ಸಮಾನತೆ ಮತ್ತು ಸಹಭಾಗಿತ್ವಕ್ಕೆ ಅಗತ್ಯವಾದ ಸಾಮರಸ್ಯದ ವಾತಾವರಣದೊಂದಿಗೆ ದೇಶದ ನೈಸರ್ಗಿಕ ಹಾಗೂ ಸಾರ್ವಜನಿಕ ಸಂಪತ್ತನ್ನು ಕಾಪಾಡುವ ಮೂಲಕ ಸಂವಿಧಾನವನ್ನು ನಿತ್ಯದ ಆಚರಣೆಯಾಗಿ ಪಾಲಿಸುವುದು ಅತ್ಯವಶ್ಯಕ ಎಂದು ಪ್ರಾಂಶುಪಾಲ ಡಾ. ಜಯಪ್ರಕಾಶ್ ಶೆಟ್ಟಿ ಹೆಚ್ ಹೇಳಿದರು.
ಅವರು ಇಂದು ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಸಂವಿಧಾನದ ಪ್ರತಿಕೃತಿಯನ್ನು ಆರಾಧಿಸುವ ತೋರಿಕೆಗೆ ಮೀರಿದಂತೆ ಸಂವಿಧಾನದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವನ್ನು ಒತ್ತಿಹೇಳಿದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಅಪರ್ಣ ಕೆ.ಯು. ಪ್ರಸ್ತಾವನೆ ಮಾಡಿದರು. ಎನ್.ಎಸ್.ಎಸ್ ಯೋಜನಾಧಿಕಾರಿ ನಂದೀಶ್ ಕುಮಾರ್ ಕೆ.ಸಿ. ಸಂವಿಧಾನ ಪೀಠಿಕೆಯನ್ನು ಬೋಧಿಸಿದರು.
ಕಾರ್ಯಕ್ರಮದಲ್ಲಿ ಐಕ್ಯುಎಸಿ ಸಂಚಾಲಕ ಡಾ. ಲಿತಿನ್ ಬಿ.ಎಂ., ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಅಧ್ಯಕ್ಷ ಈರಬಸು, ಉಪಾಧ್ಯಕ್ಷೆ ವೈಷ್ಣವಿ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅಭೀಷ್ ಸ್ವಾಗತಿಸಿ, ಅಕ್ಷಯ ವಂದನೆ ಸಲ್ಲಿಸಿದರು. ಕಾರ್ಯಕ್ರಮವನ್ನು ದೀಕ್ಷಾ ನಿರೂಪಿಸಿದರು.





