ಉಡುಪಿ | ಸದಾ ಚಲನೆಯಲ್ಲಿರಿ ಎಂದೂ ನಿಲ್ಲದಿರಿ : ಶಿಕ್ಷಣ ತಜ್ಞ ಎನ್‌.ಶೆಟ್ಟಿ

Date:

ಬದುಕಿನ ಸವಾಲುಗಳನ್ನು ಅವಕಾಶಗಳಾಗಿ ಸ್ವಾಗತಿಸುತ್ತಾ ಉತ್ಸಾಹದ ಜೊತೆಗೆ ತಿಳುವಳಿಕೆಯನ್ನೂ ವರ್ಧಿಸಿಕೊಳ್ಳುವ ಮೂಲಕ ಸದಾ ಚಲನೆಯಲ್ಲಿರಿ ಎಂದೂ ನಿಲ್ಲದಿರಿ ಎಂದು ಶಿಕ್ಷಣ ತಜ್ಞ ಎನ್‌.ಶೆಟ್ಟಿ. ಹೇಳಿದರು. ಅವರು ಹಿರಿಯಡಕ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಐಕ್ಯುಎಸಿ ಘಟಕ ಮತ್ತು ವಾಣಿಜ್ಯ ವಿಭಾಗಗಳು ಆಯೋಜಿಸಿದ ʼವಾಣಿಜ್ಯ ಸಂಘʼ ಹಾಗೂ ಕಾಮರ್ಸ್‌ ಫೆಸ್ಟ್‌ ಭಾಗವಾದ ʼಅನ್ವೇಷಣಮ್‌ʼ ಸ್ಪರ್ಧಾ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಾಂಶುಪಾಲ ಡಾ. ಜಯಪ್ರಕಾಶ್‌ ಶೆಟ್ಟಿ ಹೆಚ್‌ ಅಧ್ಯಕ್ಷತೆಯನ್ನು ವಹಿಸಿದ್ದ ಉದ್ಘಾಟನಾ ಸಮಾರಂಭದಲ್ಲಿ, ಮಾಹೆಯ ಸ್ಕೂಲ್‌ ಆಫ್‌ ಕಾಮರ್ಸ್‌ ಮತ್ತು ಎಕಾನಾಮಿಕ್ಸ್‌ನ ಸಹಾಯಕ ಪ್ರಾಧ್ಯಾಪಕ ಡಾ. ಸಂಕೇತ್‌ ಲೇಡ್ವಾನಿ ಹಾಗೂ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯದ ಸಂಶೋಧನಾರ್ತಿಯಾದ ಕು. ಪೂರ್ಣಿಮಾ ಎಸ್‌. ಮುಖ್ಯ ಅತಿಥಿಗಳಾಗಿ ಆಗಮಿಸಿದರು. ಈ ಸಮಾರಂಭದಲ್ಲಿ ಐಕ್ಯುಎಸಿ ಸಂಚಾಲಕ ಡಾ. ಲಿತಿನ್‌ ಬಿ ಎಂ, ವಾಣಿಜ್ಯಕೋಶದ ಅಧ್ಯಾಪಕ ಸಲಹೆಗಾರ ಶ್ರೀ ನಂದೀಶ್‌ಕುಮಾರ್‌ ಕೆ ಸಿ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಸಂಚಾಲಕಿ ಡಾ. ಸೌಮ್ಯಲತಾ ಪಿ. ಉಪಸ್ಥಿತರಿದ್ದರು.

ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಶ್ರೀಮತಿ ನಿಶ್ಚಿತ ಎಸ್‌ ಹೋಬಳಿದಾರ್‌ ನಿರೂಪಿಸಿದ ಈ ಕಾರ್ಯಕ್ರಮವನ್ನು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ರೀಮತಿ ಅಪರ್ಣ ಕೆ ಯು ವಂದಿಸಿದರು.
ಸಮಾರೋಪ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಸಿದ್ಧನಕಟ್ಟೆಯ ಸಹಾಯಕ ಪ್ರಾಧ್ಯಾಪಕ ಡಾ. ಅಭಿನಂದನ್‌ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀ ವಸಂತ ಶೆಟ್ಟಿ ಚಿನ್ನಿಬೆಟ್ಟು ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು. ವಿದ್ಯಾರ್ಥಿನಿ ಕು. ಪಲ್ಲವಿ ಸ್ವಾಗತಿಸಿದ ಈ ಕಾರ್ಯಕ್ರಮವನ್ನು ಶ್ರೀ ವಿಘ್ನೇಶ್‌ ವಂದಿಸಿದರು. ಸರ್ಕಾರಿ ಪದವಿಪೂರ್ವ ಕಾಲೇಜು, ಹಿರಿಯಡಕ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರೆ, ಸರ್ಕಾರಿ ಪದವಿಪೂರ್ವ ಕಾಲೇಜು, ಬೈಲೂರು ದ್ವಿತೀಯ ಸ್ಥಾನ ಪಡೆದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...