ಹುಬ್ಬಳ್ಳಿಯ ಕಾಮಗಾರಿ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ಸಿನವರು ಮುಸ್ಲಿಂ ಒಲೈಕೆಗಾಗಿ ಕುರಾನ್ ಪಠಣ ಮಾತ್ರ ಮಾಡಿಸಿದ್ದಾರೆ ಎಂದು ಆರೋಪಿಸಿ ಶಾಸಕ ಅರವಿಂದ್ ಬೆಲ್ಲದ್’ರ ಸುಳ್ಳು ಹೇಳಿಕೆಯನ್ನು ಖಂಡಿಸಿ, ಮಾಜಿ ಕಾರ್ಪೊರೇಟರ್ ಹಾಗೂ ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ಪತ್ರಿಕಾಗೋಷ್ಠಿ ನಡೆಸಿ, ಕಾರ್ಯಕ್ರಮದಲ್ಲಿ ಕೇವಲ ಕುರಾನ್ ಪಠಣ ಅಷ್ಟೇ ಅಲ್ಲದೆ ವಿಘ್ನ ವಿನಾಶಕ ಗಣೇಶ ಸ್ತುತಿಯನ್ನು ಮಾಡಲಾಗಿದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಈ ಕುರಿತು ಮಾಜಿ ಕರ್ಪೂರೇಟರ್ ನಾಗರಾಜ ಗೌರಿ ಮಾತನಾಡುತ್ತಾ, ಸೆಪ್ಟೆಂಬರ್ 5 ರಂದು ಹುಬ್ಬಳ್ಳಿ-ದೇವರಗುಡಿಹಾಳ ಮುಖ್ಯ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಕುರಾನ್ ಪಠಣ ಮಾತ್ರ ಪಠಿಸಿದ್ದಾರೆ ಎಂದು ಆರೋಪಿಸಿ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಹೋಮ ಹವನ ಮಾಡಿಸಿದ್ದಾರು. ಮತ್ತು ತಮ್ಮ ಎಕ್ಸ್ ಖಾತೆಯಲ್ಲಿ ಕಾಂಗ್ರೆಸ್ ಮುಸ್ಲಿಂ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಹಂಚಿಕೊಂಡಿದ್ದರು. ಆ ಕಾರ್ಯಕ್ರಮದಲ್ಲಿ ಮೊದಲು ವಿಘ್ನ ವಿನಾಶಕ ಗಣೇಶ ಸ್ತುತಿಗೈದು ನಂತರ ಕುರಾನ್ ಪಠಣೆ ಮಾಡಿಸಲಾಗಿತ್ತು. ಈ ಕಾರ್ಯಕ್ರಮವು ಭಾವೈಕ್ಯತೆಯಿಂದ ಕೂಡಿತ್ತು. ಆದರೆ ಕಾರ್ಯಕ್ರಮದಲ್ಲಿ ಕೇವಲ ಕುರಾನ್ ಪರಣೆ ಮಾಡಿದ್ದಾರೆಂದು ಶಾಸಕ ಅರವಿಂದ ಬೆಲ್ಲದ ಅವರು ಸುಳ್ಳನ್ನು ಪ್ರಚಾರ ಮಾಡುತ್ತಾ, ಹಿಂದೂ ಮುಸ್ಲಿಮರ ನಡುವಿನ ಸಾಮರಸ್ಯವನ್ನು ಹಾಳುಗೆಡವುತ್ತಿದ್ದಾರೆ.
ಶಾಸಕರು ಸಮಾಜದ ಸ್ವಾಸ್ಥ್ಯವನ್ನು ಹದಗೆಡಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಹಲವು ವರ್ಷಗಳಿಂದ ಅವರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣುತ್ತಿಲ್ಲ. ಇದೀಗ ಅವರು ವಿಸಿಟಿಂಗ್ ಕಾರ್ಡ್ ಶಾಸಕರು ಆಗಿದ್ದಾರೆ. ಅವರು ಅಭಿವೃದ್ಧಿ ಕಾರ್ಯಗಳನ್ನು ಮಾಡದಿದ್ದರೂ ಪರವಾಗಿಲ್ಲ ಆದರೆ ಹಿಂದೂ ಮುಸ್ಲಿಮರನ್ನು ಹೊಡೆಯುವ ಸಾಹಸಕ್ಕೆ ಬರುವುದು ಬೇಡ. ಮತ್ತು ಕಾಂಗ್ರೇಸ್ ಸರ್ಕಾರದಿಂದ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗೆ ಅಡ್ಡಗಾಲು ಹಾಕುತ್ತಿದ್ದಾರೆ. ಅವರಿಂದ ಅಭಿವೃದ್ಧಿ ಕಾರ್ಯಗಳು ಮಾಡಲು ಸಾಧ್ಯವಾಗದಿದ್ದರೆ ಸುಮ್ಮನೆ ಇದ್ದುಬಿಡಲಿ ಎಂದರು.
ಇದೇ ವೇಳೆ ಹಿರಿಯ ಸಮಾಜ ಸೇವಕ ಹಾಗೂ ಹಿರಿಯ ಮುಖಂಡ ಐ. ಎಮ್. ತೊರಗಲ್ ಮಾತನಾಡಿ, ಶಾಸಕ ಅರವಿಂದ್ ಬೆಲ್ಲದರು ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತರಲಾಗದೆ, ಕ್ಷೇತ್ರದ ಜನತೆಯ ಋಣ ತೀರಿಸಲಾದೆ, ಹೊಟ್ಟೆ ಕಿಚ್ಚಿನಿಂದ ಇಂತಹ ಕಾರ್ಯ ಮಾಡುತ್ತಾ ಅವಹೇಳನ ಹೇಳಿಕೆ ನೀಡುತ್ತಿದ್ದಾರೆ. ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ ಕ್ಷೇತ್ರದ ಜನರ ಋಣ ತೀರಿಸದೆ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರ ಹೇಳಿಕೆಯಿಂದ ನಮಗೆಲ್ಲ ತುಂಬಾ ನೋವು ಉಂಟಾಗಿದೆ. ಯಾರದ್ದು ಮಾತನ್ನು ಕೇಳಿ ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡುವ ಕಾರ್ಯಕ್ಕೆ ಮುಂದಾಗಿದ್ದರೋ ಗೊತ್ತಿಲ್ಲ. ಅವರ ತಂದೆಯವರಾದ ಚಂದ್ರಕಾಂತ್ ಬೆಲ್ಲದವರು, ಎಲ್ಲರನ್ನೂ ಒಳಗೊಳ್ಳುವ ಮನೋಭಾವರಾಗಿದ್ದರು. ಆ ದೇವರು ಅವರಿಗೆ ಒಳ್ಳೆಯ ಬುದ್ದಿ ನೀಡಲಿ ಎಂದರು.
ಇನ್ನು ಗಜಾನನ ಮಂಡಳಿಯ ರವಿ ಮಾತನಾಡಿ, ಅಂದು ನಡೆದ ಕಾಮಗಾರಿ ಕಾರ್ಯಕ್ರಮದಲ್ಲಿ ಮೊದಲಿಗೆ ಗಣೇಶನ ಹಾಡನ್ನು ಹಾಡಿಸಿದ್ದೆವು. ನಂತರ ಕುರಾನ್ ಪಠಣ ಮಾಡಿಸಲಾಗಿದೆ. ಒಂದು ಒಳ್ಳೆಯ ಕೆಲಸಕ್ಕೆ ದೇವರನ್ನು ಸ್ಮರಿಸುವುದು ವಾಡಿಕೆ. ಸಮಾಜದಲ್ಲಿ ಎಲ್ಲ ಸಮುದಾಯದ ಜನರು ಇರುವುದರಿಂದ ಎಲ್ಲರಿಗೂ ಒಂದು ನಂಬಿಕೆ ಇರುತ್ತದೆ. ಮತ್ತು ಅವರವರ ನಂಬಿಕೆ ಅವರಿಗೆ ಇರುತ್ತದೆ. ಹೀಗಾಗಿ ಹಿಂದುಗಳಿಗಾಗಿ ಗಣೇಶ ಸ್ತುತಿ, ಮುಸಲ್ಮಾನರಿಗಾಗಿ ಕುರಾನ್ ಪಠಣ ಮಾಡಿಸಲಾಗಿದೆ. ಅದನ್ನು ಮರೆಮಾಚಿ ಕೇವಲ ಕುರಾನ್ ಓಡಿಸಿದ್ದಾರೆ ಎಂದು ಬೇಕಂತಲೇ ಹೈಲೇಟ್ ಆಗುವ ಸಲುವಾಗಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಅರವಿಂದ್ ಬೆಲ್ಲದ ಅವರು ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು, ಬೆಂಬಲಿಗರು ಇದ್ದರು.





