ತಾಯಿಯ ಮನಸ್ಸು ಎಷ್ಟೇ ಸುಟ್ಟರೂ ಮಕ್ಕಳ ಆನಂದದಲ್ಲಿರುತ್ತಾಳೆ. ತಾಯಿಯಿದ್ದಾಗ ಭಗವದ್ಗೀತೆಯೂ ಬೇಡ ಅಂತಾ ಪಿ. ಲಂಕೇಶ್. ಮೊಬೈಲ್, ಟಿವಿ ಎನ್ನುವ ಯಂತ್ರಗಳು ಕ್ಷಣುಕ ಸುಖ ಕೊಟ್ಟರೂ ಪ್ರಯೋಜನವಿಲ್ಲ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅವ್ವ ಸೇವಾ ಟ್ರಸ್ಟ್‌ನ ಸಂಯುಕ್ತ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಪ್ರೌಢಶಾಲೆಯಲ್ಲಿ ಅವ್ವನೆಂಬ ಅಗೋಚರ ಶಕ್ತಿ’ ಎಂಬ ವಿಷಯದ ಮೇಲೆ ಏರ್ಪಡಿಸಿದ್ದ ಉಪನ್ಯಾಸ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಎಸ್‌ಜೆಎಂವಿಎಸ್ ಮಹಾವಿದ್ಯಾಲಯದ ಸಹಪ್ರಾದ್ಯಾಪಕಿ ಡಾ. ಸುಪ್ರೀಯಾ ಮಲಶೆಟ್ಟಿ ಮಾತನಾಡಿದರು.
‘ಅವ್ವನೆಂಬ ಅಗೋಚರ ಶಕ್ತಿ’ ವಿಚಾರವಾಗಿ ಮಾತನಾಡುತ್ತಾ, ತಾಯಿಯ ಮನಸ್ಸು ಎಷ್ಟೇ ಸುಟ್ಟರೂ ಮಕ್ಕಳ ಆನಂದದಲ್ಲಿರುತ್ತಾಳೆ. ತಾಯಿಯಿದ್ದಾಗ ಭಗವದ್ಗೀತೆಯೂ ಬೇಡ ಅಂತಾ ಪಿ. ಲಂಕೇಶ್. ಮೊಬೈಲ್, ಟಿವಿ ಎನ್ನುವ ಯಂತ್ರಗಳು ಕ್ಷಣುಕ ಸುಖ ಕೊಟ್ಟರೂ ಪ್ರಯೋಜನವಿಲ್ಲ. ತಾಯಿಯನ್ನು ಕಳೆದುಕೊಂಡಾಗಲೇ ಅವಳ ಮಹತ್ವ ತಿಳಿಯುತ್ತದೆ. ತಾಯಿ ಹೋರಮೇಲೆ ಅದೆಷ್ಟೊ ಕುಟುಂಬಗಳು ಕಳಚಿ ಬಿದ್ದಿರುವ ಉದಾಹರಣೆಗಳಿವೆ. ಪ್ರಸ್ತುತದಲ್ಲಿ ಎಲ್ಲವೂ ಇದೆ. ಆದರೆ; ಸಮಯವಿಲ್ಲ. ಮೊಬೈಲ್ ಬಂದಮೇಲೆ ಜಗತ್ತು ಎಷ್ಟೋ ಬದಲಾಗಿದೆ. ನಿಸ್ವಾರ್ಥತೆಯ ಮನಸ್ಸು ತಾಯಿಯಲ್ಲಿ ಕಾಣಲು ಮಾತ್ರ ಸಾಧ್ಯ ಎನ್ನುತ್ತಾ ಭಾವುಕರಾದರು. ಇರುವತನಕ ತಾಯಿಯನ್ನು ಎಂದಿಗೂ ಮರೆಯಬಾರದು. ಹೆಣ್ಣು ಮಕ್ಕಳು ಕೂಡಾ ಮದುವೆ ಆದಮೇಲೆ ಅತ್ತೆಯನ್ನು ಅಮ್ಮ ಎಂಬ ಭಾವದಿಂದ ಬದುಕಬೇಕು. ತಂದೆ ತಾಯಿಗಳಿಗೆ ಗೌರವಕೊಟ್ಟು ನಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಕೊಟ್ಟರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಹಾಪೌರರಾದ ಜ್ಯೋತಿ ಪಾಟೀಲ ಮಾತನಾಡಿ, ಅವ್ವ ಎಂದರೇನೆ ಒಂದು ರೀತಿಯ ಸಂತೋಷ. ವೀರಯೋಧನ ಮಗಳಾಗಿರುವುದು ನನ್ನ ಹೆಮ್ಮೆ. ಶಿಕ್ಷಣದಿಂದಲೇ ಏನಾದರೂ ಸಾಧಿಸಿಲು ಸಾಧ್ಯ. ವಿದ್ಯಾರ್ಥಿಗಳು ಕಲಿಸಿದ ಶಾಲೆ ಮತ್ತು ಹೆತ್ತವರ ಹೆಸರು ತರಬೇಕು. ಶಿಕ್ಷಕರು ಮಕ್ಕಳನ್ನು ಅದ್ಭುತ ಪ್ರಜೆಗಳನ್ನಾಗಿಸಲು ಪ್ರಯತ್ನ ಪಡುತ್ತಾರೆ. ನಮ್ಮ ಸಾಧನೆಯನ್ನು ನೋಡಿ ನಿಮ್ಮ ಅಪ್ಪ ಅಮ್ಮ ಯಾರು? ಎಂದು ಕೇಳುವಂತಾಗಬೇಕು. ಇತ್ತಿಚೆಗೆ ಮೊಬೈಲ್ ನೋಡಿ ಹತ್ತವರಿಗೆ, ಗುರುಗಳಿಗೆ ಗೌರವ ಕೊಡುವ ಪ್ರವೃತ್ತಿ ಕಡಿಮೆ ಆಗುತ್ತಿದೆ ಎಂದರು. ಕಷ್ಟಪಟ್ಟು ಓದಿದರೆ ಮುಂದೆ ಬರುತ್ತೀರಿ ಎಂದರು.
ವಸಂತ ಹೊರಟ್ಟಿ ಮಾತನಾಡಿ, ಗೌರಮ್ಮ ಹೊರಟ್ಟಿ ಜನಿಸದೆ ಇದ್ದಿದ್ದರೆ ಬಸವರಾಜ ಹೊರಟ್ಟಿ ಅಂತಹ ನಾಯಕರು ಹುಟ್ಟುತ್ತಿರಲಿಲ್ಲ. ಮತ್ತು ಅವರು ರಾಜಕೀಯಕ್ಕೆ ಬರುವ ಉದ್ದೇಶವೇ ಇರಲಿಲ್ಲ. ನಮಗೆ ಸಿಕ್ಕ ಶಿಕ್ಷಣ, ಗೌರವ ಇವೆಲ್ಲ ನಮ್ಮ ಅಜ್ಜಿಯ ಕೊಡುಗೆಯಾಗಿದೆ. ಎಲ್ಲರೂ ತಾಯಿಯಾಗಲಿ, ಅಜ್ಜಿಯನ್ನಾಗಲಿ ನಿರ್ಲಕ್ಷ್ಯ ಮನೋಭಾವದಿಂದ ನೋಡಬೇಡಿ. ಅವರ ಮಾತನ್ನು ಕೇಳಿರಿ. ಅವರು ಅನುಭವದಿಂದ ಹೇಳುತ್ತಿರುತ್ತಾರೆ. ಅವ್ವ ಟ್ರಸ್ಟ್ ಒಳ್ಳೆಯ ಕಾರ್ಯ ಮಾಡುತ್ತಿದೆ. ಎಲ್ಲರನ್ನೂ ಗೌರವಿಸುವ ಗುಣ ನಮ್ಮಲ್ಲಿ ಬರಬೇಕು ಎಂದರು.
ಲಿಂಗರಾಜ ಅಂಗಡಿ ಮಾತನಾಡಿ, ತಾಯಿಂದಿರು ತಮ್ಮ ಜೀವ ಒತ್ತೆಯಿಟ್ಟು ಮಕ್ಕಳನ್ನು ಸಲಹುತ್ತಾಳೆ. ಮತ್ತು ಹೆಂಡತಿಯು ಕೂಡಾ ತಾಯಿ ಇದ್ದಂತೆಯೆ. ಆದ್ಧರಿಂದ ಹೆಣ್ಷು ಮಕ್ಕಳ ಮನಸ್ಸನ್ನು ನೋಯಿಸಬಾರದು. ಕೆಟ್ಟ ಆಲೋಚನೆಗಳು ಇರಬಾರದು.
ಸನ್ಮಾನ ಸ್ವೀಕರಿಸಿದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಡಾ. ಜಯಶ್ರೀ ಶಿವಾನಂದ ತಾಯಿ ಕೊಡುವ ಮೌಲ್ಯ ಭಗವದ್ಗೀತೆ, ಕುರಾನ್, ಬೈಬಲ್ ಯಾವ ಗ್ರಂಥವೂ ಕೊಡುವುದಿಲ್ಲ. ಒಂದು ದಿನದ ಮದರ್ಸ್ ಡೇ ಬೇಡ. ತಾಯಂದಿರು ಯಾವತ್ತೂ ಸುಳ್ಳು ಹೇಳು, ಕಳ್ಳತನ ಮಾಡಲು ಹೇಳುವುದಿಲ್ಲ. ನನಗೆ ಕೊಟ್ಟ ವಿದ್ಯೆ ಶಾಲೆಯಿರಬಹುದು. ಆದರೆ ತಾಯಿ ಜೀವನದ ಪಾಠ ಕೊಟ್ಟಿದ್ದಾಳೆ. ಕುಂಬಾರ ಮಡಿಕೆ ಮಾಡುವ ರೀತಿಯಲ್ಲಿ ತಾಯಿ ತಿದ್ದುತ್ತಾಳೆ. ನೀವೆಷ್ಟೆ ಎತ್ತರಕ್ಕೆ ಹೋದರೂ, ಯಾವುದೇ ಹುದ್ದೆಯಲ್ಲಿದ್ದರೂ ತಾಯಿ ಬಾಲ್ಯದಲ್ಲಿ ಕೊಟ್ಟಿರುವ ನೈತಿಕ ಬುತ್ತಿಗಂಟು ಮಾತ್ರ ಕೈಹಿಡಿಯುತ್ತದೆ. ಯಶಸ್ಸನ್ನು ಕಾಣಬೇಕಾದರೆ ತ್ಯಾಗದ ಮನೋಭಾವ ಇರಬೇಕು. ಹೆರಿಗೆಯ ನೋವಿನ ಮುಂದೆ ಯಾವ ನೋವು ಇಲ್ಲ. ಆದರೂ ತಾಯಿ ಮಕ್ಕಳನ್ನು ಪಡೆಯಲು ಖುಷಿಪಡುತ್ತಾಳೆ. ಮಾತೃಪ್ರಧಾನ ಸಮಾಜದಲ್ಲಿ ಅನ್ಯೊನ್ಯತೆ ಇರುತ್ತದೆ ಎಂದು ಒಂದು ಸಂಶೋಧನೆ ಹೇಳುತ್ತದೆ ಎಂದು ಹೇಳಿದರು.
ಇದನ್ನೂ ಓದಿ ಧಾರವಾಡ | ಮಹಾ ಪರಿನಿರ್ವಾಣ ದಿನದ ನಿಮಿತ್ತ ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಚನೆ
ಶಶಿ ಸಾಲಿ, ವಿದ್ಯಾ ವಂಟಮುರಿ ವೇದಿಕೆ ಮೇಲಿದ್ದರು. ಧಾರವಾಡಶೆಟ್ಟರ್ ವಂದಿಸಿದರು. ಕೌಜಲಗಿ ನಿರೂಪಿಸಿದರು.





