ಗುಬ್ಬಿವಾಣಿ ಟ್ರಸ್ಟ್ ಆಯೋಜಿಸುವ ʼಅವಳ ಹೆಜ್ಜೆʼ ಕಿರುಚಿತ್ರೋತ್ಸವ ಸ್ಪರ್ಧೆಗೆ ಮಹಿಳೆಯರು ನಿರ್ದೇಶಿಸಿರುವ ಕಿರುಚಿತ್ರಗಳನ್ನು ಆಹ್ವಾನಿಸಲಾಗಿದೆ.
ಈ ವರ್ಷ “ಅವಳ ಹೆಜ್ಜೆ ಕಿರುಚಿತ್ರೋತ್ಸವ”ದ ಮೊದಲ ಆವೃತ್ತಿ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, 2026ರ ಕಿರುಚಿತ್ರೋತ್ಸವಕ್ಕೆ ತಯಾರಿಯಾಗಿ ಮಹಿಳಾ ಸಬಲೀಕರಣಕ್ಕೆ ಸಂಬಂಧಪಟ್ಟ ಕಥಾವಸ್ತುವಿದ್ದು, ಮಹಿಳೆಯರು ನಿರ್ದೇಶಿಸಿದ ಕನ್ನಡ ಕಿರುಚಿತ್ರಗಳ ಸ್ಪರ್ಧೆ ಯನ್ನು ಮತ್ತೊಮ್ಮೆ ಏರ್ಪಡಿಸಲಾಗಿದೆ.
ಅತ್ಯುತ್ತಮ ಕಿರುಚಿತ್ರಕ್ಕೆ “ಅವಳ ಹೆಜ್ಜೆ ಪ್ರಶಸ್ತಿ”ಯಾಗಿ ₹1,00,000 (ಒಂದು ಲಕ್ಷ) ನಗದು ಬಹುಮಾನ ಮತ್ತು ಹಲವಾರು ವಿಶೇಷ ವರ್ಗಗಳಲ್ಲಿ ತಲಾ ₹10,000 ನಗದು ಬಹುಮಾನವಿರುತ್ತದೆ. ಮಹಿಳೆಯರ ಅನುಭವ, ದೃಷ್ಟಿಕೋನಗಳಿಗೆ ವೇದಿಕೆ ನೀಡುವುದು ಮತ್ತು ಕನ್ನಡ ನಿರ್ದೇಶಕಿಯರನ್ನು ಪ್ರೋತ್ಸಾಹಿಸುವುದು ಈ ಚಿತ್ರೋತ್ಸವದ ಮುಖ್ಯ ಉದ್ದೇಶ.

ಸ್ಪರ್ಧೆಗೆ 2025ರ ನವಂಬರ್ 30 ರೊಳಗೆ ಅರ್ಜಿ ಸಲ್ಲಿಸಿದರೆ ಪ್ರವೇಶ ಶುಲ್ಕವಿರುವುದಿಲ್ಲ ಎಂದು ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.





