ಇಸ್ಲಾಮಿಕ್ ಸಾಮಾಜಿಕ ಜವಾಬ್ದಾರಿಯ ಭಾವನೆಯಿಂದ ಪ್ರೇರಿತರಾಗಿ ರಾಣೇಬೆನ್ನೂರು ಪಟ್ಟಣದ ನಾಲ್ಕು ಪ್ರದೇಶಗಳಲ್ಲಿ ನೂರಾರು ಅರ್ಹ ಕುಟುಂಬಗಳಿಗೆ ಉಮ್ಮತ್ ವೆಲ್ಫೆರ್ಎಜ್ಯುಕೇಶನಲ್ ಆಂಡ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ಪಟ್ಟಣದಲ್ಲಿ ವಾರ್ಷಿಕ ಜಕಾತ್ ವಿತರಣಾ ಕಾರ್ಯಕ್ರಮ ನಡೆಯಿತು.
“ಈ ವಿತರಣಾ ಕಾರ್ಯಕ್ರಮವನ್ನು ಪಾರದರ್ಶಕತೆ ಮತ್ತು ಘನತೆಯಿಂದ ಯೋಜಿಸಿ ಕಾರ್ಯ ರೂಪಕ್ಕೆ ತರಲಾಗಿದೆ. ಟ್ರಸ್ಟ್‌ನ ಸ್ವಯಂಸೇವಕರು ಮತ್ತು ಅಧಿಕಾರಿಗಳು ಜೊತೆಗೂಡಿ ಮೋಮಿನ್ ಗಲ್ಲಿ, ಗಂಜಿ ಗಲ್ಲಿ, ಖತೀಬ್ ಗಲ್ಲಿ ಹಾಗೂ ಇಸ್ಹಾಕ್ ಖಾನ್ ಗಲ್ಲಿಯಲ್ಲಿ ಮೊದಲೇ ಸಮೀಕ್ಷೆ ನಡೆಸಿ, ಅರ್ಹತೆ ಇರುವ ಕುಟುಂಬಗಳನ್ನು ಗುರುತಿಸಲಾದ್ದು, ಅವರಿಗೆ ಆರ್ಥಿಕ ನೆರವು ಹೊಂದಿರುವ ಜಕಾತ್ ಲಕೋಟೆಗಳನ್ನು ಪ್ರತಿ ಕುಟುಂಬಕ್ಕೆ ಗೌರವ ಮತ್ತು ಘನತೆಯಿಂದ ತಲುಪಿಸಲಾಯಿತು” ಎಂದು ಹೇಳಿದರು.
“ಈ ಕಾರ್ಯಕ್ರಮವನ್ನು ಸಾಧ್ಯಗೊಳಿಸಿದ ಎಲ್ಲ ದಾನಿಗಳಿಗೆ ಮತ್ತು ಶುಭ ಚಿಂತಕರಿಗೆ ಟ್ರಸ್ಟ್ ವತಿಯಿಂದ ಧನ್ಯವಾದಗಳನ್ನು ಸಲ್ಲಿಸುತ್ತೇವೆ.
“ಜಕಾತ್ ಕೇವಲ ಧಾರ್ಮಿಕ ಕರ್ತವ್ಯವಲ್ಲ, ಅದು ಸಾಮಾಜಿಕ ನ್ಯಾಯದ ಶಕ್ತಿಶಾಲಿ ಸಾಧನವಾಗಿದೆ. ನಾವು ನೀಡುವ ಪ್ರತಿ ಲಕೋಟೆಯಲ್ಲಿ ಕೇವಲ ಆರ್ಥಿಕ ಸಹಾಯವಲ್ಲ, ಸಮುದಾಯದ ಬೆಚ್ಚನೆಯ ಕಾಳಜಿಯೂ ಇದೆ” ಎಂದು ಟ್ರಸ್ಟ್ ಸದಸ್ಯರು ಹೇಳಿದರು.
“ಜೊತೆಗೆ ಶಿಕ್ಷಣ ವಿದ್ಯಾರ್ಥಿವೇತನ, ವೈದ್ಯಕೀಯ ನೆರವು ಮತ್ತು ವೃತ್ತಿ ತರಬೇತಿ ಕಾರ್ಯಕ್ರಮಗಳಿಗಾಗಿ ಸಮುದಾಯ ಮತ್ತು ದಾನಿಗಳು ತಮ್ಮ ಬೆಂಬಲ ಮುಂದುವರಿಸಬೇಕು” ಎಂದು ಟ್ರಸ್ಟ್ ಮನವಿ ಮಾಡಿದೆ.
ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷರು ಮುಷ್ತಾಕ್ ಅಹ್ಮದ್ ಸೈಕಲ್‌ಗರ, ಖಜಾಂಚಿ ಅನ್ಸಾರ್ ಖಾಜಿ, ಸಲಹೆಗಾರರು ಗೌಸ್ ಅಗಡಿ, ಸದಸ್ಯರು ಝಕೀರ್ ಹುಸೇನ್ ಚಿಕ್ಕೇರೂರ್, ಶಫೀ ಉಲ್ಲಾ ಯಲ್ಲಾಪುರ ಇದ್ದರು.





