2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕುಮಟಾ-ಹೊನ್ನಾವರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಶಾಸಕರಾಗಿ ಆಯ್ಕೆಯಾಗಿದ್ದು, ಅವರ ಗೆಲುವಿಗೆ ಕರ್ನಾಟಕ ಹೈಕೋರ್ಟ್ ಅಧಿಕೃತ ಸಮ್ಮತಿ ನೀಡಿದೆ. ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಹಿನ್ನೆಲೆ
2023ರ ಚುನಾವಣೆಯಲ್ಲಿ ದಿನಕರ ಶೆಟ್ಟಿ ಅವರು 59,966 ಮತಗಳನ್ನು ಗಳಿಸಿ, ಜೆಡಿಎಸ್‌ನ ಸೂರಜ್ ನಾಯ್ಕ ಸೋನಿ(59,293 ಮತ) ವಿರುದ್ಧ ಕೇವಲ 673 ಮತಗಳ ಅಂತರದಿಂದ ಗೆದ್ದಿದ್ದರು. ಮತ ಎಣಿಕೆಯ ಆರಂಭದಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ನಡುವಿನ ಸ್ಪರ್ಧೆ ತೀವ್ರವಾಗಿತ್ತು. ನಿರ್ಣಾಯಕವಾದ 14 ಮತ್ತು 15ನೇ ಸುತ್ತುಗಳ ಎಣಿಕೆಯಲ್ಲಿ ಜೆಡಿಎಸ್ ಅಲ್ಪ ಮುನ್ನಡೆ ಪಡೆದಿತ್ತು. ಈ ಸಮಯದಲ್ಲಿ ಎರಡು ಎವಿಎಂ ಯಂತ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ವಿವಿಪ್ಯಾಟ್ ಸ್ಲಿಪ್‌ಗಳ ಮರು ಎಣಿಕೆ ನಡೆಯಿತು. ಫಲಿತಾಂಶ ಘೋಷಣೆಯಲ್ಲಿ ಆದ ಈ ವಿಳಂಬವನ್ನು ಅಕ್ರಮವೆಂದು ಆರೋಪಿಸಿ ಸೋನಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್ ತೀರ್ಪು
“ನ್ಯಾಯಾಲಯವು ಈ ಕುರಿತು ತೀರ್ಪು ನೀಡುವಾಗ, ಮತ ಎಣಿಕೆ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮಗಳಿಲ್ಲವೆಂದು ಸ್ಪಷ್ಟಪಡಿಸಿದೆ. ಅದರೊಂದಿಗೆ ದಿನಕರ ಶೆಟ್ಟಿಯವರ ಗೆಲುವಿಗೆ ಅಧಿಕೃತ ಮಾನ್ಯತೆ ನೀಡಲಾಗಿದೆ” ಎಂದು ದಿನಕರ ಶೆಟ್ಟಿಯವರು ಪ್ರತಿಕ್ರಿಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಆಲಮೇಲ | ಭೀಮಾನದಿ ತೀರದಲ್ಲಿ ಪ್ರವಾಹ ಹೆಚ್ಚಳ; ಮೂರು ಗ್ರಾಮಗಳಲ್ಲಿ ಕಾಳಜಿ ಕೇಂದ್ರ ಆರಂಭ
ʼಕ್ಷೇತ್ರದ ಜನರು ಸದಾ ನನ್ನೊಂದಿಗಿದ್ದಾರೆ. ನ್ಯಾಯಾಲಯವೇ ಸತ್ಯವನ್ನು ಹೊರಹಾಕಿದೆ. ಪ್ರತಿಸ್ಪರ್ಧಿಗಳು ಜನರ ಮನದಲ್ಲಿ ಗೊಂದಲ ಸೃಷ್ಟಿಸಿದ್ದರು. ಆದರೆ ಇದೀಗ ಸತ್ಯ ಗೆದ್ದಿದೆ. ನನ್ನ ಮೇಲೆ ಜನರು ತೋರಿಸಿರುವ ವಿಶ್ವಾಸಕ್ಕೆ ನಾನು ಸದಾ ಋಣಿʼ ಎಂದಿದ್ದ ರಾಜಕೀಯ ಪಯಣಕ್ಕೆ ಈ ತೀರ್ಪಿನೊಂದಿಗೆ ಕ್ಷೇತ್ರದಲ್ಲಿ ಕಳೆದ ಎರಡೂವರೆ ವರ್ಷಗಳಿಂದಿದ್ದ ಗೊಂದಲಗಳಿಗೆ ತೆರೆ ಬಿದ್ದಂತಾಯಿತು. ದಿನಕರ ಶೆಟ್ಟಿಯವರು ಹಿಂದೆ ಎರಡು ಬಾರಿ ಬಿಜೆಪಿಯಿಂದ ಮತ್ತು ಒಮ್ಮೆ ಜೆಡಿಎಸ್‌ನಿಂದ ಶಾಸಕನಾಗಿ ಆಯ್ಕೆಯಾಗಿ ಈಗಾಗಲೇ ಮೂರು ಬಾರಿ ಕುಮಟಾ-ಹೊನ್ನಾವರ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.
ಹಿಂದೆ ಜೆಡಿಎಸ್ ಅಭ್ಯರ್ಥಿಯಾಗಿದ್ದಾಗ ಕೇವಲ 20 ಮತಗಳ ಅಂತರದಿಂದ ಅವರು ಗೆದ್ದಿದ್ದು, ಆಗಲೂ ಅವರ ಜಯವನ್ನು ಕೋರ್ಟ್ ಸಮರ್ಥಿಸಿತ್ತು ಎಂಬುದು ಗಮನಾರ್ಹ.





