2025-26 ನೇ ಸಾಲಿನ ಮುಖ್ಯಮಂತ್ರಿಗಳ ಆಯ-ವ್ಯಯದಲ್ಲಿ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸುವ ಕುರಿತು ನೀಡಿರುವ ಘೋಷಣೆಯಂತೆ ಧಾರವಾಡ ಜಿಲ್ಲೆ ಹುಬ್ಬಳ್ಳಿಯ ನೃಪತುಂಗ ಬೆಟ್ಟ ಪ್ರವಾಸಿ ತಾಣವನ್ನು 5 ಕೋಟಿಗಳ ಅಂದಾಜು ಮೊತ್ತದಲ್ಲಿ ವಿವಿಧ ಪ್ರವಾಸಿ ಸೌಲಭ್ಯ, ಕಾಮಗಾರಿಗಳನ್ನು ಅಭಿವೃದ್ಧಿ ಪಡಿಸಲು ನಿರ್ಣಯಿಸಲಾಗಿದೆ.
ಈ ಸಂಬಂಧ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಸಿದ್ದಪಡಿಸಬೇಕಾಗಿದೆ. ಕಾರಣ ಐದು ಕೋಟಿ ಮೀರದಂತೆ ಜಿಎಸ್‍ಟಿ ಒಳಗೊಂಡ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಸಿದ್ದಪಡಿಸಿ ನೀಡಲು ಸಂಬಂಧಿಸಿದ ಅರ್ಹ ಸಂಸ್ಥೆ, ವ್ಯಕ್ತಿಗಳಿಂದ ಅಲ್ಪಾವಧಿ ದರಪಟ್ಟಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ: ಧಾರವಾಡ | 29 ಇಸ್ಪೀಟು ಆಟಗಾರರ ಬಂಧನ; ₹24,295 ನಗದು ಜಪ್ತಿ
ಆಸಕ್ತರು ತಮ್ಮ ದರಪಟ್ಟಿಯನ್ನು ಲಕೋಟೆಯಲ್ಲಿ ಅ.31ರ ಸಂಜೆ 4 ಗಂಟೆಯೊಳಗೆ ಧಾರವಾಡ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0836-2955522 ಗೆ ಸಂಪರ್ಕಿಸಬಹುದು ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





