“ಮಹಿಳೆಯರು ಸರಕಾರದಿಂದ ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳಿಂದ ತರಬೇತಿ ಪಡೆದು ಕೌಶಲ್ಯಗಳನ್ನು ಬೆಳೆಸಿಕೊಲ್ಲಬೇಕು. ಆಗ ಹೆಚ್ಚು ಉದ್ಯೋಗ ಅವಕಾಶಗಳನ್ನ ಪಡೆಯಬಹುದು. ಕೌಶಲ್ಯ ಹಾಗೂ ನಾಯಕತ್ವ ಗುಣಗಳನ್ನು ಉದ್ಯೋಗ ಮಾಡುವಲ್ಲಿ ಸದುಪಯೋಗ ಮಾಡಿಕೊಳ್ಳಬೇಕು” ಎಂದು ಸಂಪನ್ಮೂಲ ವ್ಯಕ್ತಿ ಹನುಮಂತ ಮರಗಡಿ ಹೇಳಿದರು.
ಹಾವೇರಿ ಜಿಲ್ಲೆಯ ಹಾನಗಲ್ಲ ತಾಲ್ಲೂಕಿನ ದಶರಥಕೊಪ್ಪ ಗ್ರಾಮದಲ್ಲಿ ಲೊಯೋಲ ವಿಕಾಸ ಕೇಂದ್ರ ಸಮಾಜ ಸೇವಾ ಸಂಸ್ಥೆ ವತಿಯಿಂದ ಸಮಗ್ರ ಸುಸ್ಥಿರ ಯೋಜನೆ ಅಡಿಯಲ್ಲಿ ಫಲಾನುಭವಿ ಮಹಿಳೆಯರಿಗೆ ಮತ್ತು ಸಮುದಾಯದ ಮಹಿಳೆಯರಿಗೆ ಏರ್ಪಡಿಸಿದ್ದ ನಾಯಕತ್ವ ಕೌಶಲ್ಯ ಅಭಿವೃದ್ಧಿ ಮತ್ತು ಸಂಘಟನೆಯ ಮಹತ್ವ ಕುರಿತು ಮಾತನಾಡಿದರು.
“ಕೌಶಲ್ಯ ಹಾಗೂ ನಾಯಕತ್ವ ಅಳವಡಿಕೊಂಡರೆ ಮಹಿಳೆ ಸ್ವಾವಲಂಬಿಯಾಗಿ ಬದುಕಲು ಸಾಧ್ಯ. ನಾಯಕತ್ವ ಎಂದರೆ ಧೈರ್ಯದಿಂದ ಮುಂದೆ ನಡೆದು ಇತರರಿಗೆ ದಾರಿ ತೋರಿಸುವ ಶಕ್ತಿಯುಳ್ಳ ಮಹಿಳೆ. ದೃಡ ನಿಲುವು, ಉತ್ತಮ ಸಂವಹನ, ಆತ್ಮವಿಶ್ವಾಸ, ಆದರ್ಶ ನೈತಿಕತೆ, ಸಮಸ್ಯ ಪರಿಹಾರ, ಪ್ರೇರಣೆ ನೀಡುವ ಗುಣಗಳನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಒಬ್ಬ ಒಳ್ಳೆಯ ನಾಯಕತ್ವ ಹೊಂದಿದ ಮಹಿಳೆ ಆಗಲು ಸಾಧ್ಯ” ಎಂದು ಹನುಮಂತ ಮರಗಡಿ ಹೇಳಿದರು.
ಮುಖ್ಯ ಅಥಿತಿಗಳು ಕೆನರಾ ಬ್ಯಾಂಕ ಜಿಲ್ಲಾ ಸಂಯೋಜಕರು ಅಬ್ದುಲ್ ಪಾರೂಕ್ ಮಾತನಾಡಿ, “ಮಹಿಳೆಯರು ಸಂಘಗಳಲ್ಲಿ ಬ್ಯಾಂಕನಿಂದ ಸಾಲ ಸೌಲಭ್ಯ ಪಡೆದು, ಗುಂಪು ಸ್ವಯಂ ಉದ್ಯೋಗ ಚಟುವಟಿಕೆ ಮೂಲಕ ಮತ್ತು ವೈಯಕ್ತಿಕ ಸ್ವಯಂ ಉದ್ಯೋಗದ ಪಡೆಯಬೇಕು. ಈ ಮೂಲಕ ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗಿ ತಾವೂ ಅಭಿವೃದ್ಧಿ ಹೊಂದುವದರ ಜೊತೆ ಇತರರಿಗೆ ಮಾದರಿಯಾಗಿ ಬದುಕಬೇಕು. ಇದರ ಜೊತೆಗೆ ಸ್ಥಳೀಯ ಜನರಿಗೆ ಉದ್ಯೋಗ ಕೊಡುವದರ ಜೊತೆಗೆ ಹಳ್ಳಿಗಳಿಂದ ದೂರದ ಪಟ್ಟಣಗಳಿಗೆ ವಲಸೆ ಹೋಗುವದನ್ನು ತಡೆಗಟ್ಟಿ ಆದರ್ಶ ಬದುಕು ಕಟ್ಟಿಕೊಳ್ಳಬೇku” ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಲೊಯೋಲ ವಿಕಾಸ ಕೇಂದ್ರ ಸಿಬ್ಭಂದಿ ಪಿರಪ್ಪ ಶಿರ್ಶಿ ನಿರೂಪಿಸಿದರು, ಸ್ವಾಗತ ಮಂಜುಳಾ ನಾಗೋಜಿ, ಪರವೀನಬಾನು ಚಿನ್ನಳ್ಳಿ ವಂದಿಸಿದರು. ಲಕ್ಷ್ಮೀ ಮಾಳಾಪೂರ ಈರಪ್ಪ ಬಸಾಪೂರ ವೇದಿಕೆಯಲ್ಲಿ ಉಪಸ್ಥಿತರಿದ್ದರು ಒಟ್ಟಾಗಿ ೩೧ ಮಹಿಳೆಯರು ಉಪಸ್ಥಿತರಿದ್ದರು.





