ಹಾವೇರಿ ಜಿಲ್ಲೆಯ ರಾಣಿಬೆನ್ನೂರ ಪಟ್ಟಣದ ಅಂಜುಮನ್ ಶಾಲೆಯಲ್ಲಿ ಉಮ್ಮತ್ ವೆಲ್ಫೇರ್ ಎಜುಕೇಷನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮತದಾರರ ಜಾಗೃತಿ ಶಿಬಿರ ಬುಧವಾರ ನಡೆಯಿತು.
ಈ ಶಿಬಿರದಲ್ಲಿ ಮತದಾರರಿಗೆ ಸೀರಿಯಲ್ ನಂಬರ್ (SL No) ಮತ್ತು ಪಾರ್ಟ್ ನಂಬರ್ ಪತ್ತೆ, ಮತದಾರ ವಿವರಗಳ ಸ್ಪಷ್ಟತೆ, ಹಾಗೂ 2002ರ ಮತದಾರರ ಪಟ್ಟಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕೆ ಮಾರ್ಗದರ್ಶನ ನೀಡಲಾಯಿತು.
ಶಿಬಿರದಲ್ಲಿ 600ಕ್ಕೂ ಹೆಚ್ಚು ಜನರಿಗೆ ತಮ್ಮ SL ಮತ್ತು Part ನಂಬರ್ ಪತ್ತೆ ಮಾಡಲು ಸಹಾಯ ಮಾಡಲಾಯಿತು. ಮತದಾರ ಜಾಗೃತಿ ಹಾಗೂ ಸಹಾಯ ಶಿಬಿರದಲ್ಲಿ ದಿನವಿಡೀ ಭಾರೀ ಜನಸ್ಪಂದನೆ ಕಂಡುಬಂದಿತು. ಸಾರ್ವಜನಿಕರೊಂದಿಗೆ ನೇರವಾಗಿ ಕಾರ್ಯನಿರ್ವಹಿಸಿ ಮತದಾರ ಸಂಬಂಧಿತ ಸಮಸ್ಯೆಗಳಿಗೆ ಪರಿಹರಿಸಲಾಯಿತು.
ಈ ಕಾರ್ಯಕ್ರಮವು ಟ್ರಸ್ಟ್ ಅಧ್ಯಕ್ಷರು ಮುಸ್ಟಕ್ ಅಹ್ಮದ್ ಸೈಕಲಗಾರ್ ಅವರ ನೇತೃತ್ವದಲ್ಲಿ ನಡೆಯಿತು. ಉಪಾಧ್ಯಕ್ಷರು ಅಬ್ದುಲ್ಖಾದರ್ ಬಣಕಾರ್, ಖಜಾಂಚಿ ಅನ್ಸರ್ ಖಾಝಿ, ಕಾರ್ಯದರ್ಶಿ ಅಬ್ದುಲ್ ಸತ್ತಾರ್ ರೋತ್ವಲೆ, ಸಲಹೆಗಾರ ಗೌಸ್ ಅಂಗಡಿ ಸಕ್ರಿಯವಾಗಿ ಭಾಗವಹಿಸಿದರು.ಟ್ರಸ್ಟಿ ಸದಸ್ಯರು ಮುನೀರ್ ಅಹ್ಮದ್, ಸನಲ್ಲ ತಾರೇಕ್, ರಫೀಕ್ ಅಹ್ಮದ್ ಮೊಮೀನ್, ನೌಷದ್ ಅಹ್ಮದ್ ಖಾಝಿ, ಶಾಫಿ ಉಲ್ಲಾಹ್ ಯಲ್ಲಾಪುರ, ಮತ್ತು ನಸೀರ್ ಇದ್ದರು.





