ಬೇಡ್ತಿ-ವರದಾ ಯೋಜನೆ ಹಿಂದೆ ಬಸವರಾಜ ಬೊಮ್ಮಾಯಿ ರಾಜಕೀಯ ಅಜೆಂಡಾ ಇದೆಯೇ?

Date:

ದಶಕಗಳಿಂದ ಧೂಳು ಹಿಡಿದು ಮಲಗಿದ್ದ ‘ಬೇಡ್ತಿ-ವರದಾ ನದಿ ಜೋಡಣೆ’ ಯೋಜನೆಯ ಕಡತಕ್ಕೆ ಈಗ ಏಕಾಏಕಿ ಜೀವ ಬಂದಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಬಸವರಾಜ ಬೊಮ್ಮಾಯಿಯವರು ಈ ಯೋಜನೆಗಾಗಿ ತೋರುತ್ತಿರುವ ಅತೀವ ಆಸಕ್ತಿಯು ಚರ್ಚೆಯನ್ನು ರಾಜಕೀಯ ವೇದಿಕೆಗೆ ಹತ್ತಿಸಿದೆ. ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಯೋಜನೆ ಕುರಿತು ಚಕಾರ ಎತ್ತದೆ ಇದೀಗ ದಿಢೀರ್‌ ಕಾಳಜಿ ತೋರಿಸುತ್ತಿರುವುದು ವಿಷಯ ಮತ್ತಷ್ಟು ಬಿರುಸು ಪಡೆದಿದೆ.

ಇದು ಕೇವಲ ಅವರ ಜಿಲ್ಲೆಯ ಅಭಿವೃದ್ಧಿಯ ಹಪಾಹಪಿಯಂತೆ ಕಾಣಿಸದೆ, ಇದರ ಹಿಂದೆ ದೀರ್ಘಕಾಲದ ರಾಜಕೀಯ ಲೆಕ್ಕಾಚಾರಗಳು ಮತ್ತು ತಮ್ಮ ರಾಜಕೀಯ ಪರಂಪರೆಯನ್ನು ಭದ್ರಪಡಿಸುವ ತಂತ್ರಗಾರಿಕೆ ಅಡಗಿರುವಂತೆ ಗೋಚರಿಸುತ್ತಿದೆ.

ಹೋರಾಟದ ಹಿನ್ನೆಲೆ:

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಯೋಜನೆಯ ಇತಿಹಾಸ ಮೂರು ದಶಕಗಳಷ್ಟು ಹಳೆಯದು. 1990ರ ದಶಕದಲ್ಲಿ ಎಸ್ ಬಂಗಾರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಬೇಡ್ತಿ ನದಿಗೆ ಅಣೆಕಟ್ಟು ಕಟ್ಟಿ ವಿದ್ಯುತ್ ಉತ್ಪಾದಿಸುವ ಪ್ರಸ್ತಾಪ ಮುಂದಿಟ್ಟಿದ್ದರು. ಆಗ ಶಿರಸಿ, ಸಿದ್ದಾಪುರ ಮತ್ತು ಯಲ್ಲಾಪುರದ ಜನತೆ ಪಶ್ಚಿಮ ಘಟ್ಟಗಳ ರಕ್ಷಣೆಗಾಗಿ ಬೃಹತ್ ಚಳವಳಿ ನಡೆಸಿದ್ದರು. ಅಂದು ಸಣ್ಣ ಪಕ್ಷವಾಗಿದ್ದ ಬಿಜೆಪಿ ಈ ಹೋರಾಟಕ್ಕೆ ಬೆಂಬಲ ನೀಡಿ ಪರಿಸರದ ಪರ ನಿಲುವು ತಳೆದಿತ್ತು. ಆಗ ಜನಾಗ್ರಹಕ್ಕೆ ಮಣಿದು ಸರ್ಕಾರ ಅಂದು ಯೋಜನೆಯನ್ನು ಕೈಬಿಟ್ಟಿತ್ತು. ಆದರೆ, ಕಾಲಚಕ್ರ ಉರುಳಿದೆ. ಅಂದು ಪರಿಸರಕ್ಕಾಗಿ ಹೋರಾಡಿದ್ದ ಬಿಜೆಪಿ ನಾಯಕರೇ ಇಂದು ಅದೇ ಪರಿಸರಕ್ಕೆ ಮಾರಕವಾಗಬಲ್ಲ ನದಿ ಜೋಡಣೆ ಯೋಜನೆಯನ್ನು ಅನುಷ್ಠಾನ ಮಾಡಿಯೇ ತೀರುವಲ್ಲಿ ಮುಂಚೂಣಿಯಲ್ಲಿದ್ದಾರೆ.

BEDTI VARADA

ಕಾಗೇರಿಯವರ ಬದಲಾದ ನಿಲುವು ಮತ್ತು ‘ಧರ್ಮಸಂಕಟ’:

ವಿಶ್ವೇಶ್ವರ ಹೆಗಡೆ ಕಾಗೇರಿಯವರು ಬೇಡ್ತಿ ಚಳವಳಿಯ ಮೂಲಕವೇ ರಾಜಕೀಯವಾಗಿ ಮುನ್ನೆಲೆಗೆ ಬಂದವರು. ಅವರು ವಿಧಾನಸಭೆಯ ಸಭಾಧ್ಯಕ್ಷರಾಗಿದ್ದ ಅವಧಿಯಲ್ಲಿ ಈ ಯೋಜನೆಗೆ ಚಾಲನೆ ನೀಡುವ ಪ್ರಸ್ತಾವನೆ ಬಂದಾಗ ಅನಿವಾರ್ಯವಾಗಿ ಮೌನಕ್ಕೆ ಶರಣಾಗಿದ್ದರು. ಆದರೆ, ಇಂದು ಅವರು ಉತ್ತರ ಕನ್ನಡದ ಸಂಸದರಾಗಿ ಬದಲಾದ ಪರಿಸ್ಥಿತಿಯಲ್ಲಿ ಯೋಜನೆಯ ಬಗ್ಗೆ ಅಪಸ್ವರ ಎತ್ತುತ್ತಿದ್ದಾರೆ.

ಅತ್ತ ಪರಿಸರ ತಜ್ಞರಾಗಿ ಗುರುತಿಸಿಕೊಂಡಿರುವ ಅನಂತ ಹೆಗಡೆ ಅಶೀಸರ ಅವರು, ಪಶ್ಚಿಮ ಘಟ್ಟಗಳ ರಕ್ಷಣೆಗೆ ನಿಲ್ಲಬೇಕಾ? ಅಥವಾ ಕೇಂದ್ರದ ಅವರದೇ ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷಿ ನದಿ ಜೋಡಣೆ ಯೋಜನೆಗಳನ್ನು ಒಪ್ಪಿಕೊಳ್ಳಬೇಕಾ? ಎನ್ನುವ ಗೊಂದಲದಲ್ಲಿದ್ದಾರೆ. ಆದರೂ ಸಮಯ ಸಿಕ್ಕಾಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಯೋಜನೆ ಬಗ್ಗೆ ವಿರೋಧ ಮಾಡುತ್ತಾ, ಈ ಇಬ್ಬರೂ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಕೆಲಸ ಮಾಡಿಕೊಂಡಿದ್ದಾರೆ.

ಬೊಮ್ಮಾಯಿಯವರ ‘ಪವರ್ ಪಾಲಿಟಿಕ್ಸ್’:

ಬಸವರಾಜ ಬೊಮ್ಮಾಯಿಯವರು ಈ ಯೋಜನೆಯ ಮೇಲೆ ಇಷ್ಟೊಂದು ಹಿಡಿತ ಸಾಧಿಸಲು ಅವರ ವೈಯಕ್ತಿಕ ಸಂಬಂಧಗಳು ದೊಡ್ಡ ಶಕ್ತಿಯಾಗಿವೆ. ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಮತ್ತು ವಿ ಸೋಮಣ್ಣ ಅವರೊಂದಿಗೆ ಬೊಮ್ಮಾಯಿಯವರಿಗಿರುವ ನಿಕಟ ಬಾಂಧವ್ಯವು ಈ ಯೋಜನೆಗೆ ಕೇಂದ್ರದಿಂದ ಅನುಮೋದನೆ ಮತ್ತು ಅನುದಾನ ತರಲು ವರದಾನವಾಗಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ಸಿದ್ದರಾಮಯ್ಯ ಅವರ ಜೊತೆಗಿನ ಸ್ನೇಹವನ್ನು ಬಳಸಿಕೊಂಡು “ಸರ್ಕಾರ ಸಭೆ ಕರೆಯಲಿ, ನಾವು ಸಹಕರಿಸುತ್ತೇವೆ” ಎನ್ನುವ ಮೂಲಕ ಬೊಮ್ಮಾಯಿ ಅತ್ಯಂತ ಚಾಣಾಕ್ಷ ನಡೆ ಇಟ್ಟಿದ್ದಾರೆ.

ಪುತ್ರನ ಭವಿಷ್ಯ ಮತ್ತು ರಾಜಕೀಯ:

ಬೊಮ್ಮಾಯಿಯವರು ತಮ್ಮ ರಾಜಕೀಯ ನಿವೃತ್ತಿಯ ಹಂತ ಸಮೀಪಿಸುತ್ತಿರುವಾಗ, ತಮ್ಮ ಪುತ್ರ ಭರತ್ ಬೊಮ್ಮಾಯಿ ಅವರ ರಾಜಕೀಯ ಪ್ರವೇಶಕ್ಕೆ ಈ ಯೋಜನೆಯನ್ನು ‘ಟ್ರಂಪ್ ಕಾರ್ಡ್’ ಆಗಿ ಬಳಸಬಹುದಾ ಎನ್ನುವ ಪ್ರಶ್ನೆ ಮೂಡಿದೆ.‌ ಹಾವೇರಿ, ಗದಗ ಜಿಲ್ಲೆಯ ನೀರಿನ ಬವಣೆ ನೀಗಿಸಿದ ‘ಭಗೀರಥ’ ಎಂಬ ಹೆಸರು ಪಡೆಯುವ ಮೂಲಕ ಜಿಲ್ಲೆಯಲ್ಲಿ ಬೊಮ್ಮಾಯಿ ಕುಟುಂಬದ ಹಿಡಿತವನ್ನು ಶಾಶ್ವತಗೊಳಿಸುವುದು ಅವರ ಗುರಿಯಾಗಿದೆ, ಅದಕ್ಕಾಗಿ ಬೊಮ್ಮಾಯಿ ಅವರು ಈ ಯೋಜನೆಗೆ ಮಠಗಳನ್ನು ಸ್ವಾಮಿಗಳನ್ನು ಬೆಂಬಲಕ್ಕೆ ಕರೆತರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಒಂದು ವೇಳೆ ರಾಜ್ಯ ಮತ್ತು  ಕೇಂದ್ರ ಸರ್ಕಾರಗಳು ಮುಂದಾಗಿ ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದರೆ, ಅದರ ಸಂಪೂರ್ಣ ಶ್ರೇಯಸ್ಸು ಬೊಮ್ಮಾಯಿ ಅವರಿಗೆ ಸಲ್ಲಲಿದೆ. ಏಕೆಂದರೆ ಹಾವೇರಿ ಜಿಲ್ಲೆಯಲ್ಲಿ ಈ ಯೋಜನೆ ಬಗ್ಗೆ ಅವರೊಬ್ಬರೆ ಪ್ರತಿದಿನ ಧ್ವನಿ ಎತ್ತುವುದು ಮತ್ತು ಯೋಜನೆ ಜಾರಿ ಬಗ್ಗೆ ಸಮಾವೇಶ ಮಾಡಿ ಈ ಯೋಜನೆಯನ್ನು ನೇರವಾಗಿ ಜನರ ನಡುವೆ ತೆಗೆದುಕೊಂಡು ಹೋಗಿ,ʼ ಈ ಯೋಜನೆ ಜಾರಿಯಾದರೆ ರೈತರ ಬದುಕು ಹಸನವಾಗಲಿದೆʼ ಎಂದು ಹೇಳುತ್ತಾ ಬರುತ್ತಿರುವುದು. ಒಂದು ವೇಳೆ ಉತ್ತರ ಕನ್ನಡ ಜಿಲ್ಲೆಯ ಪರಿಸರವಾದಿಗಳು ಮತ್ತು ರಾಜಕೀಯ ನಾಯಕರ ವಿರೋಧದಿಂದ ಯೋಜನೆ ವಿಫಲವಾದರೆ ನಾನು ಎಷ್ಟೇ ಪ್ರಯತ್ನಿಸಿದರು ಯೋಜನೆ ಜಾರಿಗೆ ತರಲು ಆಗಲಿಲ್ಲ ಇದಕ್ಕೆ ಉತ್ತರ ಕನ್ನಡ ಜಿಲ್ಲೆಯ ಪರಿಸರವಾದಿಗಳು ಮತ್ತು ಅಲ್ಲಿನ ರಾಜಕೀಯ ನಾಯಕರೆ ಕಾರಣ ಎಂದು ಹೇಳಿ ಅವರ ಮೇಲೆ ಗೂಬೆ ಕೂರಿಸುವ ಅವಕಾಶವೂ ಅವರಿಗಿದೆ.

ಅದೇ ರೀತಿ ಈ ಯೋಜನೆ ಬಗ್ಗೆ ಹಾನಗಲ್ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಮಾನೆ ಅವರು, ಅಲ್ಲೊಂದು ಇಲ್ಲೊಂದು ಹೇಳಿಕೆ ನೀಡಿ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದ್ದಾರೆ.

ಕೇಂದ್ರದ ಆಸಕ್ತಿ ಮತ್ತು ತಾಂತ್ರಿಕ ಸವಾಲುಗಳು:

ರಾಷ್ಟ್ರೀಯ ಜಲಾಭಿವೃದ್ಧಿ ಸಂಸ್ಥೆಯು ಗುರುತಿಸಿರುವ ಭಾರತದ 30 ಮಹತ್ವದ ನದಿ ಜೋಡಣೆ ಯೋಜನೆಗಳಲ್ಲಿ ʼಬೇಡ್ತಿ-ವರದಾʼ ಕೂಡ ಒಂದು. ಕೇಂದ್ರ ಸರ್ಕಾರವು ಈಗಾಗಲೇ ಇದಕ್ಕೆ ಪೂರಕವಾಗಿ ವರದಿಗಳನ್ನು ಸಿದ್ಧಪಡಿಸಿದೆ. ಆದರೆ, 61 ಮೆಗಾವ್ಯಾಟ್ ವಿದ್ಯುತ್ ಬಳಸಿ ನೀರನ್ನು ಮೇಲೆತ್ತುವ ಪ್ರಕ್ರಿಯೆ ಮತ್ತು 500 ಎಕರೆಗೂ ಅಧಿಕ ಅರಣ್ಯ ನಾಶದ ಕಹಿ ಸತ್ಯಗಳನ್ನು ಕಡೆಗಣಿಸುವಂತಿಲ್ಲ. ಬೇಸಿಗೆಯಲ್ಲಿ ಎರಡೂ ನದಿಗಳು ಬತ್ತಿ ಹೋಗುವಾಗ, ಈ ಜೋಡಣೆ ಕಾಗದದ ದೋಣಿಯಾಗಿ ಉಳಿಯಬಾರದು ಎಂಬುದು ತಜ್ಞರ ಎಚ್ಚರಿಕೆ.

ವರದ

ಬೇಡ್ತಿ-ವರದಾ ಯೋಜನೆಯು ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ರಾಜಕೀಯ ಅಳಿವು-ಉಳಿವಿನ ದಿಕ್ಸೂಚಿಯಾಗಲಿದೆ. ಜಿಲ್ಲೆಯ ಜನರ ಭಾವನೆಗಳನ್ನು ನೀರಾವರಿಯ ಮೂಲಕ ಗೆದ್ದು, ತಮ್ಮ ಉತ್ತರಾಧಿಕಾರಿಗಳಿಗೆ ಸುಭದ್ರ ವೇದಿಕೆ ಸಿದ್ಧಪಡಿಸಿಕೊಡುವುದೇ ಈ ‘ನದಿ ಜೋಡಣೆ’ ಆಸಕ್ತಿಯ ಹಿಂದಿನ ಅಸಲಿ ಮರ್ಮ ಎನ್ನುವುದು ಎರಡೂ ಜಿಲ್ಲೆಯ ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಬೊಮ್ಮಾಯಿ ಅವರನ್ನು ನಾವೇ ಹೋರಾಟಕ್ಕೆ ಕರೆತಂದಿದ್ದೇವೆ: ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ

“ಬೇಡ್ತಿ-ವರದಾ ಯೋಜನೆ ರೈತರ ಬದುಕಿನ ಪ್ರಶ್ನೆಯಾಗಿದ್ದು, ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಈ ಯೋಜನೆಯ ಬಗ್ಗೆ ಸಂಪೂರ್ಣ ಅರಿವಿರುವುದರಿಂದ, ಹಾವೇರಿ ಜಿಲ್ಲೆಯ ರೈತರೇ ಅವರನ್ನು ಬಲವಂತ ಮಾಡಿ ಹೋರಾಟದ ಮುಂಚೂಣಿಗೆ ಕರೆತಂದಿದ್ದೇವೆ” ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.

“ಸಮುದ್ರಕ್ಕೆ ವ್ಯರ್ಥವಾಗಿ ಹರಿಯುವ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸಿಕೊಳ್ಳಲು ಉತ್ತರ ಕನ್ನಡದವರು ಸಹಕರಿಸಬೇಕು. ಇದೇ ಜನವರಿ 26ರಂದು ಹಾವೇರಿಯ ಹುಕ್ಕೇರಿ ಮಠದಲ್ಲಿ ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು ಮತ್ತು ಮಠಾಧೀಶರ ನೇತೃತ್ವದಲ್ಲಿ ಬೃಹತ್ ಸಭೆ ನಡೆಸಿ ಮುಂದಿನ ಹೋರಾಟ ರೂಪಿಸಲಾಗುವುದು. ಈ ಯೋಜನೆಗೆ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಒಪ್ಪಿಗೆ ಇರುವುದರಿಂದ ಬೊಮ್ಮಾಯಿ ಅವರ ಹಸ್ತಕ್ಷೇಪದ ಪ್ರಶ್ನೆಯೇ ಬರುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಬೇಡ್ತಿ-ವರದಾ ನದಿ ಜೋಡಣೆ | ಬಯಲುಸೀಮೆಗೆ ಹೊತ್ತು: ಪಶ್ಚಿಮ ಘಟ್ಟಕ್ಕೆ ಕುತ್ತು

ಈದಿನದೊಂದಿಗೆ ಮಾತನಾಡಿದ ಹಾನಗಲ್ ತಾಲೂಕಿನ ರಾಜಕೀಯ ಮುಖಂಡ ಶಂಭಣ್ಣ ಪಾಟೀಲ್, “ಬೇಡ್ತಿ-ವರದಾ ಯೋಜನೆ ಜಾರಿಯಾದರೆ ಬಸವರಾಜ ಬೊಮ್ಮಾಯಿಯವರು ಜಿಲ್ಲೆಯ ‘ಭಗೀರಥ’ ಎನಿಸಿಕೊಳ್ಳಲಿದ್ದಾರೆ. ಈ ಮೂಲಕ ಅವರು ತಮ್ಮ ಪುತ್ರ ಭರತ್ ಬೊಮ್ಮಾಯಿಯವರ ರಾಜಕೀಯ ಪ್ರವೇಶಕ್ಕೆ ಸುಭದ್ರ ವೇದಿಕೆ ಸಿದ್ಧಪಡಿಸುತ್ತಿದ್ದಾರೆ” ಎಂದು ಹೇಳಿದರು.

“ಯೋಜನೆಯ ಯಶಸ್ಸಿನ ಸಂಪೂರ್ಣ ಶ್ರೇಯಸ್ಸು ಪಡೆದು ಜಿಲ್ಲೆಯಲ್ಲಿ ತಮ್ಮ ಕುಟುಂಬದ ಹಿಡಿತ ಸಾಧಿಸುವುದು ಅವರ ಗುರಿಯಾಗಿದೆ. ಒಂದು ವೇಳೆ ಯೋಜನೆ ವಿಫಲವಾದರೆ ಅದರ ಗೂಬೆಯನ್ನು ಉತ್ತರ ಕನ್ನಡದವರ ಮೇಲೆ ಕೂರಿಸುವ ತಂತ್ರವೂ ಇದರಲ್ಲಿದೆ” ಎಂದರು.

ಒಟ್ಟಿನಲ್ಲಿ ʼಬೇಡ್ತಿ–ವರದಾʼ ಯೋಜನೆ ಒಂದೆಡೆ ಅಭಿವೃದ್ಧಿ ಕನಸು, ಇನ್ನೊಂದೆಡೆ ಪರಿಸರ ನಿರ್ಮಾನಮ ಭೀತಿ ಹುಟ್ಟು ಹಾಕಿದೆ. ಏತನ್ಮಧ್ಯೆ ರಾಜಕೀಯ ಉತ್ತರಾಧಿಕಾರದ ಚರ್ಚೆಯೂ ಜೋರಾಗಿ ನಡೆದಿದೆ. ಈ ಯೋಜನೆ ಯಶಸ್ವಿಯಾದರೆ, ಅದರ ಶ್ರೇಯಸ್ಸು ಒಬ್ಬ ವ್ಯಕ್ತಿಗೆ ಅಥವಾ ಒಂದು ಕುಟುಂಬಕ್ಕೆ ಸೀಮಿತವಾಗಬಾರದು; ವಿಫಲವಾದರೆ, ಅದರ ಹೊಣೆಗಾರಿಕೆಯನ್ನು ಪರಿಸರವಾದಿಗಳು ಅಥವಾ ನಿರ್ದಿಷ್ಟ ಜಿಲ್ಲೆಗಳ ಮೇಲೆ ತಳ್ಳುವ ರಾಜಕೀಯವೂ ಸ್ವೀಕಾರಾರ್ಹವಲ್ಲ. ನೀರು ಜನರದ್ದು. ಸರ್ಕಾರಗಳು ವೈಜ್ಞಾನಿಕ ತರ್ಕ ಮತ್ತು ಪರಿಸರ-ಮಾನವೀಯ ಅಂಶಗಳನ್ನೂ ಪರಿಗಣಿಸಿ ಜವಾಬ್ದಾರಿಯುತವಾಗಿ ಮುಂದಿನ ಹೆಜ್ಜೆ ಇಡಬೇಕಿದೆ.

987638ca8c89079659d0147ec8165bb4e02be67aff4a7af8f502ae66e86a5a1e?s=150&d=mp&r=g
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...