ಅಧಿವೇಶನ | ಕಲಾಪಕ್ಕೆ ಕೊಬ್ಬರಿ ತಂದ ಎಚ್‌ ಡಿ ರೇವಣ್ಣ, ನಗೆಗಡಲಲ್ಲಿ ತೇಲಿದ ಸದನ

Date:

  • ಏನ್ರೀ ರೇವಣ್ಣ, ನಿಂಬೆ ಹಣ್ಣು ಹಿಡಿಯುವ ಕೈಯಲ್ಲಿ ಕೊಬ್ಬರಿ ಯಾಕೆ?: ಸಿಎಂ
  • ಎಚ್‌ ಡಿ ರೇವಣ್ಣ ಅವರಿಗಾಗಿ ಆದ್ರೂ ಕೊಬ್ಬರಿ ಬೆಲೆ ಏರಿಸಿ: ಬೊಮ್ಮಾಯಿ

ಜೆಡಿಎಸ್‌ ಸದಸ್ಯರು ಕೊಬ್ಬರಿ ಬೆಳೆಗಾರರ ವಿಚಾರವಾಗಿ ಮಂಡಿಸಿದ ನಿಲುವಳಿ ಸೂಚನೆ ಮಂಡಿಸಿ ಎಂಟು ದಿನ ಕಳೆದಿದ್ದು, ಈವರೆಗೂ ಚರ್ಚೆಗೆ ಕೈಗೆತ್ತಿಕೊಳ್ಳದ ಹಿನ್ನೆಲೆಯಲ್ಲಿ ಎಚ್‌ ಡಿ ರೇವಣ್ಣ ಅವರು ಸದನಕ್ಕೆ ಕೊಬ್ಬರಿ ತಂದು ಪ್ರದರ್ಶಿಸಿ ಚರ್ಚೆಯ ಬಗ್ಗೆ ಗಮನ ಸೆಳೆದರು.

16ನೇ ವಿಧಾನಸಭೆಯ ಮೊದಲ ಅಧಿವೇಶನ ಆರಂಭವಾದ ಮರುದಿನವೇ ಜೆಡಿಎಸ್‌ ಸದಸ್ಯರು ಕೊಬ್ಬರಿ ಬೆಳೆಗಾರರ ವಿಚಾರವಾಗಿ ನಿಲುವಳಿ ಸೂಚನೆ ಮಂಡಿಸಿದ್ದರು. ಸಭಾಧ್ಯಕ್ಷ ಯು ಟಿ ಖಾದರ್‌ ಅವರು ಜೆಡಿಎಸ್‌ ನಿಲುವಳಿಯನ್ನು ನಿಯಮ 69ಕ್ಕೆ ಕನ್ವರ್ಟ್‌ ಮಾಡಿ ಚರ್ಚೆಗೆ ಎತ್ತಿಕೊಳ್ಳುವ ಭರವಸೆ ನೀಡಿದ್ದರು.

ಪ್ರತಿ ದಿನ ಈ ವಿಚಾರವಾಗಿ ಧ್ವನಿ ಎತ್ತುತ್ತಿದ್ದ ಎಚ್‌ ಡಿ ರೇವಣ್ಣ ಅವರು ಗುರುವಾರದ ಮಧ್ಯಾಹ್ನದ ಕಲಾಪ ಆರಂಭವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡುತ್ತಿದ್ದಂತೆ ಎದ್ದು ನಿಂತು ಕೊಬ್ಬರಿ ಪ್ರದರ್ಶಿಸಿ ನಮಗೆ ಚರ್ಚೆ ಮಾಡಲು ಅವಕಾಶ ನೀಡಿ ಎಂದು ಸಭಾಧ್ಯಕ್ಷರನ್ನು ಕೋರಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, “ಏನ್ರೀ ರೇವಣ್ಣ, ನಿಂಬೆ ಹಣ್ಣು ಹಿಡಿಯುವ ಕೈಯಲ್ಲಿ ಕೊಬ್ಬರಿ ಯಾಕ್‌ ಹಿಡ್ಕೊಂಡಿದೀಯ” ಎಂದು ತಮಾಷೆ ಮಾಡಿದರು.

ಈ ಸುದ್ದಿ ಓದಿದ್ದೀರಾ? 60 ದಿನವಾದರೂ ವಿಪಕ್ಷ ನಾಯಕನ ಆಯ್ಕೆ ಇಲ್ಲ: ಬಸವಳಿದ ರಾಜ್ಯ ಬಿಜೆಪಿ; ಆಸ್ಥೆ ತೋರದ ಮೋದಿ-ಶಾ

ಸಭಾಧ್ಯಕ್ಷರು ಪ್ರತಿಕ್ರಿಯಿಸಿ, “ಹೇಗೂ ಸದನಕ್ಕೆ ಕೊಬ್ಬರಿ ತಂದಿದ್ದೀರಿ. ನನಗೆ ಕೊಡಿ, ಮನೆಗೆ ಒಯ್ಯುವೆ” ಎಂದರು. ಸದನ ನಗೆಗಡಲಲ್ಲಿ ತೇಲಿತು. ರೇವಣ್ಣ ಅವರು ಮಾತ್ರ ಗಂಭೀರವಾಗಿ, “ನನ್ನ ರೈತರ ಸಮಸ್ಯೆಗಳ ಬಗ್ಗೆ ನಾನು ಇಲ್ಲಿ ಮಾತನಾಡಬೇಕು. ನಿಯಮ 69ಗೆ ಕನ್ವರ್ಟ್‌ ಮಾಡಿದ್ದೀರಿ. ಇಂದಾದರೂ ಅವಕಾಶ ಮಾಡಿ ಕೊಡಿ” ಎಂದು ಸಭಾಧ್ಯಕ್ಷರನ್ನು ಕೋರಿದರು.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಧ್ಯ ಪ್ರವೇಶಿಸಿ, “ಎಚ್‌ ಡಿ ರೇವಣ್ಣ ಅವರಿಗಾಗಿ ಆದ್ರೂ ಕೊಬ್ಬರಿ ಬೆಲೆ ಏರಿಸಿ” ಎಂದು ಒತ್ತಾಯಿಸಿದರು. ಆರ್‌ ಅಶೋಕ ಮಧ್ಯ ಪ್ರವೇಶಿಸಿ, “ಎಚ್‌ ಡಿ ರೇವಣ್ಣ ಅವರು ಎಂದೂ ಸಿದ್ದರಾಮಯ್ಯ ವಿರುದ್ಧ ಮಾತನಾಡಿಲ್ಲ” ಎಂದರು.

ರೇವಣ್ಣ ಉತ್ತರಿಸಿ, “ನೋಡ್ರಿ ಅಶೋಕ್‌, ನಾನು ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಅವರೇನು ಅಂತ ನನಗೆ ಗೊತ್ತು” ಎಂದರು. ಸಿಎಂ ಸಿದ್ದರಾಮಯ್ಯ ಉತ್ತರಿಸಿ, “ರೇವಣ್ಣ ಅವರ ಬಗ್ಗೆ ವಿಶೇಷ ಪ್ರೀತಿ ಇದೆ. ನನ್ನ ಒಳ್ಳೆಯ ಸ್ನೇಹಿತರು ಅವರು” ಎಂದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಟ್ರಾಕ್ಟರ್ ಗೆ ಬೈಕ್ ಡಿಕ್ಕಿ; ಇಬ್ಬರು ಯುವಕರು ಸಾವು

ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು...

ಗದಗ | ದಲಿತ ಯುವಕರ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪ ಖಂಡಿಸಿ ದಲಿತ ಮುಖಂಡರ ಪ್ರತಿಭಟನೆ 

ದಲಿತ ಸಮುದಾಯದ ಜಕ್ಕಲಿ ಗ್ರಾಮದ ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ...

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...