ಸಮುದಾಯದ ವಾಸ್ತವಿಕ ಸಾಮಾಜಿಕ ಚಿತ್ರಣ ಸಿದ್ಧಪಡಿಸುವ ಉದ್ದೇಶವಾಗಿದ್ದು, ವಿವಾಹ ಸ್ಥಿತಿ ಹಾಗೂ ಶಿಕ್ಷಣ, ಸಾಕ್ಷರತಾ ಸಮೀಕ್ಷೆಯನ್ನು ಉಮ್ಮತ್ ವೆಲ್ಫೇರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ, ಸಮೀಕ್ಷಾ ಕಾರ್ಯ ಹಾವೇರಿ ಜಿಲ್ಲೆಯ ರಾಣಿಬೆನ್ನೂರ ಪಟ್ಟಣದಲ್ಲಿ ಆರಂಭವಾಗಿದೆ.
“ಟ್ರಸ್ಟ್ ಸದಸ್ಯರು ಮನೆ ಮನೆಗೆ ಭೇಟಿ ನೀಡಿ ಮೌಲಿಕ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ. ಈ ಮಾಹಿತಿ ಭವಿಷ್ಯದಲ್ಲಿನ ನೆರವು, ಕಲ್ಯಾಣ ಯೋಜನೆಗಳು ಮತ್ತು ಶಿಕ್ಷಣ ಉತ್ತೇಜನ ಕಾರ್ಯಕ್ರಮಗಳ ರೂಪೀಕರಣಕ್ಕೆ ಮಾರ್ಗದರ್ಶಿಯಾಗಲಿದೆ” ಎಂದು ಟ್ರಸ್ಟಿ ತಿಳಿಸಿದೆ.
“ಸಮೀಕ್ಷೆಯಲ್ಲಿ ವಿವಾಹ ಸ್ಥಿತಿ ಕುರಿತು, ಸಮುದಾಯದ ವಿವಾಹ ವಯೋಮಾನದ ವಿವರಗಳು, ಸಮೀಪ ಭವಿಷ್ಯದ ವಿವಾಹಕ್ಕೆ ತಯಾರಿ, ಆರ್ಥಿಕ ಸ್ಥಿತಿ, ಕುಟುಂಬದ ರಚನೆ, ಅವಲಂಬಿತರ ಸಂಖ್ಯೆ, ವಿವಾಹ ಸಹಾಯ ಅಗತ್ಯ ಇರುವ ಕುಟುಂಬಗಳ ಗುರುತಿಸುವುದು” ಎಂದು ತಿಳಿಸಿದೆ
“ಈ ಡೇಟಾದ ಆಧಾರದಲ್ಲಿ ಟ್ರಸ್ಟ್ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವಿವಾಹ ನೆರವು, ಮಾರ್ಗದರ್ಶನ ಹಾಗೂ ಸಂಯೋಜನೆ ಸಂಬಂಧಿಸಿದ ಯೋಜನೆಗಳನ್ನು ಜಾರಿಗೊಳಿಸಲು ಉದ್ದೇಶಿಸಿದೆ” ಎಂದು ತಿಳಿಸಿದೆ.
“ಶಿಕ್ಷಣ ಸಾಕ್ಷರತಾ ಸಮೀಕ್ಷೆ ಕುರಿತು, ಸಮುದಾಯದ ಸಾಕ್ಷರತಾ ಮಟ್ಟ, ಶಾಲೆ/ಕಾಲೇಜು ಪ್ರವೇಶ ಮತ್ತು ಹಾಜರಾತಿ, ಮಧ್ಯದಲ್ಲಿ ಅಧ್ಯಯನ ಬಿಟ್ಟಿರುವ ವಿದ್ಯಾರ್ಥಿಗಳ ಸ್ಥಿತಿ ಮತ್ತು ಕಾರಣಗಳು, ಮಹಿಳಾ ಶಿಕ್ಷಣ, ವಿದ್ಯಾರ್ಥಿಗಳ ಭವಿಷ್ಯದ ಗುರಿಗಳು ಮತ್ತು ಕೌಶಲ್ಯಾಭಿವೃದ್ಧಿ ಅಗತ್ಯಗಳನ್ನು ಗುರುತಿಸುವುದು” ಎಂದು ತಿಳಿಸಿದೆ.
“ಈ ಮಾಹಿತಿಯನ್ನು ಆಧರಿಸಿ ಟ್ರಸ್ಟ್ ಬಡ ವಿದ್ಯಾರ್ಥಿಗಳಿಗೆ ಟ್ಯೂಷನ್ ಸಹಾಯ, ವಿದ್ಯಾರ್ಥಿವೇತನ, ಸ್ಕಿಲ್ ತರಬೇತಿ, ಮಹಿಳಾ ಶಿಕ್ಷಣ ಜಾಗೃತಿ ಹಾಗೂ ಭವಿಷ್ಯದ ಮಾರ್ಗದರ್ಶನ ಶಿಬಿರಗಳನ್ನು ರೂಪಿಸಲು ಯೋಜನೆ ಮಾಡುತ್ತಿದೆ” ಎಂದು ತಿಳಿಸಿದೆ.

ಸಮೀಕ್ಷೆಯಲ್ಲಿ ಮುಸ್ತಾಕೆ ಅಹ್ಮದ್ ಸೈಗಲ್ಗಾರ್ – ಅಧ್ಯಕ್ಷರು, ಜೀಲಾನಿ ಉಪಾಧ್ಯಕ್ಷರು, ಅಂಸಾರ್ ಖಾಜಿ – ಖಜಾಂಚಿ, ಘೌಸ್ ಸಲಹೆಗಾರರು, ರಫೀಕ್ ಟ್ರಸ್ಟಿ, ನೌಷಾದ್ ಟ್ರಸ್ಟಿ, ಸರಫರಾಝ್ ಟ್ರಸ್ಟಿ ಪಾಲ್ಗೊಳ್ಳುವರು.
ಇದನ್ನು ಓದಿದ್ದೀರಾ? ಹಾವೇರಿ | ಸಮಗ್ರ ಕೃಷಿ ಅಳವಡಿಸಿಕೊಂಡು ಲಕ್ಷಾಂತರ ಆದಾಯ ಗಳಿಸುತ್ತಿರುವ ರೈತನ ಯಶೋಗಾಥೆ
“ಸಮೀಕ್ಷೆಯ ಮಾಹಿತಿ ಸಂಗ್ರಹಣೆ ಪೂರ್ಣಗೊಂಡ ನಂತರ, ಟ್ರಸ್ಟ್ ವಿವರಣಾತ್ಮಕ ವರದಿಯನ್ನು ಪ್ರಕಟಿಸುವುದಾಗಿ ತಿಳಿಸಿದೆ. ಯೋಗ್ಯ ಕುಟುಂಬಗಳಿಗೆ ವಿವಾಹ ಸಹಾಯ, ಶಿಕ್ಷಣ ನೆರವು, ಕೌಶಲ್ಯಾಭಿವೃದ್ಧಿ ಹಾಗೂ ಹಲವು ಸಮಾಜೋಪಕಾರ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುವುದು” ಎಂದು ಟ್ರಸ್ಟ್ ಪ್ರಕಟಿಸಿದೆ.
ಸಮೀಕ್ಷೆಯಲ್ಲಿ ಸಹಕರಿಸುತ್ತಿರುವ ಸಾರ್ವಜನಿಕರಿಗೆ ಟ್ರಸ್ಟ್ ಕೃತಜ್ಞತೆ ಸಲ್ಲಿಸುತ್ತದೆ. ಸಮುದಾಯದ ಸತ್ಯಸ್ಥಿತಿಯನ್ನು ಅರಿತು ಪರಿಹಾರ ರೂಪಿಸುವಲ್ಲಿ ಜನರ ಸಹಭಾಗಿತ್ವ ಮಹತ್ವದ್ದಾಗಿದೆ” ಟ್ರಸ್ಟಿ ತಿಳಿಸಿದೆ.





