“ಕಾರ್ಮಿಕರಿಗೆ ನೀಡಲಾಗುವ ಉಚಿತ ಕಿಟ್ ಗಳ ಹಂಚಿಕೆಯಲ್ಲಿ ಅಧಿಕಾರಿಗಳು ಬಹಳಷ್ಟು ತಾರತಮ್ಯ ಮಾಡುತ್ತಿದ್ದು, ಕೂಡಲೇ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು” ಎಂದು ಜಿಲ್ಲಾಧಿಕಾರಿ ಕಛೇರಿ ಎದುರು ಕಾರ್ಮಿಕರು ಪ್ರತಿಭನೆ ನಡೆಸಿದರು.
ಹಾವೇರಿ ಪಟ್ಟಣದ ಜಿಲ್ಲಾಧಿಕಾರಿ ಕಛೇರಿ ಎದುರು ಕರುನಾಡ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಟನೆ ವತಿಯಿಂದ ಕಾರ್ಮಿಕ ನಿರೀಕ್ಷಕರು ಲತಾ ಟಿ.ಎಸ್ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ ನಡೆಸುದರು.
ಪ್ರತಿಭಟನೆಯಲ್ಲಿ ಕರುನಾಡ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಟನೆ ಅಧ್ಯಕ್ಷರು ಹುಚ್ಚನಗೌಡ ಸರ್ವೇರ್ ಮಾತನಾಡು, “ಕಾರ್ಮಿಕರಿಗೆ ಕಿಟ್ ಗಳ ಹಂಚಿಕೆಯಲ್ಲಿ ಆಗುತ್ತಿರುವ ತಾರತಮ್ಯವನ್ನು ಪ್ರಶ್ನಿಸಿಲು ಹಾವೇರಿ ತಾಲೂಕು ಕಾರ್ಮಿಕ ನಿರೀಕ್ಷಕರು ಶ್ರೀಮತಿ ಲತಾ ಟಿ.ಎಸ್ ಅವರು ಬಳಿಗೆ ಹೋದಾಗ ಕಚೇರಿಯಲ್ಲಿ ಇರಲಿಲ್ಲ. ದೂರವಾಣಿಯ ಮುಖಾಂತರ ಮಾತನಾಡುವಾಗ ಅಧಿಕಾರಿಗಳು ನಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಯಾರಿಗೂ ಕಿಟ್ ಕೊಡುವುದಿಲ್ಲ, ಏನು ಮಾಡಿಕೊಳ್ತಿರೋ ಮಾಡ್ಕಳ್ಳಿ, ನನಗೆ ಎಂಎಲ್ಎ, ಎಧಿಕಾರಿಗಳ ಬೆಂಬಲ ಇದೆ. ಯಾರಿಗೂ ಕಿಟ್ ಕೊಡುವುದಿಲ್ಲ” ಎಂದು ಸರ್ವಾಧಿಕಾರಿ ಮಾತುಗಳನ್ನಾಡಿದ್ದಾರೆ ಎಂದರು.
“ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇವರ ಗಂಡನ ಮುಖಾಂತರ ಕಾರ್ಮಿಕ ಇಲಾಖೆಯಲ್ಲಿ ಶಾಪ್ ಆ್ಯಕ್ಟ ಅಡಿಯಲ್ಲಿ ನೀಡುವ ಪರವಾನಿಗೆ ಪತ್ರವನ್ನು ವಿತರಿಸಲು ಕಮಿಷನ್ ಏಜೆಂಟ್ ರೂಪದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕಂಡು ಬಂದಿದೆ. ಕಾರಣ ಇಂತಹ ದುರಹಂಕಾರಿ ಅಧಿಕಾರಿಗಳಿಂದ ಎಲ್ಲ ಕಾರ್ಮಿಕರ ಹಕ್ಕು ಚ್ಯುತಿ ಆಗುತ್ತಿದೆ. ಇಂತಹ ಅಧಿಕಾರಿಗಳಿಂದ ಸರ್ಕಾರಿ ಅಧಿಕಾರಿಗಳು ಹಾಗೂ ಸರ್ಕಾರದ ಮೇಲಿನ ವಿಶ್ವಾಸ ಹೋಗುತ್ತಿದೆ. ಇಂತಹ ದುರಹಂಕಾರದ ಅಧಿಕಾರಿಗಳಿಂದ ಸರ್ಕಾರದ ಮಾನವೂ ಬೀದಿಯಲ್ಲಿ ಹರಾಜ್ ಆಗುತ್ತಿದ್ದು, ಇಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಕಾರ್ಮಿಕರು, ಕಾರ್ಮಿಕ ಮುಖಂಡರು ಉಪಸ್ಥಿತರಿದ್ದರು.





