ಮೈಸೂರು ಜಿಲ್ಲೆ, ಹೆಗ್ಗಡದೇವನಕೋಟೆಯ ಮಿನಿ ವಿಧಾನ ಸೌಧದ ಸಭಾಂಗಣದಲ್ಲಿ ತಹಶೀಲ್ದಾರ್ ರವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಪಲ್ಸ್ ಪೋಲಿಯೋ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಯಿತು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಟಿ. ರವಿಕುಮಾರ್ ಮಾತನಾಡಿ, ” ದಿನಾಂಕ-21-12-2025 ರಿಂದ 24-12-2025 ರವರೆಗೆ ನಡೆಯುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಬಗ್ಗೆ ತಿಳಿಸಿ, ತಾಲ್ಲೂಕಿನಲ್ಲಿ ಒಟ್ಟು ಜನಸಂಖ್ಯೆ 2,83,459 0-5 ವರ್ಷದೊಳಗಿನ ಒಟ್ಟು ಮಕ್ಕಳ ಸಂಖ್ಯೆ18,669. ಒಟ್ಟು ಪಲ್ಸ್ ಪೋಲಿಯೋ ಬೂತ್ ಗಳ ಸಂಖ್ಯೆ-198, ಟ್ರಾನ್ಸ್ಲೇಷನ್ ಬೂತ್ ಗಳ ಸಂಖ್ಯೆ -03, ಮೊಬೈಲ್ ಟೀಮ್-02 ನಿಯೋಜನೆ ಮಾಡುವ ಒಟ್ಟು ಸಿಬ್ಬಂದಿಗಳ ಸಂಖ್ಯೆ 808. ಕಾರ್ಯಕ್ರಮವು ನಾಲ್ಕು ದಿನ ನಡೆಯುತ್ತದೆ. ಆದುದರಿಂದ, ಇತರೆ ಇಲಾಖೆ ಅಧಿಕಾರಿಗಳು, ಎಲ್ಲಾ ಸಂಘ-ಸಂಸ್ಥೆಯವರು, ಎನ್ ಜಿ ಓ ಸಂಸ್ಥೆರವರು ಸಹಕಾರ ನೀಡಬೇಕು ಮತ್ತು ಸಾರ್ವಜನಿಕರು ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕಿಸಿ” ಎಂದು ಕರೆ ನೀಡಿದರು.
ತಹಶೀಲ್ದಾರ್ ಶ್ರೀನಿವಾಸ್ ಮಾತನಾಡಿ, ಇದು ಒಂದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು ಪಲ್ಸ್ ಪೋಲಿಯೋ ಮುಕ್ತ ತಾಲ್ಲೂಕು ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ. ಆದುದರಿಂದ, ಎಲ್ಲರ ಸಹಕಾರ ಮುಖ್ಯ. ಎಲ್ಲರೂ ಈ ಕಾರ್ಯಕ್ರಮಕ್ಕೆ ಕೈಜೋಡಿಸಿ ಎಂದು ತಿಳಿಸಿದರು.
ಈ ವಿಶೇಷ ಸುದ್ದಿ ಓದಿದ್ದೀರಾ? ಒಳಮೀಸಲಾತಿ ಜಾರಿಗೆ ಸಿದ್ದರಾಮನಹುಂಡಿ ಜಾಥಾ: ಸಾಮಾಜಿಕ ನ್ಯಾಯದ ಹೋರಾಟ ಹತ್ತಿಕ್ಕಿದ ಸರ್ಕಾರ
ಸಭೆಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಇದ್ದರು.





