“ಹಾವೇರಿ ಜಿಲ್ಲೆಯಿಂದ 2026ರ ಸಾಲಿನ 169 ಹಜ್ ಯಾತ್ರಿಗಳು ತೆರಳುತ್ತಿದ್ದಾರೆ. ಯಾತ್ರಿಗಳಿಗೆ ಲಸಿಕೆ ಸರ್ಕಾರದಿಂದ ಕಡ್ಡಾವಾಗಿರುತ್ತದೆ. ಆದರೆ ಲಸಿಕೆಯನ್ನು ಹುಬ್ಬಳ್ಳಿಯಲ್ಲಿ ಹಾಕುವ ಬದಲಾಗಿ ಹಾವೇರಿಯಲ್ಲಿಯೇ ಹಾಕಬೇಕು ನೂರಾರು ಜನ ನಮ್ಮ ಜಿಲ್ಲೆಯವರೆ ಇರುವಾಗ ಬೇರೆ ಮಾಡಿದ ವ್ಯವಸ್ಥೆ ಸ್ಥಳೀಯವಾಗಿ ಮಾಡಿ” ಎಂದು ಅಂಜುಮನ್ ಸದಸ್ಯರು ಸರ್ಕಾರವನ್ನು ಒತ್ತಾಯಿಸಿದರು.
ಹಾವೇರಿ ಪಟ್ಟಣದಲ್ಲಿ ಅವರು ಪತ್ರಿಕಾ ಹೇಳಿಕೆಯಲ್ಲಿ ಅವರು, “ವಿದಾನಸಭೆಯ ಉಪ ಸಭಾಪತಿಯಾದ ರುದ್ರಪ್ಪ ಲಮಾಣಿ ಇವರ ಜೊತೆಗೆ ಚರ್ಚಿಸಿದಾಗ ಲಸಿಕೆಯನ್ನು ಹಾವೇರಿ ಜಿಲ್ಲೆಯಲ್ಲಿ ಹಾಕಿಸುವ ಭರವಸೆ ನೀಡಿದ್ದಾರೆ. ಅದಕ್ಕೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.
ಇತ್ತಿಚೀಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಹಾವೇರಿ ಶಹರ ಅಂಜುಮನ್ ಸಂಸ್ಥೆಗೆ 25 ಲಕ್ಷ ಖಬರಿಸ್ತಾನ ಅಭಿವೃದ್ಧಿಗೆ ದೊರೆತ್ತಿದ್ದು, ವಿಧಾನಸಭೆಯ ಉಪ ಸಭಾಪತಿ ರುದ್ರಪ್ಪ ಲಮಾಣಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವ ಕುಮಾರ ನೀರಲಗಿ, ಕೆ.ಸಿ.ಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ ಮತ್ತು ಶಹರ ಕಾಂಗ್ರೆಸ್ ಅಧ್ಯಕ್ಷರಾದ ಪ್ರಭುಗೌಡ ಬಿಷ್ಟನಗೌಡ್ರ ಸೇರಿದಂತೆ ಸಹಕಾರಿಸಿದ ಎಲ್ಲರಿಗೂ ಅಭಿನಂದನೆಗಳು ತಿಳಿಸಿದ್ದಾರೆ
ಬಹುದಿನದ ಬೇಡಿಕೆಯಾಗಿದ್ದು ಕಿತ್ತೂರ ಕರ್ನಾಟಕದ ಭಾಗದಲ್ಲಿ ಹುಬ್ಬಳ್ಳಿಯಲ್ಲಿ ಹಜ್ ಭವನದ ನಿರ್ಮಾಣಕ್ಕೆ ೨೦೨೬ರ ಬಜೆಟ್‌ನಲ್ಲಿ ಘೊಷಣೆಯಾಗಿದ್ದು ಇದರಿಂದ್ದ ಸುತ್ತ-ಮುತ್ತಲಿನ ಎಲ್ಲಾ ಜಿಲ್ಲೆಗಳಿಗೆ ಅನುಕೂಲವಾಗಿದೆ. ಆದರಿಂದ್ದ ಜನಪ್ರೀಯ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಹಾಗೂ ವಕ್ಫ್ ಸಚಿವರಾದ ಜಮೀರ ಅಹ್ಮದಖಾನ, ಸರ್ಕಾರದ ಎಲ್ಲಾ ಸಚಿವರಿಗೂ ಹೃದಯಪೂರ್ವಕ ಧನ್ಯವಾದಗಳು ತಿಳಿಸಿದ್ದಾರೆ.
ನಂತರದಲ್ಲಿ “ಜಿಲ್ಲೆಯ ಎಲ್ಲಾ ಶಾಸಕರು ಮುಸ್ಲಿಂ ಸಮುದಾಯದವರಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುತ್ತಾರೆ. ಆದರಿಂದ ಜಿಲ್ಲೆಯ ಯಾವುದೇ ಶಾಸಕರಿಗೂ ಸಚಿವ ಸ್ಥಾನವನ್ನು ನೀಡಿದರೆ ಅವರಿಗೆ ಮುಸ್ಲಿಂ ಸಮುದಾಯದವರು ಬೆಂಬಲ ಸೂಚಿಸುತ್ತೇವೆ” ಎಂದು ಅಂಜುಮನ್ ಸದಸ್ಯರು ಹಾಗೂ ನಗರಸಭೆ ಸದಸ್ಯ ಪೀರಸಾಬ ಚೊಪದಾರ ಹೇಳಿದರು.
ಈ ಸಂದರ್ಭದಲ್ಲಿ ಅಕ್ಬರಖಾನ ಶಿರಸಿ, ಶೋಯೆಬ ಬಡಿಗೇರ, ವಕೀಲರಾದ ಮರ್ದಾನಸಾಬ ಹುಂಬಿಗೇರಿ, ಮೆಹಬೂಬಅಲಿ ದೇವಿಹೊಸೂರ, ಮಹ್ಮದ ಸಾಧಿಕ ಮೇಲ್ಮುರಿ, ನಫ್ತಾರಅಹ್ಮದ ಗುಡಗೇರಿ, ಸಾಧಿಕ ಕಬ್ಬೂರ, ಇಜಾಜ ಮೊರಟಗಿ, ಇರ್ಷಾದಲಿ ಜಮಾದಾರ ಉಪಸ್ಥಿತರಿದ್ದರು.





