ಮುಂಬೈನಿಂದ ಹಾವೇರಿ ಕಡೆಗೆ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಹುಬ್ಬಳ್ಳಿಯ ಕಸಬಾಪೇಟ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ ಧಾರವಾಡ | 16 ವರ್ಷದ ಬಾಲಕನ ಶವ ಪತ್ತೆ; ಕೊಲೆ ಶಂಕೆ!
ಪರೀಜ್ ಖಾನ್ ಮತ್ತು ಸಲ್ಮಾನ್ ಖಾನ್ ಇಬ್ಬರು ಹುಬ್ಬಳ್ಳಿ ಮಾರ್ಗವಾಗಿ ಹಾವೇರಿ ಕಡೆಗೆ ಗಾಂಜಾ ಸಾಗಿಸುತ್ತಿದ್ದ ಸಂದರ್ಭದಲ್ಲಿ ಕಸಬಾಪೇಟ ಠಾಣಾ ಪೊಲೀಸರು ಇರ್ವರನ್ನು ಬಂಧಿಸಿ ಅವರಿಂದ, 15.4 ಕೆಜಿ ಗಾಂಜಾ, 3 ಮೊಬೈಲ್ ಫೋನ್, ಕೃತಕ್ಕೆ ಬಳಸಿದ ಒಂದು ಕಾರ್ ವಶಪಡಿಸಿಕೊಂಡಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.





