ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರ ನಡುವೆ ಜಗಳವಾಗಿದ್ದು, ಕುಡಿದ ಅಮಲಿನಲ್ಲಿ ಚಾಕು ಇರಿದ ಘಟನೆ ನ. 21ರಂದು, ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.
ಅನಿಲ್ ಗೊಲ್ಲರ ಎಂಬುವಾತ ಫೈರೋಜ್ ಜಾಪ್ರಿ ಎಂಬಾತನ ಹೊಟ್ಟೆಯ ಭಾಗಕ್ಕೆ ಚಾಕು ಚುಚ್ಚಿ ಪರಾರಿಯಾಗಿದ್ದಾನೆ. ಚಾಕು ಇರಿದ ಅನಿಲ್ ಮೇಲೆ ಅನೇಕ ದೂರು ದಾಖಲಾಗಿದ್ದು, ಇಬ್ಬರೂ ಕಳುವು ಮಾಡುತ್ತಿದ್ದರೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ ಧಾರವಾಡ | ನ್ಯಾಯಾಂಗದ ವಿಶ್ವಾಸರ್ಹತೆ ಹೆಚ್ಚಿಸುವಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಪರಿಣಾಮಕಾರಿ: ನ್ಯಾ. ಬಿ.ಎಸ್.ಭಾರತಿ
ಚಾಕು ಚುಚ್ಚಿ ಪರಾರಿಯಾದ ಅನಿಲ್ ಅನ್ನು ಪೊಲೀಸರು ಹುಡುಕುತ್ತಿದ್ದು, ಗಾಯಗೊಂಡ ಫೈರೋಜ್ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾನೆ.





