ಹೊಳೆನರಸೀಪುರ | ದೇವೇಗೌಡರದ್ದು ಕುಟುಂಬ ರಾಜಕಾರಣ ಅನ್ನದೆ ಮತ್ತೇನು ಹೇಳಬೇಕು: ಈಶ್ವರಪ್ಪ

Date:

  • ʼಮೋದಿ ಬಗ್ಗೆ ಖರ್ಗೆ ಹೇಳಿದ್ದು ಸರಿ ಅಂದರೆ ಕಾಂಗ್ರೆಸ್‌ಗೆ ಓಟು ಕೊಡಿʼ
  • ʼರಾಮಸ್ವಾಮಿ ಬಿಜೆಪಿಗೆ ಬಂದಿದ್ದು ನಮ್ಮೆಲ್ಲರಿಗೂ ಭೀಮ ಬಲ ಬಂದಂತಾಗಿದೆʼ

ದೇವೇಗೌಡರ ಕುಟುಂಬದ ಬಗ್ಗೆ ಎಷ್ಟೇ ಹೇಳಿದರೂ ತಪ್ಪೆ. ಅವರ ಕುಟುಂಬವನ್ನು ವಂಶ ಪಾರಂಪರ್ಯ ಸರ್ಕಾರ, ಒಂದೇ ಕುಟುಂಬದ ಸರ್ಕಾರ ಎನ್ನದೆ ಮತ್ತೆ ಏನಂತ ಕರೀಬೇಕು ಎಂದು ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪ ಟೀಕಿಸಿದರು.

ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು ಹೋಬಳಿಯಲ್ಲಿ ಬಿಜೆಪಿ ಅಭ್ಯರ್ಥಿ ಯೋಗಾ ರಮೇಶ್ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, “ದೇವೇಗೌಡ ಅವರ ಕುಟುಂಬದ ಮಧ್ಯೆ ಮುಖ ತೋರ್ಸೋಕೆ ಇಬ್ರಾಹಿಂನನ್ನು ಇಟ್ಟುಕೊಂಡಿದ್ದಾರೆ. ಇದಲ್ಲಾ ವ್ಯವಸ್ಥೆ” ಎಂದು ಲೇವಡಿ ಮಾಡಿದರು.

“ಒಂದೇ ಕುಟುಂಬದ ಕೈಯಲ್ಲಿ ಒಂದು ಪಕ್ಷ ಇರಬೇಕಾದರೆ, ಅಂತಹ ಕುಟುಂಬವನ್ನು ಬೆಂಬಲಿಸಬೇಕಾ. ಬಿಜೆಪಿ ಅಭ್ಯರ್ಥಿ ಯೋಗಾ ರಮೇಶ್‌ ಅವರು ಜಾತಿ ನೋಡಿಲ್ಲ. ಅವರು ಪಕ್ಷಕ್ಕಾಗಿ ದುಡಿದ ಒಬ್ಬ ʼರಾಷ್ಟ್ರಭಕ್ತʼ. ಎಲ್ಲರೂ ಸೈನಿಕರ ರೀತಿ ಕೆಲಸ ಮಾಡುವ ಮೂಲಕ ರಮೇಶ್ ಅವರನ್ನು ಗೆಲ್ಲಿಸಬೇಕು” ಎಂದು ಕರೆ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ರಾಮಸ್ವಾಮಿ ಅವರನ್ನು 1989ರಲ್ಲಿ ವಿಧಾನಸಭೆಗೆ ಬಂದಾಗಿನಿಂದ ಇಲ್ಲಿಯವರೆಗೂ ನೋಡುತ್ತಾ ಬಂದಿದ್ದೀನಿ. ಅವರು ಮಾತನಾಡುವಾಗ ‘ಸರಿಯಾದ ವ್ಯಕ್ತಿ, ಸರಿಯಾದ ಪಕ್ಷದಲ್ಲಿ ಇಲ್ವಲ್ಲಾ’ ಅನ್ನಿಸುತ್ತಿತ್ತು. ಸರಿಯಾದ ವ್ಯಕ್ತಿ ಬಿಜೆಪಿಗೆ ಬಂದಿದ್ದು ನಮ್ಮೆಲ್ಲರಿಗೂ ಭೀಮ ಬಲ ಬಂದಂತಾಗಿದೆ” ಎಂದು ಶ್ಲಾಘಿಸಿದರು.

ಈ ಸುದ್ದಿ ಓದಿದ್ದೀರಾ? ಅರಸೀಕೆರೆ ಕ್ಷೇತ್ರ | ಶಿವಲಿಂಗೇಗೌಡ-ಸಂತೋಷ್ ನಡುವೆ ನೇರ ಕದನ

ಮೋದಿಯನ್ನು ವಿಷಸರ್ಪ ಎಂದಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ ಈಶ್ವರಪ್ಪ, “ನಾವು ನಿಮಗೆಲ್ಲಾ ಗೌರವ ಕೊಡುತ್ತಿದ್ದೆವು. ನಿಮ್ಮ ಬಾಯಲ್ಲಿ ಇಂತಹ ಮಾತು ಬಂದ ಮೇಲೆ, ನೀವು ರಾಜಕೀಯ ನಿವೃತ್ತಿ ಪಡೆಯೋದೇ ಒಳ್ಳೆಯದು. ಖರ್ಗೆ ಹೇಳಿದ್ದು ತಪ್ಪೋ, ಸರಿಯೋ ಅನ್ನೋದನ್ನು ಜನರ ನಿರ್ಧಾರಕ್ಕೇ ಬಿಡುವೆವು” ಎಂದರು.

“ಮೋದಿ ಬಗ್ಗೆ ಖರ್ಗೆ ಹೇಳಿದ್ದು ಸರಿ ಅಂದರೆ ಕಾಂಗ್ರೆಸ್‌ಗೆ ಓಟು ಕೊಡಿ, ಅಯೋಗ್ಯದ ಮಾತು ಅನ್ನಿಸಿದರೆ ಬಿಜೆಪಿ ಬೆಂಬಲಿಸಿ” ಎಂದು ಮನವಿ ಮಾಡಿದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...