ಹಾವೇರಿ | ಅಡುಗೆ ಅನಿಲದ ಬಿಕ್ಕಟ್ಟಿಗೆ, ಸೌರ ಉಷ್ಣಶಕ್ತಿಯೇ ಪರಿಹಾರ: ಕುಲಪತಿ ಡಾ. ಸುರೇಶ ಜಂಗಮಶೆಟ್ಟಿ

Date:

“ಪ್ರಸ್ತುತ ಎದುರಾಗಿರುವ ಅಡುಗೆ ಇಂಧನ ಬಿಕ್ಕಟ್ಟಿಗೆ ಸೌರ ಉಷ್ಣ ಶಕ್ತಿ ಸಂಗ್ರಹ ಒಲೆಗಳು ಅತ್ಯಂತ ಉಪಯುಕ್ತವೂ ಬದಲಾವಣೆಯನ್ನು ತರಬಲ್ಲ ಸಾಧನಗಳಾಗಿವೆ” ಎಂದು ಹಾವೇರಿ ವಿಶ್ವ ವಿದ್ಯಾಲಯದ ಕುಲಪತಿ ಡಾ. ಸುರೇಶ ಜಂಗಮಶೆಟ್ಟಿ ಅಭಿಪ್ರಾಯ ಪಡುತ್ತಾರೆ.

ಹಾವೇರಿ ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಭವನದಲ್ಲಿ ದಿ. ಜಿ.ಎಸ್. ಜಾಬೀನ ಅವರ ಶತಮಾನೋತ್ಸವ ಸಂದರ್ಭದಲ್ಲಿ ಅವರು ಮಾತನಾಡಿದರು.

“ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧಗಳು, ತೈಲ ಮಾರುಕಟ್ಟೆಯನ್ನು ಅಸ್ಥವ್ಯಸ್ಥಗೊಳಿಸುತ್ತಿವೆ. ಇಂದಿನ ಸಂಕಷ್ಟದ ಕಾಲದಲ್ಲಿ ಭಾರತವು ತನ್ನ ಶೇಕಡಾ ೯೦ರಷ್ಟು ಎಲ.ಪಿ.ಜಿ ಅಡುಗೆ ಅನಿಲವನ್ನು ತನ್ನ ಅಗತ್ಯಕ್ಕಾಗಿ ಆಮದಿನ ಮೇಲೆ ಅವಲಂಬಿತವಾಗಿದೆ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬೆಲೆ ಏರಿಕೆ ಮತ್ತು ಇಂಧನ ಕೊರೆತೆಯ ಬಿಸಿ ಮೊದಲು ತಟ್ಟುತ್ತಿರುವುದು ಗ್ರಾಮೀಣ ಭಾರತದ ಕುಟುಂಬಗಳಿಗೆ. ಈ ಸಂದರ್ಭದಲ್ಲ ನಾವು ಆಕಾಶದತ್ತ ನೋಡಬೇಕಾಗಿದೆ” ಎಂದರು.

“ಸುಮಾರು ಮೂರು ಸಾವಿರ ಗಂಟೆಗಳ ಕಾಲ ಸುರಿಯುವ ಸೂರ್ಯನ ಬೆಳಕು ಮಾತ್ರ ಇಂಧನ ಸ್ವಾತಂತ್ರ್ಯ ನೀಡಬಲ್ಲದು. ಗ್ರಾಮೀಣ ಭಾರತಕ್ಕೆ ಸೌರಉಷ್ಣ ಸಾಧನಗಳು ಕೇವಲ ಪರ್ಯಾಯತ ಮಾತ್ರವಲ್ಲ, ಆರ್ಥಿಕ ಅನಿವಾರ್ಯತೆಯೂ ಆಗಿದೆ” ಎಂದು ಡಾ. ಜಂಗಮಶೆಟ್ಟಿ ಅಭಿಪ್ರಾಯ ಪಡುತ್ತಾರೆ. 

“ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಸೌರ ಒಲೆಗಳು ಸಾಧನಗಳಾಗಿವೆ. ಪರಿಸರ ಸ್ನೇಹಿ ಮತ್ತು ಆರ್ಥಿಕ ಲಾಭದಾಯಕವಾಗಿದ್ದು, ಸೂರ್ಯ ಶಾಖವನ್ನು ಬಳಸಿಕೊಳ್ಳುವ ಕಲೆ ನಾವೆಲ್ಲ ಬೆಳಸಿಕೊಳ್ಳಬೇಕು. ಪಳೆಯುಳಿಕೆ ಇಂಧನಗಳ ಮೂಲವಾಗಿ ಬಳಸಿಕೊಳ್ಳಬೇಕು. ಇಂಗಾಲದ ಹೊರ ಸೂಸುವಿಕೆಯನ್ನೂ ಕಡಿಮೆ ಮಾಡಬಹುದು. ಇದಕ್ಕಾಗಿ ಬಾಕ್ಸ್ ಮಾದರಿಯ ಸೌರ ಒಲೆ ಅತ್ಯಂತ ಸರಳ ಮತ್ತು ನಂಬಿಗಸ್ಥ ಸಾಧನ. ಇದು ಅಕ್ಕಿ, ಬೇಳೆ ಮತ್ತು ತರಕಾರಿಗಳನ್ನು ನಿಧಾನವಾಗಿ ಬೇಯಿಸಲು ಸೂಕ್ತವಾಗಿದೆ” ಎಂದು ಹೇಳಿದರು.

ಪಿ.ಎಮ್ ಸೂಘರ್ ಯೋಜನೆ ಮತ್ತು ರಾಷ್ಟ್ರೀಯ ಜೈವಿಕ ಇಂದನ ಕಾರ್ಯಕ್ರಮದಲ್ಲಿ ಸರಕಾರವು ಸೌರ ಅಳವಡಿಕೆಗೆ ಹೆಚ್ಚಿನ ಸಬ್ಸಿಡಿ ನೀಡುತ್ತಿದ್ದು, ಶಾಲೆಗಳಲ್ಲಿ ಬಿಸಿ ಊಟ ಮತ್ತು ಮಠ ಮಂದಿರಗಳ ಸಮುದಾಯ ಅಡುಗೆ ಮಂದಿರಗಳಲ್ಲಿ ಈ ಸೌರ ಉಷ್ಣ ವ್ಯವಸ್ಥೆ ಯಶಸ್ವಿಯಾಗಿದೆ ಎಂದು ಡಾ. ಸುರೇಶ ಜಂಗಮಶೆಟ್ಟಿ ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...