸರಳ ದೀಪಾವಳಿ
‘ಚಕೋರ ವಿಚಾರ ಸಾಹಿತ್ಯ’ ಎಂಬ ಹೆಸರಿನಲ್ಲಿ ವಾಟ್ಸಪ್ ಗ್ರೂಪ್ ರಚಿಸಲಿದ್ದು ಜಿಲ್ಲೆಯ ಎಲ್ಲಾ ಸಾಹಿತಿಗಳು, ಅಭಿಮಾನಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳು ಸೇರ್ಪಡೆಗೊಂಡು ಸಕ್ರೀಯವಾಗಿ ಭಾಗವಹಿಸಿ ಸಾಹಿತ್ತಿಕ ಚಟುವಟಿಕೆಗಳನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಸಂಚಾಲಕರಾದ ಶೇಖರ ಭಜಂತ್ರಿ ಮತ್ತು ಮಾರುತಿ ತಳವಾರ ಅವರಿಗೆ ಆದೇಶದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಎಲ್. ಏನ್ ಮುಕುಂದರಾಜ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.





