ಹಾವೇರಿ | ದಲಿತ ಸಮುದಾಯಕ್ಕೆ ಮತಾಂತರಗೊಂಡ ಜನರಿಗೆ ಮೀಸಲಾತಿ ನೀಡುವಂತೆ ದಸಂಸ ಒತ್ತಾಯ

Date:

ಕ್ರೈಸ್ತ, ಮುಸ್ಲಿಂ, ಹಿಂದುಳಿದ ಜಾತಿಗಳಿಂದ ದಲಿತ ಸಮುದಾಯಕ್ಕೆ ಸ್ವಯಂ ಇಚ್ಛೆಯಿಂದ ಮತಾಂತರಗೊಂಡ ಜನರಿಗೆ ಮೀಸಲಾತಿ ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿ (ದಸಂಸ) ಒತ್ತಾಯಿಸಿದೆ.

ಹಾವೇರಿಯಲ್ಲಿ ದಸಂಸ ಮತ್ತು ಪರಿಶಿಷ್ಟ ಜಾತಿ ಹಿತರಕ್ಷಣಾ ಸಮಿತಿಯ ಮುಖಂಡರು ಸಭೆ ನಡೆಸಿದ್ದಾರೆ. ಸಭೆಯಲ್ಲಿ “ದಲಿತ ಸಮುದಾಯಕ್ಕೆ ಮತಾಂತರ ಹೊಂದಿದವರಿಗೆ ಮೀಸಲಾತಿ ನೀಡಲೇಬೇಕು” ಎಂಬ ನಿರ್ಣಯವನ್ನು ಅಂಗೀಕರಿಸಿದ್ದಾರೆ.

ಸಭೆಯಲ್ಲಿ ಮಾತನಾಡಿದ ದಸಂಸ ಮುಖಂಡ ಉಡಚಪ್ಪ ಮಾಳಗಿ, “ದಲಿತ ಸಮುದಾಯಕ್ಕೆ ಸ್ವಯಂ ಇಚ್ಛೆಯಿಂದ ಮತಾಂತರ ಹೊಂದಿರುವ ಕ್ರೈಸ್ತ, ಮುಸ್ಲಿಂ, ಹಿಂದುಳಿದ ಜನರಿಗೆ ಇವರಿಗೆ ಮೀಸಲಾತಿ ವಿಸ್ತರಣೆ ಕೋರಿರುವ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಈ ಬಗ್ಗೆ ವ್ಯಾಪಕ ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರವು ನ್ಯಾಯಮೂರ್ತಿ ಕೆ.ಜಿ ಬಾಲಕೃಷ್ಣನ್ ಆಯೋಗ ರಚಿಸಿದೆ. ಈ ಸಮಯದಲ್ಲಿ, ದಲಿತ ಸಂಘಟನೆಗಳು ಮೀಸಲಾತಿ ವಿಸ್ತರಣೆ ಕುರಿತು ಸಮಗ್ರ ವರದಿಯನ್ನು ಆಯೋಗಕ್ಕೆ ನೀಡಬೇಕಿದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸಭೆಯಲ್ಲಿ ದಸಂಸ ಮುಖಂಡ ಮಂಜಪ್ಪ ಮರೋಳ, ಎನ್.ಟಿ ಮಂಜುನಾಥ, ಮಂಜಪ್ಪ ಹರಪನಹಳ್ಳಿ, ಅಕ್ಕಮ್ಮ ಮರೋಳ, ಮಂಜಪ್ಪ ದೊಡ್ಡ ಕರಿಯಮ್ಮನವರ, ಮಹೇಶಣ್ಣಾ ಹರಿಜನ, ಹನುಮಂತ ಹೌಸಿ,ವಿಭೂತಿ ಶೆಟ್ಟಿ, ಹನುಮಂತಪ್ಪ ಸಿ.ಡಿ,ಅಡೆವೆಪ್ಪ ಬಿದರಕೊಪ್ಪ,ಮಾಲತೇಶ ಕರ್ಜಗಿ,ಮಲ್ಲೇಶ ಕರ್ಜಗಿ, ರೈತ ಮುಖಂಡ ಹನುಮಂತಪ್ಪ ಕಬ್ಬಾರ ಸೇರಿದಂತೆ ಅನೇಕ ಮಹಿಳೆಯರು, ಮುಖಂಡರು ಹಾಜರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಹಜ್ ಯಾತ್ರಿಗಳಿಗೆ ಹಾವೇರಿಯಲ್ಲಿಯೇ ಲಸಿಕೆ ಹಾಕಿಸುವಂತೆ ಅಂಜುಮನ್ ಸಂಸ್ಥೆಯ ಸದಸ್ಯರ ಒತ್ತಾಯ

"ಹಾವೇರಿ ಜಿಲ್ಲೆಯಿಂದ 2026ರ ಸಾಲಿನ 169 ಹಜ್ ಯಾತ್ರಿಗಳು ತೆರಳುತ್ತಿದ್ದಾರೆ. ಯಾತ್ರಿಗಳಿಗೆ...

ಹಾವೇರಿ | ಹಿರಿಯ ನಾಗರಿಕರ ಆರೋಗ್ಯ ತಪಾಸಣಾ ಶಿಬಿರ

ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಆಲದಕಟ್ಟಿ, ಹನುಮಾಪುರ, ದೇವರ ಹೊಸಪೇಟ್, ಹಾಗೂ...

ಹಾವೇರಿ | ನ್ಯಾಯ ಸಾಧಿಸುವಲ್ಲಿ ಮಹಿಳೆಯರ ಪಾತ್ರ ಮುಖ್ಯ: ನ್ಯಾಯಾಧೀಶ ಬಿರಾದಾರ ದೇವಿಂದ್ರಪ್ಪಾ ಎನ್.

"ನ್ಯಾಯ ಸಾಧಿಸುವಲ್ಲಿ ಮಹಿಳೆಯರ ಪಾತ್ರ ಅತೀ ಮುಖ್ಯವಾಗಿದೆ. ಮಹಿಳಾ ನ್ಯಾಯಾಧೀಶರು ಸಮಾಜದಲ್ಲಿ...

ಹಾವೇರಿ | ಒಳ ಮೀಸಲಾತಿ ಇಲ್ಲದೇ ಉದ್ಯೋಗ ಭರ್ತಿ ಖಂಡಿಸಿ, ಮಾರ್ಚ್ 12ಕ್ಕೆ ಬೆಂಗಳೂರಲ್ಲಿ ಪ್ರತಿಭಟನೆ

"ಒಳ ಮೀಸಲಾತಿ ಇಲ್ಲದೇ ಉದ್ಯೋಗ ಭರ್ತಿ ಮಾಡುವ ಕಾಂಗ್ರೆಸ್ ಸರ್ಕಾರದ ಮಹಾದ್ರೋಹವನ್ನು...