ಅಲೆಮಾರಿ ಕುಲಕಸಬುದಾರರ ಮಕ್ಕಳಿಗೆ ನೋಟ್ ಬುಕ್, ಪೆನ್ನು ಮತ್ತು ಹಣ್ಣುಗಳನ್ನು ನೀಡುವುದರ ಮೂಲಕ ಮೂಲಕ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಿದರು.
ಹಾವೇರಿ ಪಟ್ಟಣದ ಜಿ.ಎಚ್ ಕಾಲೇಜಿನ ಎದುರು ಠಿಕಾಣೆ ಹೂಡಿರುವ ಅಲೆಮಾರಿ ಕಸುಬಾರರ ಮಕ್ಕಳ ಜೊತೆಗೆ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ಧಾರವಾಡ ಜಿಲ್ಲಾ ಘಟಕ, ಹಾವೇರಿ ಜಿಲ್ಲಾ ಹಾಗೂ ತಾಲ್ಲೂಕಾ ಘಟಕದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಣೆ ಮಾಡಲಾಯಿತು.
ವಲಸೆ ಬಂದಂತಹ ಅಲೆಮಾರಿ ಕುಲಕಸುಬುದಾರರ ಮಕ್ಕಳಿಗೆ ನೋಟ್ ಪುಸ್ತಕ, ಪೆನ್ನು ಮತ್ತು ಹಣ್ಣುಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಡಾ. ಗೀತಾ ಸುತ್ತಕೋಟಿ ತಾಲ್ಲೂಕಾ ಅಧ್ಯಕ್ಷರಾದ ಅಕ್ಕಮಹಾದೇವಿ ನೀರಲಗಿ, ತಾಲ್ಲೂಕಾ ಕೋಶಾಧ್ಯಕ್ಷರಾದ ದಾಕ್ಷಾಯಿಣಿ ವಾಲ್ಮಿಕಿ ಹಾಗೂ ಪದಾಧಿಕಾರಿಗಳಾದ ಪದ್ಮಾವತಿ ಕಲ್ಲೂ, ಸದಸ್ಯರಾದ ರೂಪಾ ಸಜ್ಜನ, ಸ್ವೇತಾ ಹಾವನೂರ, ಬಿಷ್ಟಮ್ಮ ಹಿರೇಮಠ, ಆಲದಮ್ಮ, ಇಪ್ಪಿಕೊಪ್ಪ ಇತರರು ಹಾಜರಿದ್ದರು.





